ಇಂದಿನ ಪಂಚಾಗ ಮತ್ತು ರಾಶಿಫಲ (20-11-2018 – ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ ; ದೈವದ ರಕ್ಷಣೆ ಇದ್ದರೆ ಬೀದಿಯಲ್ಲಿ ಬಿದ್ದಿದ್ದೂ ಉಳಿಯುತ್ತದೆ. ಅದಿಲ್ಲದಿದ್ದರೆ ಮನೆಯಲ್ಲಿದ್ದರೂ ಹಾಳಾಗುತ್ತದೆ. ಅನಾಥವಾಗಿ ವನದಲ್ಲಿ ಇದ್ದರೂ ದೈವದ ದೃಷ್ಟಿ ಬಿದ್ದರೆ ಬದುಕುತ್ತಾನೆ. ಮನೆಯಲ್ಲಿಟ್ಟು ಕಾಪಾಡಿದರೂ ದೈವಹತನಾದವನು ಬದುಕುವುದಿಲ್ಲ.
-ಭಾಗವತ

Rashi-Bhavishya--01

# ಪಂಚಾಂಗ : ಮಂಗಳವಾರ, 20.11.2018
ಸೂರ್ಯ ಉದಯ ಬೆ.06.20 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಮ.03.50 / ಚಂದ್ರ ಅಸ್ತ ರಾ,.04.22
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಶುಕ್ಲ ಪಕ್ಷ / ತಿಥಿ : ದ್ವಾದಶಿ (ಮ.02.40)
ನಕ್ಷತ್ರ:  ರೇವತಿ (ಸಾ.06.34) / ಯೋಗ: ಸಿದ್ಧಿ (ಸಾ.05.29)
ಕರಣ: ಭದ್ರೆ-ಬಾಲವ-ಕೌಲವ (ಮ.02.40-ರಾ.02.41)
ಮಳೆ ನಕ್ಷತ್ರ: ಅನೂರಾಧ   / ಮಾಸ: ವೃಶ್ಚಿಕ / ತೇದಿ: 05

Rashi-Bhavishya--01# ರಾಶಿ ಭವಿಷ್ಯ 

ಮೇಷ : ಸದ್ಯದ ಪರಿಸ್ಥಿತಿಯಲ್ಲಿ ಈಗಿರುವ ಜವಾಬ್ದಾರಿ ಕೆಲಸಗಳಿಂದ ತಪ್ಪಿಸಿಕೊಳ್ಳಲಾರಿರಿ
ವೃಷಭ : ಹಣಕಾಸಿನ ದಾರಿ ತನ್ನಿಂದ ತಾನೇ ತೆರೆದು ಕೊಳ್ಳುವುದು. ಮುಂದೆ ಹಾನಿ ಆಗುವುದು ತಪ್ಪಲಿದೆ
ಮಿಥುನ: ಪ್ರಯಾಣ ಸಂದರ್ಭದಲ್ಲಿ ಎಚ್ಚರ ಅಗತ್ಯ
ಕಟಕ: ಸಕಾರಾತ್ಮಕ ಚಿಂತನೆಯಿಂದ ಒಳಿತಾಗುವುದು
ಸಿಂಹ: ಮಕ್ಕಳು ಉದ್ಯೋಗ ದಲ್ಲಿ ಪ್ರಗತಿ ಸಾಧಿಸುವುದರಿಂದ ಅವರ ಬಗ್ಗೆ ಹೆಮ್ಮೆಯಾಗುವುದು
ಕನ್ಯಾ: ಹಿರಿಯರ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ
ತುಲಾ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು
ವೃಶ್ಚಿಕ: ಕೌಟುಂಬಿಕ ವಿಷಯ ಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸುವುದು ಒಳ್ಳೆಯದು
ಧನುಸ್ಸು: ಹೊಸ ಜವಾಬ್ದಾರಿ ಬಂದರೆ ಅದನ್ನು ಸ್ವೀಕರಿಸಿ. ಮುಂದಿನ ದಿನಗಳಲ್ಲಿ ಒಳಿತಾಗುವುದು
ಮಕರ: ಹೊಸ ಜವಾಬ್ದಾರಿ ಹೊಂದಲಿದ್ದೀರಿ
ಕುಂಭ: ವಿವಿಧ ಮೂಲಗಳಿಂದ ಹಣ ಹರಿದು ಬರಲಿದೆ
ಮೀನ: ಸಹೋದರಿಯರಿಗೆ ಅನಾನುಕೂಲ. ಕಲಹ ಸಂಭವ. ದೇವಸ್ಥಾನಕ್ಕೆ ಭೇಟಿ ನೀಡಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments