ಛತ್ತೀಸ್‍ಗಢದಲ್ಲಿ ನಾಳೆ 2ನೇ ಮತ್ತು ಅಂತಿಮ ಹಂತದ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

eieactionರಾಯ್‍ಪುರ್, ನ.19-ಮುಂಬರುವ ಲೋಕಸಭಾ ಸಮರದ ದಿಕ್ಸೂಚಿ ಎಂದೇ ಪರಿಗಣಿಸಲಾಗಿರುವ ಪಂಚ ರಾಜ್ಯಗಳ ಚುನಾವಣೆ ಕಾವು ಏರತೊಡಗಿದ್ದು, ಛತ್ತೀಸ್‍ಗಢದಲ್ಲಿ ನಾಳೆ ಎರಡನೇ ಮತ್ತು ಅಂತಿಮ ಹಂತದ ಮತದಾನಕ್ಕೆ ವೇದಿಕೆ ಸಜ್ಜಾಗಿದೆ. ನಕ್ಸಲರ ದಾಳಿ ಆತಂಕದ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ.

90 ಸದಸ್ಯ ಬಲದ ವಿಧಾನಸಭೆಯ 72 ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಮತದಾನಕ್ಕೆ ಅಂತಿಮ ಹಂತದ ಸಿದ್ಧತೆಗೆಳು ನಡೆದಿವೆ.19 ಜಿಲ್ಲೆಗಳಲ್ಲಿ ನಾಳೆ ಮತದಾನ ನಡೆಯಲಿದ್ದು 110 ಮಹಿಳಾ ಸ್ಪರ್ಧಿಗಳೂ ಸೇರಿದಂತೆ 1079 ಮಂದಿ ಹಣೆಬರಹ ನಿರ್ಧಾರವಾಗಲಿದೆ.

1 ಕೋಟಿ 53 ಲಕ್ಷ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಲಿದ್ದಾರೆ. ಇವರಲ್ಲಿ 76 ಲಕ್ಷ ಮಹಿಳಾ ಮತದಾರರಿದ್ದಾರೆ. 940 ತೃತೀಯ ಲಿಂಗಿಗಳೂ ಸಹ ಈ ಬಾರಿ ಮತದಾನದ ಹಕ್ಕು ಪಡೆದಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸುಬ್ರತ್ ಸಾಹೂ ತಿಳಿಸಿದ್ದಾರೆ.

ಎರಡನೇ ಹಂತದ ಚುನಾವಣೆಗಾಗಿ 19,300 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ನಕ್ಸಲರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ.
ಮೊದಲ ಹಂತ ಚುನಾವಣೆ ಸಂದರ್ಭದಲ್ಲಿ ನಕ್ಸಲರಿಯರು ಒಂಭತ್ತು ಕಡೆ ಬಾಂಬ್ ದಾಳಿ ನಡೆಸಿದ್ದರು. ಈ ದುಷ್ಕøತ್ಯದಲ್ಲಿ ಓರ್ವ ಸೇನಾಧಿಕಾರಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಮಾವೋವಾದಿಗಳ ದಾಳಿ ಬೆದರಿಕೆ ನಡುವೆಯೂ ಶೇ.70ರಷ್ಟು ಮತದಾನವಾಗಿತ್ತು.

Facebook Comments