ತಲೆಮರೆಸಿಕೊಂಡಿದ್ದ ಮಾಜಿ ಸಚಿವೆ ಮಂಜುವರ್ಮಾ ಕೋರ್ಟ್‍ಗೆ ಶರಣಾಗತಿ

ಈ ಸುದ್ದಿಯನ್ನು ಶೇರ್ ಮಾಡಿ

Manju-verma--01
ಬೇಗುಸರಾಯ್ (ಪಿಟಿಐ), ನ.20- ಮುಜಾಫರ್‍ನಗರದ ಬಾಲಿಕಾ ಆಶ್ರಮದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಸಂಬಂಧ ತನಿಖೆ ಕೈಗೊಂಡ ವೇಳೆ ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾದ ನಂತರ ನಾಪತ್ತೆಯಾಗಿದ್ದ ಬಿಹಾರದ ಮಾಜಿ ಸಚಿವೆ ಮಂಜುವರ್ಮಾ ಇಂದು ಇಲ್ಲಿನ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಬಿಹಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದ ಮಂಜುವರ್ಮಾ ತಮ್ಮ ಪತಿ ನಡೆಸುತ್ತಿದ್ದ ಬಾಲಿಕಾ ಆಶ್ರಮದಲ್ಲಿ ಭಾರೀ ಹಗರಣಗಳು ಬೆಳಕಿಗೆ ಬಂದ ನಂತರ ಹಾಗೂ ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾದ ನಂತರ ನಾಪತ್ತೆಯಾಗಿದ್ದರು.

ಇವರನ್ನು ಪತ್ತೆ ಮಾಡದ ಪೊಲೀಸ್ ಇಲಾಖೆಯನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ತಮ್ಮ ಬಂಧನಕ್ಕೆ ಪೊಲೀಸರು ವ್ಯಾಪಕ ಬಲೆ ಬೀಸಿರುವುದನ್ನು ಅರಿತ ಮಂಜುವರ್ಮಾ ಇಂದು ಬೆಳಗ್ಗೆ ಆಟೋರಿಕ್ಷಾದಲ್ಲಿ ನೇರವಾಗಿ ಇಲ್ಲಿನ ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಪ್ರಭಾತ್ ತ್ರಿವೇದಿ ಮುಂದೆ ಶರಣಾಗಿದ್ದಾರೆ.

Facebook Comments

Sri Raghav

Admin