ವ್ಯವಹಾರದಲ್ಲಿ ನಷ್ಟ ಉದ್ಯಮಿ ಗಡಿಯಲ್ಲೇ ನೇಣಿಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

K R PAETಕೆಆರ್ ಪೇಟೆ, ನ.20- ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಉದ್ಯಮಿಯೊಬ್ಬ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಪಟ್ಟಣದ ವಿಜಯ ಬ್ಯಾಂಕ್ ಕಟ್ಟಡದಲ್ಲಿ ನಡೆದಿದೆ. ಕೊಬ್ಬರಿಮಂಡಿ ನಡೆಸುತ್ತಿದ್ದ ತೆಂಡೆಕೆರೆ ಗ್ರಾಮದ ಕೃಷ್ಣಶೆಟ್ಟಿ ಎಂಬುವವರ ಪುತ್ರ ರವಿ (35) ಆತ್ಮಹತ್ಯೆಗೆ ಶರಣಾದ ಉದ್ಯಮಿ. ಕೊಬ್ಬರಿ ವ್ಯಾಪಾರ ಮಾಡುತ್ತಿದ್ದ ಇವರಿಗೆ ಇತ್ತೀಚೆಗೆ ವ್ಯವಹಾರದಲ್ಲಿ ಸಾಕಷ್ಟು ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಮನನೊಂದು ಅಂಗಡಿಯಲ್ಲೇ ನೇಣಿಗೆ ಶರಣಾಗಿದ್ದಾರೆ.  ಮೃತ ದೇಹವನ್ನು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಬಂಧುಗಳ ಆಕ್ರಂಧನ ಮುಗಿಲುಮುಟ್ಟಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Facebook Comments