ನಾನು ಹಿಟ್ಲರ್-ನೆಪೋಲಿಯನ್‍ಗಿಂತಲೂ ಸ್ಮಾರ್ಟ್ ಲೀಡರ್ : ಪಾಕ್ ಪಿಎಂ ಇಮ್ರಾನ್ ಖಾನ್

ಈ ಸುದ್ದಿಯನ್ನು ಶೇರ್ ಮಾಡಿ

Imran-Khan----011

ಇಸ್ಲಾಮಾಬಾದ್, ನ. 18- ನಾಝಿ ಮತ್ತು ಫ್ಯಾಸಿಸ್ಟ್ ಮುಖಂಡರಾದ ಹಿಟ್ಲರ್, ನೆಪೋಲಿಯನ್‍ರಿಗಿಂತಲೂ ತಾನು ಸ್ಮಾರ್ಟ್ ನಾಯಕ ಎಂದು ಪಾಕಿಸ್ತಾನ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ.  ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ತದ್ವಿರುದ್ಧ ನಿಲುವು ಕೈಗೊಂಡ ಅವರ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇ್ರಮಾನ್ ಖಾನ್ ತಮ್ಮ ನಿಲುವನ್ನು ಈ ರೀತಿ ಸಮರ್ಥಿಸಿಕೊಂಡಿದ್ದಾರೆ.

ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಆತ ಒಳ್ಳೆಯ ನಾಯಕನಾಗಲಾರ. ಹಿಟ್ಲರ್ ಹಾಗೂ ನೆಪೋಲಿಯನ್ ಕೂಡಾ ತನ್ನ ನಿರ್ಧಾರಗಳಲ್ಲಿ ಯು ಟರ್ನ್ ತೆಗೆದುಕೊಂಡಿದ್ದರೆ ಯುದ್ಧದಲ್ಲಿ ಅಷ್ಟೊಂದು ನಷ್ಟ ಅನುಭವಿಸುತ್ತಿರಲಿಲ್ಲ. ನಾಯಕರು ಸದಾ ಯು ಟರ್ನ್‍ಗೆ ಸಿದ್ಧರಿರಬೇಕು ಎಂದಿದ್ದಾರೆ.

ಖಾನ್ ಹೇಳಿಕೆಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಾಯಕ ಸೈಯದ್ ಖುರ್ಷಿದ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದು, ಹಿಟ್ಲರ್ ಒಬ್ಬ ಸರ್ವಾಧಿಕಾರಿ. ಆತನ ಉದಾಹರಣೆ ನೀಡುವ ಮೂಲಕ ಖಾನ್ ಕೂಡಾ ತಾನು ಹಿಟ್ಲರ್‍ನಿಂದ ಪ್ರೇರಣೆ ಪಡೆದಿದ್ದನ್ನು ಸಾಬೀತು ಮಾಡಿದ್ದಾರೆ. ಜತೆಗೆ ಆತನಂತೆ ತಾವು ಕೂಡಾ ಸರ್ವಾಧಿಕಾರಿಯಾಗಲು ಬಯಸಿದಂತಿದೆ ಎಂದು ಲೇವಡಿ ಮಾಡಿದ್ದಾರೆ.

ಹಿಟ್ಲರ್ ಮತ್ತು ನೆಪೋಲಿಯನ್ ನೆನಪು ಮಾಡಿಕೊಂಡಿರುವ ನೀವು ರಷ್ಯಾ ವಿರುದ್ಧ ದಾಳಿ ನಡೆಸುತ್ತೀರಾ ಎಂದು ಮುಸ್ಲಿಂ ಲೀಗ್-ನವಾಝ್ ಮುಖಂಡ ಖ್ವಾನಾ ಮುಹಮ್ಮದ್ ಆಸಿಫ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

Facebook Comments

Sri Raghav

Admin