ಕುದಿಯುತ್ತಿದ್ದ ಬಿಸಿನೀರಿಗೆ ಬಿದ್ದು ಬಾಲಕಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

HOT WATERಪುತ್ತೂರು, ನ.20- ಕುದಿಯುತ್ತಿದ್ದ ಬಿಸಿನೀರಿಗೆ ಬಿದ್ದು ಗಂಭೀರ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಬಾಲಕಿ ಮೃತಪಟ್ಟಿರುವ ಘಟನೆ ನರಿಮೊಗರು ಗ್ರಾಮದ ಕೆಮ್ಮಿಂಜೆಯಲ್ಲಿ ರಾತ್ರಿ ನಡೆದಿದೆ. ಕೆಮ್ಮಿಂಜೆಬೆದ್ರಾಳ ನಿವಾಸಿ ರಮೇಶ್ ಎಂಬವರ ಪುತ್ರಿ ತನ್ವಿ(7) ಮೃತಪಟ್ಟ ದುರ್ದೈವಿ.  ನಿನ್ನೆ ಸಂಜೆ ಕುದಿಯುತ್ತಿದ್ದ ಬಿಸಿ ನೀರಿಗೆ ಆಕಸ್ಮಿಕವಾಗಿ ಬಿದ್ದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತನ್ವಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments