ಮಹಿಳಾ ಪೇದೆಯನ್ನು ರೇಪ್ ಮಾಡಿ, ವಿಡಿಯೋ ಮಾಡಿದ ಸಬ್‍ ಇನ್ಸ್ಪೆಕ್ಟರ್..?

ಈ ಸುದ್ದಿಯನ್ನು ಶೇರ್ ಮಾಡಿ

Rape---01

ಮುಂಬೈ, ನ.18- ತಂಪುಪಾನೀಯದಲ್ಲಿ ಮತ್ತು ಬೆರೆಸಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳಾ ಕಾನ್‍ಸ್ಟೇಬಲ್‍ವೊಬ್ಬರು ನವಿ ಮುಂಬೈನ ಪೊಲೀಸ್ ಕ್ರೈಮ್ ಬ್ರಾಂಚ್‍ನ ಸಬ್‍ಇನ್ಸ್‍ಪೆಕ್ಟರ್ ವಿರುದ್ದ ದೂರು ದಾಖಲಿಸಿದ್ದಾರೆ.

ಸಬ್‍ಇನ್‍ಪೆಕ್ಟರ್ ಅಮಿತ್ ಶೇಲಾರ್ ಕಳೆದ ಮಾರ್ಚ್‍ನಲ್ಲಿ ತನಗೆ ತಂಪುಪಾನೀಯದಲ್ಲಿ ಮತ್ತು ಬೆರೆಸಿ ಅತ್ಯಾಚಾರ ಮಾಡಿದ್ದು,ಘಟನೆಯನ್ನು ವಿಡಿಯೋ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಶೇಲಾರ್ ತನ್ನ ಮೇಲೆ ಸಿಬಿಡಿ ಬೇಲಾಪುರ, ಪನ್ವೇಲ್, ಕಾಮೋಠೆ ಹಾಗೂ ಖಾರ್ಗರ್‍ನಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ ಮಹಿಳೆ ದೂರಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಹಾಗೂ ಸಂತ್ರಸ್ತೆ 2010ರಿಂದ ಪರಸ್ಪರ ಪರಿಚಿತರು. ಇಬ್ಬರೂ ಒಂದೇ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin