ಇಂದಿರಾಗಾಂಧಿ 101ನೇ ಜನ್ಮದಿನ : ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ನಮನ

ಈ ಸುದ್ದಿಯನ್ನು ಶೇರ್ ಮಾಡಿ

Indira-Gandh-i

ನವದೆಹಲಿ, ನ.19- ಇಂದು ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ 101ನೇ ಜನ್ಮದಿನ. ದೇಶದ ವಿವಿಧೆಡೆ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಇಂದಿರಾ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿರಾಗಾಂಧಿ ಅವರನ್ನು ಸ್ಮರಿಸಿದರು.

ನವದೆಹಲಿಯ ಶಕ್ತಿ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಪುಷ್ಪ ನಮನ ಸಲ್ಲಿಸಿ ಮಾಜಿ ಪ್ರಧಾನಿಯ ಗುಣಗಾನ ಮಾಡಿದರು.ದೇಶದ ಎಲ್ಲ ರಾಜ್ಯಗಳ ಕಾಂಗ್ರೆಸ್ ಕಚೇರಿಗಳಲ್ಲಿ ಕಾರ್ಯಕರ್ತರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇಂದಿರಾ ಅವರ ಜನ್ಮ ದಿನ ಆಚರಿಸಿದರು.

ಇಂದಿರಾ ಪ್ರಿಯದರ್ಶಿನಿ ಗಾಂಧಿ ಭಾರತದ 3ನೆ ಪ್ರಧಾನಮಂತ್ರಿ ಹಾಗೂ ದೇಶದ ಏಕೈಕ ಮಹಿಳಾ ಪ್ರಧಾನಿ. ನವೆಂಬರ್ 19, 1917ರಲ್ಲಿ ಅಲಹಾಬಾದ್‍ನಲ್ಲಿ ಜನಿಸಿದರು. 1975 ರಿಂದ 1977ರವರೆಗೆ ದೇಶದಲ್ಲಿ ವಿವಾದಾತ್ಮಕ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಇಂದಿರಾಗಾಂಧಿಯವರು ದೊಡ್ಡ ವಿವಾದಕ್ಕೆ ಒಳಗಾಗಿದ್ದರು.

ಉಗ್ರಗಾಮಿಗಳ ವಿರುದ್ಧ ಪಂಜಾಬ್‍ನ ಅಮೃತಸರದ ಸ್ವರ್ಣಮಂದಿರ ಮೇಲೆ ಸೈನಿಕರಿಂದ ಬ್ಲೂಸ್ಟಾರ್ ಕಾರ್ಯಾಚರಣೆ ನಡೆಸಿದ್ದರು. ಇದು ಸಿಖ್ ಸಮುದಾಯದವರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.31ನೇ ಅಕ್ಟೋಬರ್ 1984ರಲ್ಲಿ ಇಂದಿರಾ ಅವರ ಪಾಲಿಗೆ ಅತ್ಯಂತ ದುರಂತದ ದಿನವಾಗಿತ್ತು. ಅವರ ಸಿಖ್ ಅಂಗರಕ್ಷಕರೇ ಇಂದಿರಾ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.

Indira-Gandh-2

Indira-Gandh-3

Indira-Gandh-4

Indira-Gandh-5 Indira-Gandh-6

Facebook Comments

Sri Raghav

Admin