ಇಂದಿನ ಪಂಚಾಗ ಮತ್ತು ರಾಶಿಫಲ (18-11-2018 – ಭಾನುವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ ; ಮನುಷ್ಯನು ಕಷ್ಟಪಟ್ಟಾದರೂ ಧರ್ಮವನ್ನು ಅಂದರೆ ಒಳ್ಳೆಯ ಕೆಲಸವನ್ನು ಸಾಧಿಸಬೇಕು. ರಾಜ್ಯಸಂಪತ್ತು ಹಾವಿನ ನಾಲಗೆಗಳಂತೆ ಅನಿತ್ಯ, ಚಂಚಲ. ಆದುದರಿಂದ ಅರಸನು ಚೆನ್ನಾಗಿ ಪ್ರಜೆಗಳನ್ನು ನೋಡಿಕೊಳ್ಳಬೇಕು. ಈ ಧರ್ಮದಿಂದ ಅವನು ಸತ್ತಮೇಲೂ ಅವನ ಒಳ್ಳೆಯ ಗುಣಗಳು ಉಳಿಯುತ್ತವೆ.
-ಕರ್ಣಭಾರ

Rashi-Bhavishya--01

# ಪಂಚಾಂಗ : ಭಾನುವಾರ, 18.11.2018
ಸೂರ್ಯ ಉದಯ ಬೆ.06.19 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಮ.02.29 / ಚಂದ್ರ ಅಸ್ತ ರಾ,.02.42
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಶುಕ್ಲ ಪಕ್ಷ / ತಿಥಿ : ದಶಮಿ (ಮ.01.34)
ನಕ್ಷತ್ರ:  ಪೂರ್ವಾಭಾದ್ರ (ಸಾ.04.31) / ಯೋಗ: ಹರ್ಷಣ (ರಾ.07.01)
ಕರಣ: ಗರಜೆ-ವಣಿಜ್ (ಮ.01.34-ರಾ.02.08)
ಮಳೆ ನಕ್ಷತ್ರ: ವಿಶಾಖ   / ಮಾಸ: ವೃಶ್ಚಿಕ / ತೇದಿ: 03

Rashi-Bhavishya--01# ರಾಶಿ ಭವಿಷ್ಯ 
ಮೇಷ : ಅಪರಿಚಿತ ಊರು ಅಥವಾ ಹೊಸ ಸ್ಥಳದಲ್ಲಿ ಅನಿರೀಕ್ಷಿತ ಬೆಂಬಲ ಪಡೆಯುವಿರಿ
ವೃಷಭ : ವಿರೋಧಿಗಳನ್ನು ನಗುಮೊಗದಿಂದಲೇ ಗೆಲ್ಲುವ ದಾರಿ ಕಂಡುಕೊಳ್ಳಿ. ದೂರ ಪ್ರಯಾಣ
ಮಿಥುನ: ಸುಖಾಸುಮ್ಮನೆ ಮಾಡದೆ ಇರುವ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುವುದು
ಕಟಕ : ಪ್ರಶಂಸೆ, ಗೌರವ, ಆದರಗಳನ್ನು ಪಡೆಯುವಿರಿ
ಸಿಂಹ: ಪರರು ನಿಮ್ಮ ಮನಸ್ಸಿಗೆ ನೋವಾಗುವಂತಹ ಮಾತುಗಳನ್ನು ಆಡುವರು
ಕನ್ಯಾ: ದೂರದ ಊರಿಗೆ ಪ್ರವಾಸ ಕಾರ್ಯಕ್ರಮವೊಂದು ನಿಶ್ಚಯವಾಗುವುದು
ತುಲಾ: ಆಹಾರ-ವಿಹಾರಗಳ ಬಗ್ಗೆ ಎಚ್ಚರದಿಂದ ಇರಿ
ವೃಶ್ಚಿಕ: ಪ್ರಶಂಸೆಯ ಮಾತುಗಳಿಂದ ಹಿಗ್ಗದಿರಿ
ಧನುಸ್ಸು: ನಿಮ್ಮ ಗೌರವಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸಿ
ಮಕರ: ಮನಸ್ಸಿನಲ್ಲಿ ಬೇರೆಯವರ ಬಗ್ಗೆ ಅನು ಮಾನದ ಹುತ್ತ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ
ಕುಂಭ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು
ಮೀನ: ವ್ಯಾಪಾರವು ಸಾಕಷ್ಟು ತೃಪ್ತಿ ನೀಡಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments