‘ಸೋನಿಯಾಗಾಗಿ ಸೀತಾರಾಮ್ ಕೇಸರಿಯವರನ್ನು ಕಿತ್ತೆಸೆದರು’ : ಮೋದಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಮಹಾಸಮುಂದ್ (ಛತ್ತೀಸ್‍ಗಢ), ನ.18- ನೆಹರು ಮತ್ತು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಪಕ್ಷದ ನಾಯಕ ಪಿ.ಚಿದಂಬರಂ ನೀಡಿರುವ 15 ಕಾಂಗ್ರೆಸ್ ನಾಯಕರ ಪಟ್ಟಿ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ನ.20ರಂದು ಛತ್ತೀಸ್‍ಗಢದಲ್ಲಿ ನಡೆಯಲಿರುವ ಎರಡನೆ ಹಂತದ ವಿಧಾನಸಭಾ ಚುನಾವಣೆಗಾಗಿ ಇಂದು ಮಹಾಸಮುಂದ್‍ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಸೀತಾರಾಮ್ ಕೇಸರಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ನೀಡಿತ್ತು. ಆದರೆ, ಅವರು ದಲಿತರೆಂಬ ಕಾರಣಕ್ಕಾಗಿ ಐದು ವರ್ಷದ ಅವಧಿ ಪೂರೈಸಲು ಬಿಡಲಿಲ್ಲ. ಸೋನಿಯಾಗಾಂಧಿ ಅವರನ್ನು ಅಧ್ಯಕ್ಷರನ್ನಾಗಿಸಲು ಕೇಸರಿ ಅವರನ್ನು ಕಿತ್ತೆಸೆಯಲಾಯಿತು ಎಂದು ಮೋದಿ ಆರೋಪಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿ ಅದರಲ್ಲೂ ಒಂದೇ ಕುಟುಂಬದ ಕೈಯಲ್ಲಿದೆ. ಈ ಕುಟುಂಬ ನಾಲ್ಕು ತಲೆಮಾರುಗಳ ಕಾಲ ಸರ್ಕಾರ ನಡೆಸಿದೆ. ಆದರೆ, ಜನರಿಗಿಂತ ಕುಟುಂಬಕ್ಕೇ ಹೆಚ್ಚು ಪ್ರಯೋಜನವಾಗಿದೆ ಎಂದು ಮೋದಿ ಟೀಕಿಸಿದರು.  2008ರಲ್ಲಿ ರೈತರ ಸಾಲಮನ್ನಾ ಮಾಡಿರುವುದಾಗಿ ಕಾಂಗ್ರೆಸ್ ಪಕ್ಷ ಕೊಚ್ಚಿಕೊಳ್ಳುತ್ತಿದೆ. ಆದರೆ, ಆಗಿನ ಸರ್ಕಾರ ರೈತರ ಬದಲು ಉಳ್ಳವರಿಗೇ ಹೆಚ್ಚಿನ ಅನುಕೂಲ ಕಲ್ಪಿಸಿತು ಎಂದು ಮೋದಿ ಆರೋಪಿಸಿದರು.

Facebook Comments

Sri Raghav

Admin