ಓಮ್ನಿ – ಗೂಡ್ಸ್ ವಾಹನಗಳ ನಡುವೆ ಡಿಕ್ಕಿ, ಇಬ್ಬರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

maruthi carಅರಸೀಕೆರೆ,ನ.20- ಮಾರುತಿ ಓಮ್ನಿ ಹಾಗೂ ಮಹೇಂದ್ರ ಗೂಡ್ಸ್ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ನಾಲ್ವರು ತೀವ್ರವಾಗಿ ಗ ಆಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 206 ಟಿ.ಎಚ್.ರಸ್ತೆಯಲ್ಲಿ ನಡೆದಿದೆ.

ಬೆಂಗಳೂರಿನ ದೇವನಹಳ್ಳಿ ವಾಸಿಗಳಾದ ಮಧು(30) , ಮಹೇಶ್(30) ಮೃತಪಟ್ಟಿದ್ದು, ರಾಜು, ಗೌತಮ್ ಯಾದವ್, ಮುನಿಯಪ್ಪ ಗಾಯಗೊಂಡಿದ್ದಾರೆ. ಇವರೆಲ್ಲ ಮಾರುತಿ ಓಮ್ನಿಯಲ್ಲಿ ಸಿಗಂದೂರು ಚೌಡೇಶ್ವರಿದೇವಿ ದರ್ಶನಕ್ಕೆ ಹೋಗುತ್ತಿದ್ದಾಗ ತಾಲ್ಲೂಕಿನ ಮೊರಾರ್ಜಿ ವಸತಿ ಶಾಲೆ ಎದುರು ಅರಸೀಕೆರೆ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಮಹೇಂದ್ರ ಗೂಡ್ಸ್ ಗಾಡಿ ಡಿಕ್ಕಿಯಾಗಿದೆ.

ಅರಸೀಕೆರೆ ತಾಲ್ಲೂಕಿನ ಗೀಗೀಹಳ್ಳಿ ವಾಸಿ ಗೂಡ್ಸ್ ವಾಹನದ ಮಲ್ಲಿಕಾರ್ಜುನ ಕೂಡ ಗಾಯಗೊಂಡಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತಕ್ಷಣ ಗಾಯಾಳುಗಳನ್ನು ಅರಸೀಕೆರೆ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments