ಸೆಕ್ಯೂರಿಟಿ ಗಾರ್ಡ್ ಶವವಾಗಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

SECURETI GARDಬೆಂಗಳೂರು, ನ.20- ರಾತ್ರಿ ಪಾಳಿಯಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಶವವಾಗಿ ಪತ್ತೆಯಾಗಿದ್ದಾರೆ. ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೆಂಕಟೇಶ್ (57) ಎಂಬ ಸೆಕ್ಯೂರಿಟಾ ಗಾರ್ಡ್‍ನ ಶವ ಪತ್ತೆಯಾಗಿದೆ. ಆರ್.ಜಿ.ರಾಯಲ್ ಹೊಟೇಲ್ ಸಮೀಪ ರಸ್ತೆ ಬದಿ ಇಂದು ಬೆಳಗಿನ ಜಾವ ವ್ಯಕ್ತಿಯೊಬ್ಬರ ಶವ ಕಂಡ ಸಾರ್ವಜನಿಕರೊಬ್ಬರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಮಹಾಲಕ್ಷ್ಮೀಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತ ವ್ಯಕ್ತಿ ಬಗ್ಗೆ ವಿಚಾರಿಸಿದಾಗ ಈ ವ್ಯಕ್ತಿ ಕುರುಬರಹಳ್ಳಿಯ ನಿವಾಸಿ, ಸೆಕ್ಯೂರಿಟಿ ಗಾರ್ಡ್ ಎಂಬುದು ಗೊತ್ತಾಗಿದೆ.ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಸಾವು ಹೇಗೆ ಸಂಭವಿಸಿದೆ ಎಂಬುದು ತಿಳಿದುಬಂದಿಲ್ಲ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಂ.ಎಸ್.ರಾಮಯ್ಯ ಸಾಗಿಸಲಾಗಿದೆ. ವೈದ್ಯರು ಮೃತದೇಹ ಪರೀಕ್ಷಿಸಿ ಅಪಘಾತದಿಂದ ಮೃತಪಟ್ಟಿರಬಹುದೆಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಸೆಕ್ಯುರಿಗಾರ್ಡ್‍ನ ಮೃತ ದೇಹದ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವು ಹೇಗೆ ಸಂಭವಿಸಿದೆ ಎಂಬುದು ತಿಳಿದುಬಂದಿದೆ.

Facebook Comments