ಸಿವಿಸಿ ವರದಿಗೆ ಶೀಘ್ರ ಪ್ರತ್ಯುತ್ತರ ನೀಡಲು ವರ್ಮಗೆ ಸುಪ್ರೀಂ ನಿರ್ದೇಶನ

ಈ ಸುದ್ದಿಯನ್ನು ಶೇರ್ ಮಾಡಿ

Alok-Verma--01

ನವದೆಹಲಿ, ನ.19-ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಸಂಬಂಧ ಕೇಂದ್ರೀಯ ಜಾಗೃತ ಆಯೋಗ(ಸಿವಿಸಿ) ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿ ಕುರಿತು ಆದಷ್ಟೂ ಶೀಘ್ರ ಪ್ರತ್ಯುತ್ತರ ಸಲ್ಲಿಸುವಂತೆ ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರಿಗೆ ಸುಪ್ರೀಂಕೋರ್ಟ್ ಇಂದು ಸೂಚನೆ ನೀಡಿದೆ.

ಇದೇ ವೇಳೆ ನಾಳೆ ನಡೆಯಲಿರುವ ಈ ಕುರಿತ ವಿಚಾರಣೆಯನ್ನು ಮುಂದೂಡುವುದಿಲ್ಲ ಎಂದೂ ಸಹ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ವರ್ಮ ಪರ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಇಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠಕ್ಕೆ ಮನವಿ ಮಾಡಿ ಸಿಬಿಐ ನಿರ್ದೇಶಕರಿಗೆ ಸಿವಿಸಿ ತನಿಖಾ ವರದಿಗೆ ಸಂಬಂಧಪಟ್ಟಂತೆ ಪ್ರತ್ಯುತ್ತರ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತ್ಯ ಉತ್ತರಿಸಿದ ನ್ಯಾಯಪೀಠ, ಪ್ರತ್ಯುತ್ತರ ಸಲ್ಲಿಸಲು ಇನ್ನೂ ಸಮಯವಿದೆ. ಇಂದು ಸಂಜೆಯೊಳಗೆ ಹೇಳಿಕೆಯನ್ನು ಸಲ್ಲಿಸಬಹುದು. ಅಲ್ಲದೇ ನಾವು ದಿನಾಂಕವನ್ನು ಮುಂದೂಡುವುದಿಲ್ಲ. ಆದಕಾರಣ ಆದಷ್ಟೂ ಶೀಘ್ರ ಪ್ರತ್ಯುತ್ತರ ಸಲ್ಲಿಸಬೇಕು ಎಂದು ಸೂಚಿಸಿತು.

ನ.16ರಂದು ಸುಪ್ರೀಂಕೋರ್ಟ್ ವರ್ಮ ಅವರಿಗೆ ಸೂಚನೆ ನೀಡಿದ ಇಂದು ಮೊಹರು ಲಕೋಟೆಯಲ್ಲಿ ಸಿವಿವಿ ತನಿಖಾ ವರದಿಗೆ ಸಂಬಂಧಪಟ್ಟಂತೆ ಪ್ರತ್ಯುತ್ತರ ನೀಡುವಂತೆ ತಿಳಿಸಿತ್ತು. ಈ ಮಧ್ಯೆ, ಕೇಂದ್ರೀಯ ತನಿಖಾ ದಳದ ವಿಶೇಷ ನಿರ್ದೇಶಕ ರಾಕೇಶ್ ಆಸ್ಟಾನಾ ವಿರುದ್ಧ ದಾಖಲಾಗಿರುವ ಎಫ್‍ಐಆರ್ ಕುರಿತು ತನಿಖೆ ನಡೆಸುತ್ತಿದ್ದ ತಮ್ಮನ್ನು ಮಹಾರಾಷ್ಟ್ರದ ನಾಗ್ಪುರಕ್ಕೆ ವರ್ಗಾವಣೆ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಿಬಿಐ ಅಧಿಕಾರಿ ಮನೀಷ್ ಕುಮಾರ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin