ಮೊಮ್ಮಗಳ ಮದುವೆ ವಿಚಾರ ತಾತ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Murder-Axe--002ದೊಡ್ಡಬಳ್ಳಾಪುರ, ನ.19-ಮೊಮ್ಮಗಳ ಮದುವೆ ವಿಚಾರಕ್ಕೆ ಅಪ್ಪ-ಮಗನ ನಡುವೆ ನಡೆದ ಜಗಳ ತಾತನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಹೊರವಲಯದ ಕರೇನಹಳ್ಳಿಯಲ್ಲಿ ನಡೆದಿದೆ. ಈಶ್ವರಪ್ಪ (72) ಕೊಲೆಯಾದ ದುರ್ದೈವಿ. ಮೊಮ್ಮಗಳ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಮತ್ತು ಮಗ ಕುಮಾರ್ ನಡುವೆ ಜಗಳ ನಡೆದಿತ್ತು. ಮೊಮ್ಮಗಳು ಇನ್ನೂ ಚಿಕ್ಕವಳು ಈಗಲೇ ಮದುವೆ ಬೇಡ ಎಂದು ತಾತ ಈಶ್ವರಪ್ಪ ತಡೆದಿದ್ದರು. ಇದರಿಂದ ಕುಪಿತಗೊಂಡ ಮಗ ಕುಮಾರ್, ಸ್ನೇಹಿತ ಜೊತೆ ಸೇರಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿ ಇಬ್ಬರೂ ತಲೆಮರೆಸಿಕೊಂಡಿದ್ದು, ಈ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments