ನ್ಯೂಜೆರ್ಸಿಯಲ್ಲಿ ತೆಲಂಗಾಣ ಮೂಲದ ವ್ಯಕ್ತಿಯನ್ನು ಗುಂಡಿಟ್ಟು ಕೊಂದ 16 ವರ್ಷದ  ಬಾಲಕ

ಈ ಸುದ್ದಿಯನ್ನು ಶೇರ್ ಮಾಡಿ

Telangana--1

ನ್ಯೂಯಾರ್ಕ್, ನ.18-ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಗಳ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಆತಂಕದ ವಾತಾವರಣದ ನಡುವೆಯೇ ತೆಲಂಗಾಣ ಮೂಲದ 61 ವರ್ಷದ ವ್ಯಕ್ತಿಯನ್ನು 16ರ ಬಾಲಕನೊಬ್ಬ ಗುಂಡು ಹಾರಿಸಿ ಕೊಂದಿರುವ ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ.

ಸುನಿಲ್ ಎಲ್ಡಾ(61) ಬಾಲಕನ ಗುಂಡೇಟಿಗೆ ಬಲಿಯಾದ ವ್ಯಕ್ತಿ ಎಂದು ವೆಂಟ್ನೋರ್ ಸಿಟಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನ.15ರಂದು ರಾತ್ರಿ ವೆಂಟ್ನೋರ್ ಸಿಟಿಯಲ್ಲಿನ ಸುನಿಲ್ ಅವರ ಅಪಾರ್ಟ್‍ಮೆಂಟ್ ಹೊರಗೆ ಈ ಕೃತ್ಯ ನಡೆದಿದೆ. ಪಾದಚಾರಿ ಮಾರ್ಗದಲ್ಲಿ ತೀವ್ರ ಗುಂಡೇಟಿನಿಂದ ಬಿದ್ದಿದ್ದ ಅವರು ಪೊಲೀಸರು ಸ್ಥಳಕ್ಕೆ ಧಾವಿಸುವುದಕ್ಕೂ ಮುನ್ನವೇ ಮೃತಪಟ್ಟರು.

ಈ ಘಟನೆ ನಂತರ ಸುನಿಲ್ ಅವರ ಸಬಾರು ಫಾರೆಸ್ಟರ್ ಕಾರು ನಾಪತ್ತೆಯಾಗಿತ್ತು. ನಂತರ ಅದನ್ನು ಅಟ್ಲಾಂಟಿಕ್ ಸಿಟಿ ಪೊಲೀಸರು ಪತ್ತೆ ಮಾಡಿದರು. ನಂತರ ಸಿಸಿಟವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ನಂತರ ಹಂತಕನ ಜಾಡು ಹಿಡಿದ ಪೊಲೀಸರು 16 ವರ್ಷದ ಬಾಲಕನ್ನು ವಶಕ್ಕೆ ತೆಗೆದುಕೊಂಡರು. ಬಾಲಾಪರಾಧಿ ವಿರುದ್ಧ ಕೊಲೆ, ದರೋಡೆ ಮತ್ತು ಕಾರು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

1987 ರಲ್ಲಿ ಅಮೆರಿಕಾಗೆ ವಲಸೆ ಹೋಗಿದ್ದ ಸುನಿಲ್ ಈ ತಿಂಗಳಾಂತ್ಯಕ್ಕೆ ತನ್ನ ತಾಯಿಯ 95 ನೇ ಜನ್ಮದಿನಾಚರಣೆಗಾಗಿ ಭಾರತಕ್ಕೆ ಬರಬೇಕಿತ್ತು.  ಮೃತ ಸುನಿಲ್, ಹಾಸ್ಪೆಟಲ್ ಇಂಡಸ್ಟ್ರಿಯೊಂದರಲ್ಲಿ ನೈಟ್ ಆಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Facebook Comments

Sri Raghav

Admin