ಸಿಎಂ ಕುಮಾರಸ್ವಾಮಿ ಪರ ಮೋಟಮ್ಮ ಬ್ಯಾಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

MOtamma--01

ಬೆಂಗಳೂರು,ನ.19-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ಮಾಜಿ ಸಚಿವೆ ಮೋಟಮ್ಮ ಬ್ಯಾಟಿಂಗ್ ಮಾಡಿದ್ದಾರೆ. ರೈತ ಮಹಿಳೆ ವಿಚಾರವಾಗಿ ಸಿಎಂ ನೀಡಿರುವ ಪ್ರತಿಕ್ರಿಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನೆಯ ತೀವ್ರತೆ ಹೆಚ್ಚಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಈ ರೀತಿ ಮಾತನಾಡಿರಬಹುದು. ಆದರೆ ಮುಖ್ಯಮಂತ್ರಿಗಳಿಗೆ ಮಹಿಳೆಯರ ಬಗ್ಗೆ ಅಪಾರ ಗೌರವವಿದೆ ಎಂದು ನುಡಿದರು.

ನಮ್ಮನ್ನು ಸಹ ಅಕ್ಕ ಎಂದೇ ಸಂಭೋಧಿಸುತ್ತಾರೆ. ಮಹಿಳೆಯರಿಗೆ ಅಗೌರವ ತೋರಬೇಕೆಂಬ ಭಾವನೆ ಅವರಿಗಿಲ್ಲ. ಅಗೌರವ ತೋರುವ ಕೆಲಸವನ್ನು ಇದುವರೆಗೂ ಅವರು ಮಾಡಿಲ್ಲ.ಇದು ಕೂಡ ಬಾಯಿತಪ್ಪಿ ಆಡಿರುವ ಮಾತು ಎಂದು ಸಮಜಾಯಿಷಿ ನೀಡಿದ ಅವರು, ನಾನು ಸಿಎಂ ಅವರನ್ನು ಸಮರ್ಥಿಸುತ್ತಿಲ್ಲ.

ಕೆಲ ಬಾರಿ ಪ್ರತಿಕ್ರಿಯೆಗಳು ಸಂದರ್ಭಕ್ಕೆ ಅನುಸಾರವಾಗಿ ಬಂದಿರುತ್ತವೆ ವಿನಃ ಅದು ವೈಯಕ್ತಿಕ ಅಭಿಪ್ರಾಯವಲ್ಲ ಎಂದು ತಿಳಿಸಿದರು. ಉದ್ದೇಶಪೂರ್ವಕವಾಗಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಎಂಬುದು ಸಮಂಜಸವೂ ಅಲ್ಲ. ಇಲ್ಲಿ ನನ್ನ ಅಭಿಪ್ರಾಯವನ್ನಷ್ಟೇ ಹೇಳಿದ್ದೇನೆ ಎಂದರು.

Facebook Comments

Sri Raghav

Admin