ವಾಯುಪಡೆ ಸೇರಬಯಸುವವರಿಗೆ ಇಲ್ಲಿದೆ ಚಾನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

AIRಭಾರತೀಯ ವಾಯುಪಡೆ, ಗ್ರೂಪ್ ವೈ (ಐಎಎಫ್‍ಎಸ್) ಟ್ರೇಡ್‍ನಲ್ಲಿ ಏರ್‍ಮೆನ್‍ಗಳ ಆಯ್ಕೆ ಸಂಬಂಧ ಮೈಸೂರಿನ ನಜರ್‍ಬಾದ್‍ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಿದೆ.   ಡಿ.5 ರಂದು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರ ಕನ್ನಡ (ಕಾರವಾರ) ಜಿಲ್ಲೆಗಳಲ್ಲಿ ದೇಹದಾಢ್ರ್ಯತೆ ಲಿಖಿತ ಪರೀಕ್ಷೆಯನ್ನು ಒಟ್ಟು 9 ಜಿಲ್ಲೆಗಳಲ್ಲಿ ನಡೆಯಲಿದೆ.

(ಎಟಿ-ಐ ಎಟಿ-ಐಐ ಡಿಎಫ್‍ಟಿ ಮತ್ತು 06ನೇ ಡಿಸೆಂಬರ್ 18 ರಂದು ಅರ್ಜಿಗಳ ಭರ್ತಿ) ಡಿ.7 ರಂದು ಬೆಂಗಳೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಡಿಕೇರಿ, ದಕ್ಚಿಣ ಕನ್ನಡ (ಮಂಗಳೂರು) ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮತ್ತು ಉಡುಪಿ ಸೇರಿದಂತೆ ಒಟ್ಟು 20 ಜಿಲ್ಲೆಗಳಲ್ಲಿ (ಎಟಿ-ಐ ಎಟಿ-ಐಐ ಡಿಎಫ್‍ಟಿ ಮತ್ತು ಡಿ 8 ಅರ್ಜಿಗಳ ಭರ್ತಿ) ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ.

5 ಮತ್ತು 7ನೇ ಡಿಸೆಂಬರ್ 2018 ರಂದು ನಡೆಯುವ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತಹ ಅಭ್ಯರ್ಥಿಗಳು ನಂತರದ ದಿನಗಳಂದು ಉಳಿದ ಆಯ್ಕೆ ಪ್ರಕ್ರಿಯೆಗಾಗಿ ನಡೆಯುವ ಲಿಖಿತ ಪರೀಕ್ಷೆಗೆ ಹಾಜರಿರಬೇಕಾಗುತ್ತದೆ. ಅರ್ಹ ಅಭ್ಯರ್ಥಿಗಳು ಡಿ.5ರಂದು 9 ಗಂಟೆಗೆ ಮೊದಲು, ಅಂಕಪಟ್ಟಿಯ ಮೂಲಪ್ರತಿ ಮತ್ತು ಮೆಟ್ರಿಕ್ಯಲೇಷನ್, ಇಂಟರ್‍ಮೀಡಿಯೇಟ್ (10+2/11ನೇ ಪಿಯುಸಿ) ಉತ್ತೀರ್ಣ ಪ್ರಮಾಣ ಪತ್ರ ಮತ್ತು ಎಲ್ಲ ಪ್ರಮಾಣ ಪತ್ರಗಳ ಸ್ವಯಂ ದೃಢೀಕೃತ 04 ನಕಲು ಪ್ರತಿಗಳು, ವಾಸಸ್ಥಳದ ಪ್ರಮಾಣ ಪತ್ರ (ಬೇರೆ ಕಡೆ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳಿಗೆ) ಮತ್ತು 08 ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಬಣ್ಣದ ಭಾವಚಿತ್ರಗಳೊಂದಿಗೆ ರ್ಯಾಲಿ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕು.

ಹೆಚ್ಚಿನ ವಿವರಗಳಿಗಾಗಿ www.airmenselection.cdac.in ಏರ್‍ಮೆನ್ ಆಯ್ಕೆ ಕೇಂದ್ರ , ಸಂ. 1, ಕಬ್ಬನ್ ರಸ್ತೆ, ಬೆಂಗಳೂರು 560 001, ದೂರವಾಣಿ ಸಂಖ್ಯೆ: 08025592199 ಸಂಪರ್ಕಿಸುವುದು. ಅಭ್ಯರ್ಥಿಗಳು ಹತ್ತಿರದ ಜಿಲ್ಲಾ ಉದ್ಯೋಗ ಅಧಿಕಾರಿಯವರನ್ನು ಸಹ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Facebook Comments