ಸೀಮಂತದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್ ವುಡ್ ನ ಸಿಂಡ್ರೆಲಾ , ರಾಕಿಂಗ್ ಸ್ಟಾರ್ ಯಶ್ ಪ್ರೀತಿಯ ಮಡದಿ ರಾಧಿಕಾ ಪಂಡಿತ್ ರ ಸೀಮಂತದ ಕಾರ್ಯಕ್ರಮ ಅದ್ದೂರಿಯಾಗಿ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ನಡೆಯಿತು. ಇದೇ ಸ್ಥಳದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ವಿವಾಹವಾಗಿದ್ದು , ಇದೊಂದು ಅದೃಷ್ಟದ ಜಾಗ ಎಂದೇ ಹೇಳಬಹುದು.ಈ ಮುದ್ದಾದ ಜೋಡಿ ಗೆ ಒಂದು ಸುಂದರ ಬೊಂಬೆ ಮನೆಗೆ ಬರಲಿದೆ.

 

WhatsApp Image 2018-11-18 at 9.56.54 PM(1)

ನಟಿ ರಾಧಿಕಾ ಪಂಡಿತ್ ಅವರ ಸೀಮಂತ ಕಾರ್ಯಕ್ರಮಕ್ಕೆ ಚಿತ್ರೋದ್ಯಮದ ತಾರಾ ದಂಪತಿಗಳಾದ ರೆಬೆಲ್ ಸ್ಟಾರ್ ಅಂಬರೀಶ್-ಸುಮಲತಾ, ಪುನೀತ್ ರಾಜ್ ಕುಮಾರ್-ಅಶ್ವಿನಿ , ನಿರ್ದೇಶಕ ಯೋಗರಾಜ್, ರವಿಚಂದ್ರನ್ ದಂಪತಿಗಳು, ರಾಘವೇಂದ್ರ ರಾಜಕುಮಾರ್ ಕುಟುಂಬ, ನಟ ರಮೇಶ್ ಅರವಿಂದ್ , ನಟಿಯರಾದ ತಾರಾ, ಸುಧಾರಾಣಿ, ನಿರ್ದೇಶಕ ಯೋಗರಾಜ್ ಭಟ್ , ನಿರ್ದೇಶಕ ಹರ್ಷ, ನಿರ್ಮಾಪಕ ಕೆ.ಮಂಜು, ಸೇರಿದಂತೆ ಚಿತ್ರೋದ್ಯಮದ ಕಲಾವಿದರು , ತಂತ್ರಜ್ಞರು ಹಾಗೂ ಕಿರುತೆರೆ ಕಲಾವಿದರು ಕೂಡ ಆಗಮಿಸಿದರು. ವಿಶೇಷವಾಗಿ ರಾಜಕೀಯ ಗಣ್ಯರಾದ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಗಣ್ಯರು ಕೂಡ ಒಂದು ಸಮಾರಂಭಕ್ಕೆ ಆಗಮಿಸಿ ಶುಭವನ್ನು ಹಾರೈಸಿದರು.
WhatsApp Image 2018-11-18 at 9.56.54 PM

ಕಣ್ಮನ ತಣಿಸುವಂತೆ ಸಿಂಗಾರಗೊಂಡಿದ್ದ ಒಂದು ಕಾರ್ಯಕ್ರಮದಲ್ಲಿ ಹಸಿರು ಬಣ್ಣದ ಉಡುಗೆಯಲ್ಲಿ ಯಶ್- ರಾಧಿಕಾ ದಂಪತಿ ಮಿಂಚಿದ್ದಾರೆ. ಗೌಡರ ಸಂಪ್ರದಾಯದಂತೆ ಸೀಮಂತ ನಡೆಸಿದ್ದಾರೆ. ವಿಶೇಷವೆಂದರೆ ಯಶ್ ಹಾಗೂ ರಾಧಿಕ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಈಗ ಅದೇ ದಿನವೇ ಮಗು ಜನನವಾಗುತ್ತದೆ ಅಂತ ವೈದ್ಯರು ಹೇಳಿದ್ದಾರಂತೆ.ಭಗವಂತನ ಕೃಪೆ ಈ ಜೋಡಿಯ ಮೇಲೆ ಇರಲಿ , ಹಾಗೆಯೇ ಮನೆಗೆ ಮುದ್ದಾದ ಮಗು ಬರಲಿ ಎಂದು ಹಾರೈಸೋಣ.WhatsApp Image 2018-11-18 at 9.56.55 PM WhatsApp Image 2018-11-18 at 9.56.56 PM WhatsApp Image 2018-11-18 at 9.56.57 PM WhatsApp Image 2018-11-18 at 9.56.58 PM WhatsApp Image 2018-11-18 at 9.57.00 PM WhatsApp Image 2018-11-18 at 9.57.01 PM WhatsApp Image 2018-11-18 at 9.57.02 PM WhatsApp Image 2018-11-18 at 9.57.04 PM

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )