ರೈತರ ಜೊತೆ ಚಲ್ಲಾಟವಾಡುವ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಲೆಕ್ಕ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Sugar--01

ಬೆಂಗಳೂರು,ನ.20- ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಪರದಾಡುತ್ತಲೇ ಕಬ್ಬು ಬೆಳೆದು ಸಂಕಷ್ಟಕ್ಕೊಳಗಾಗಿರುವ ರೈತರು ಇತ್ತ ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದಲೂ ಶೋಷಣೆಗೊಳಗಾಗಿ ಅಡಕತ್ತರಿಯಲ್ಲಿ ಸಿಲುಕಿ ಹೋರಾಟದ ಹಾದಿ ಹಿಡಿದಿದ್ದಾರೆ.  ಕಬ್ಬು ಬೆಳೆಗಾರರು ಒಂದು ಕಡೆ ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಪರದಾಡುತ್ತಿದ್ದಾರೆ, ಮತ್ತೊಂದು ಕಡೆ ಸಕ್ಕರೆ ಕಾರ್ಖಾನೆಗಳು ರೈತರಿಗೆ   ಕೊಡಬೇಕಿರುವ ಬಿಲ್ ಬಾಕಿ ಹಣ ಕೊಡದೆ ಸತಾಯಿಸುತ್ತಾ ಬಂದಿವೆ. ಇದರಿಂದ ರೈತರು ದಿಕ್ಕು ತೋಚದೆ ಹತಾಶೆಗೊಂಡು ಕೊನೆಗೆ ಪ್ರತಿಭಟನೆಗೆ ಮುಂದಾಗಿದ್ದರು.  ಕಾಂಗ್ರೆಸ್-ಜೆಡಿಎಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಲ್ಲಿರುವ ಸಚಿವರು, ಶಾಸಕರು, ಮಾಜಿ ಸಚಿವರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷದಿಂದ ಕೋಟ್ಯಂತರ ಹಣವನ್ನು ರೈತರಿಗೆ ಕೊಡದೆ ಬಾಕಿ ಉಳಿಸಿಕೊಂಡಿವೆ.

ರಾಜ್ಯದಲ್ಲಿ ಯಾವುದೇ ಪಕ್ಷ, ಯಾರೇ ಮುಖ್ಯಮಂತ್ರಿ ಯಾದರೂ ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಈ ಕಾರ್ಖಾನೆ ಮಾಲೀಕರನ್ನು ಯಾರೂ ಕೂಡ ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಒಂದು ರೀತಿ ಕೊಬ್ಬಿದ ಬಿಳಿಯಾನೆಯಂತಾಗಿರುವ ಇವರನ್ನು ಅಲುಗಾಡಿಸಲು ಅಷ್ಟು ಸುಲಭವಲ್ಲ. ಹೀಗಾಗಿಯೇ ಯಾವುದೇ ಸರ್ಕಾರ ಬಂದರೂ ತಲೆಕೆಡಿಸಿಕೊಳ್ಳದೆ ಮಾಲೀಕರು ರೈತರ ಜೊತೆ ಚೆಲ್ಲಾಟ ಆಡುತ್ತಲೇ ಇರುತ್ತಾರೆ. ಅನ್ನದಾತನಿಗೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸಿದರೆ ಈ ಸಮಸ್ಯೆ ಸೃಷ್ಟಿಯಾಗುತ್ತಿತ್ತ ಎಂಬ ಮೂಲ ಪ್ರಶ್ನೆ ಈಗ ಎದುರಾಗಿದೆ. ಎಲ್ಲ ಪಕ್ಷಗಳಲ್ಲೂ ಸಕ್ಕರೆ ಮಾಲೀಕರೇ ಇರುವುದರಿಂದ ಬಹುತೇಕರಿಗೆ ಇವರನ್ನು ಎದುರು ಹಾಕಿಕೊಳ್ಳುವ ಉಸಾಬರಿಗೂ ಕೈ ಹಾಕುತ್ತಿಲ್ಲ.

ಉದಾ: ಜಾರಕಿಹೊಳಿ ಸಹೋದರರ ವಿರುದ್ದ ಸರ್ಕಾರವೇನಾದರೂ ಕ್ರಮ ಕೈಗೊಳ್ಳಲು ಮುಂದಾದರೆ ದೋಸ್ತಿ ಸರ್ಕಾರ ತಳಪಾಯಕ್ಕೆ ಧಕ್ಕೆಯಾಗುತ್ತಿದೆ.
ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ ಮಾಲೀಕರು ಮಾತ್ರ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ಸರ್ಕಾರದ ಉದಾಸೀನತೆ ಹಾಗೂ ನಮ್ಮನ್ನು ಯಾರೂ ಏನೂ ಮಾಡಲಾರರು ಎಂಬ ಅಹಂಕಾರದಿಂದಲೇ ಈ ಪರಿಸ್ಥಿತಿ ಉದ್ಭವವಾಗಿದೆ. ಯಾವ್ಯಾವ ಸಕ್ಕರೆ ಕಾರ್ಖಾನೆಗಳು ಎಷ್ಟೆಷ್ಟು ಹಣ ಬಾಕಿ ಉಳಿಸಿಕೊಂಡಿವೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Sugar--01

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )