ಮೂವರು ಬೈಕ್ ಕಳ್ಳರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arest02ಮೈಸೂರು,ನ.18- ನಕಲಿ ಕೀ ಬಳಸಿ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಮೂವರು ಬೈಕ್ ಕಳ್ಳರನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿ ಮೂರು ಬೈಕ್‍ಗಳನ್ನು ಶಪಡಿಸಿಕೊಂಡಿದ್ದಾರೆ.  ಶಾಂತಿನಗರ ನಿವಾಸಿಗಳಾದ ಇಫ್ರಾನ್(20), ನಯಿಮ್(19), ತಬ್ರೇಜ್(22) ಬಂಧಿತ ಆರೋಪಿಗಳು.  ಇವರು ಮನೆ ಮುಂದೆ ನಿಲ್ಲಿಸಿದಂತಹ ಬೈಕ್‍ಗಳನ್ನು ನಕಲಿ ಕೀಗಳನ್ನು ಬಳಸಿ ಕಳ್ಳತನ ಮಾಡಿ ಬೇರೆಡೆ ಮಾರಾಟ ಮಾಡುತ್ತಿದ್ದರು.  ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಲಕ್ಷ ಮೌಲ್ಯದ ಮೂರು ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments