ಸಕ್ಕರೆ ಕಾಯಿಲೆ ಭೂತ ನಿಮ್ಮನ್ನು ಕಾಡುತ್ತಿದೆಯೇ..? ಇಲ್ಲಿದೆ ಕಾರಣ ಮತ್ತು ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

diabetes

ನಿಮಗೆ ಮಧುಮೇಹ (ಡಯಬಟಿಸ್ ಮಿಲಿಟಸ್) ಇದೆಯೆಂದು ಒಂದು ವೇಳೆ ಕಂಡುಬಂದಿದ್ದಲ್ಲಿ, ಈಗ ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳು, ಅನುಮಾನಗಳು ಮತ್ತು ಕೊಂಚ ಅನಿಶ್ಚಿತತೆಯೂ ಇರಬಹುದೆಂದು ಖಚಿತವಾಗಿ ಹೇಳಬಹುದು.  ಮಧುಮೇಹವುಳ್ಳ ಹಚ್ಚಿನ ವ್ಯಕ್ತಿಗಳು ಆರೋಗ್ಯವಂತವಾದ ಹಾಗೂ ಸಂಪೂರ್ಣವಾದ ಜೀವನವನ್ನು ನಡೆಸುವರು. ನೀವೀಗ ಮಾಡಬಹುದಾದ ಅತ್ಯುತ್ತಮ ಕೆಲಸವೇನೆಂದರೆ ಮಧುಮೇಹದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದು. ಈ ಲೇಖನದಲ್ಲಿ ನಾವು ಮಧುಮೇಹದ ಬಗ್ಗೆ ಕೆಲವು ಪ್ರಾಥಮಿಕ ಮಾಹಿತಿಯನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತೇವೆ.

#ಮಧುಮೇಹ ಎಂದರೇನು?
ಮಧುಮೇಹ ನಿಮ್ಮ ರಕ್ತದಲ್ಲಿ ಗ್ಲೂಕೋಸ್, ಅಥವಾ ಸಕ್ಕರೆ ಮಟ್ಟ ತುಂಬಾ ಅಧಿಕವಾಗಿರುವ ಒಂದು ಕಾಯಿಲೆ. ವ್ಯಕ್ತಿಯ ಶರೀರ ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಉತ್ಪಾದಿಸದಿದ್ದರೆ ಅಥವಾ ದೇಹವು ಇನ್ಸುಲಿನ್-ಗೆ ಸರಿಯಾಗಿ  ಪ್ರತಿಕ್ರಿಯೆ ನೀಡದಿದ್ದಲ್ಲಿ ಮಧುಮೇಹ ಉಂಟಾಗುತ್ತದೆ. ಮಧುಮೇಹದಲ್ಲಿ ಎರಡು ಸಾಮಾನ್ಯ ವಿಧಗಳಿವೆ. ಮಧುಮೇಹ 1ನೆಯ ವಿಧದಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸುವಲ್ಲಿ ವಿಫಲವಾಗುತ್ತದೆ. ಮಧುಮೇಹ 2ನೆಯ ವಿಧದಲ್ಲಿ ದೇಹವು ಇನ್ಸುಲಿನ್-ಗೆ ಸರಿಯಾಗಿ  ಪ್ರತಿಕ್ರಿಯೆ ನೀಡುವುದಿಯಲ್ಲ, ತದನಂತರ  ಮೇದೋಜೀರಕ ಗ್ರಂಥಿಗೆ ದೇಹಕ್ಕೆ ಅವಶ್ಯವಾದ ಅಧಿಕ ಪ್ರಮಾಣದ ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದಿದ್ದಾಗ ರಕ್ತದಲ್ಲಿ ಸಕ್ಕರೆಯು ಅಧಿಕವಾಗುತ್ತದೆ. ಮಧುಮೆಹಿಗಳ ಪೈಕಿ ಹೆಚ್ಚಿನವರಿಗೆ 2ನೆಯ ವಿಧದ ಮಧುಮೇಹವಿರುತ್ತದೆ.

#ಸಕ್ಕರೆ ಕಾಯಿಲೆಯ ವಿಧಗಳು:
1. ಇನ್ಸುಲಿನ್ಅವಲಂಬಿತ ಸಕ್ಕರೆ ಕಾಯಿಲೆ:
ಇದು ಸಾಮಾನ್ಯವಾಗಿ ಅನುವಶೀಯವಾಗಿರುತ್ತದೆ. ಇದು ಹೆಚ್ಚಾಗಿ ಮಕ್ಕಳು ಹಾಗೂ ಚಿಕ್ಕವಯಸ್ಸಿನ ಯುವಕರಲ್ಲಿ ಕಂಡುಬರುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದೇ ಇರುವ ಕಾರಣ ಪ್ರತಿದಿನ ತಪ್ಪದೆ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗುವು ದು.  ಚುಚ್ಚುಮದ್ದನ್ನು ತಪ್ಪಿಸಿದರೆ ಮುಂದೆ ಇವರಿಗೆ ಕಿಟೊಆಸಿಡೋಸಿಸ್ ಎಂಬ ತೊಂದರೆ ತಲೆದೋರಬಹುದು.

2. ಇನ್ಸುಲಿನ್ಅವಲಂಬಿತವಲ್ಲದ  ಸಕ್ಕರೆಕಾಯಿಲೆ:
ಇದು ಸಾಮಾನ್ಯವಾಗಿ ಅತಿ ತೂಕ ಇರುವವರಲ್ಲಿ ಕಂಡುಬರುತ್ತದೆ. ಇನ್ಸಲಿನ್ ಉತ್ಪತ್ತಿಯದರೂ, ಇದರ ಕಾರ್ಯ ಸಮರ್ಥತೆಯಲ್ಲಿ ಅಡ್ಡಿಯುಂಟಾಗುವ ಮೂಲಕ ಸಕ್ಕರೆ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇವರಲ್ಲಿ ರೋಗಲಕ್ಷಣಗಳು ನಿಧಾನವಾಗಿ ಕಾಣಿಸಿಕೊಳ್ಳುತ್ತವೆ. ಪಥ್ಯಾಚಾರ, ವ್ಯಾಯಾಮ ಹಾಗೂ ಔಷಧದ ಮೂಲಕ ರೋಗವನ್ನು ಹತೋಟಿಯಲ್ಲಿಡಬಹುದು.

3. ಅಪೌಷ್ಟಿಕತೆಗೆ ಸಂಬಂಧಿಸಿದ ಸಕ್ಕರೆಕಾಯಿಲೆ:
ಅಪೌಷ್ಟಿಕತೆಯಿಂದ ಉಂಟಾಗುವ ಸಕ್ಕರೆ ಕಾಯಿಲೆಯನ್ನು ಇತ್ತೀಚೆಗೆ ಗುರುತಿಸಲಾಗಿದೆ. ಈ ಕಾಯಿಲೆ ಮುಖ್ಯವಾಗಿ ಉಷ್ಣವಲಯಗಲಲ್ಲಿ 15-30 ವರ್ಷದೊಳಗಿನ ಯುವಕರಲ್ಲಿ ಕಂಡುಬರುತ್ತದೆ. ಭಾರತದಂತಹ ಉಷ್ಣವಲಯದ ದೇಶಗಳಲ್ಲಿ ಹೆಚ್ಚಿನ ಜನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ ಮೇದೋಜೀರಕ ಗ್ರಂಥಿ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್‌ಅನ್ನು ಉತ್ಪತ್ತಿ ಮಾಡದೇ ಇರುವುದರಿಂದ ಇನ್ಸುಲಿನ್ ಚುಚ್ಚುಮದ್ದು ಕೊಡಬೇಕಾಗುವುದು. ಆದರೆ, ಇವರಿಗೆ ಇನ್ಸುಲಿನ್ ಚುಚ್ಚುಮದ್ದು ತಪ್ಪಿಸಿದರೂ ಕೀಟೋಆಸಿಡೋಸಿಸ್ ರೋಗ ಬರುವುದಿಲ್ಲ.

# ಗರ್ಭಿಣಿಯರಲ್ಲಿ  ಸಕ್ಕರೆ ಕಾಯಿಲೆ:
ಗರ್ಭಾವಸ್ಥೆಯಲ್ಲಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದರಿಂದ ಇನ್ಸುಲಿನ್‌ನ ಅವಶ್ಯಕತೆ ಸಾಮಾನ್ಯಕ್ಕಿಂತ 2-3 ಪಟ್ಟು ಹೆಚ್ಚುತ್ತದೆ. ಆದ್ದರಿಂದ ಶೇ. 1ರಷ್ಟು ಸ್ತ್ರೀಯರಲ್ಲಿ ಗರ್ಭಧರಿಸಿದಾಗ ಮಧುಮೇಹರೋಗ ಕಂಡುಬರುತ್ತದೆ. ಅನುವಂಶೀಯವಾಗಿ ಸಕ್ಕರೆ ಕಾಯಿಲೆ ಇರುವವರಲ್ಲಿ ಇದರ ಸಂಭವ ಹೆಚ್ಚು. ಮಧುಮೇಹವನ್ನು ಮೊದಲ ಮೂರು ತಿಂಗಳಲ್ಲಿ ನಿಯಂತ್ರಿಸದಿದ್ದರೆ ಗರ್ಭಪಾತ ಅಥವಾ ಭ್ರೂಣದಲ್ಲಿ ನ್ಯೂನತೆ ಉಂಟಾಗಬಹುದು.. ಮಧುಮೇಹದಿಂದ ಬಳಲುವ ಗರ್ಭಪಾತ ಅಥವಾ ಭ್ರೂಣದಲ್ಲಿ ನ್ಯೂನತೆ ಉಂಟಾಗಬಹುದು. ಮಧುಮೇಹದಿಂದ ಬಳಲುವ ಗರ್ಭಿಣಿಯರಿಗೆ ಹುಟ್ಟಿದ ಮಗುವು ಸಾಮಾನ್ಯ ಮಕ್ಕಳಿಗಿಂತ ತೂಕದಲ್ಲಿ ಹೆಚ್ಚಾಗಿರುತ್ತದೆ. ಈ ಮಗು ಮುಂದೆ ಮಧುಮೇಹಿ ಆಗುವ ಸಂಭವ ಹೆಚ್ಚು. ಗರ್ಭಿಣಿಯರಯ ಸರಿಯಾದ ಸಮಯದಲ್ಲಿ ತಪಾಸಣೆ ಮಾಡಿಸಿ ಇನ್ಸುಲಿನ್ ಹಗೂ ಆಹಾರ ಚಿಕೆತ್ಸೆಯ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಗರ್ಭಿಣಿ ಮಹಳೆಯ ಅಪೇಕ್ಷಣೀಯ ತೂಕದ ಲೆಕ್ಕದಲ್ಲಿ 30-35 ಕಿ.ಕ್ಯಾ/ಕಿ.ಗ್ರಾಂ ಕ್ಯಾಲೊರಿಗಳನ್ನು ಮತ್ತು 1.5-2.5 ಗ್ರಾಂ/ಕಿ.ಗ್ರಾಂ ಸಸಾರಜನಕವನ್ನು ಕೊಡಬೇಕು. ಗರ್ಭಾವಸ್ಥೆಯಲ್ಲಿ ಇವರ ದೈಹಿಕ ತೂಕ 12ಕಿ.ಗ್ರಾಂ ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು.

diabetes

ರೋಗ ಲಕ್ಷಣಗಳು:
*ಅತಿಮೂತ್ರವಿಸರ್ಜನೆ * ತೀವ್ರಬಾಯಾರಿಕೆ  *ಉತ್ಕಟಹಸಿವು  *ತೂಕಕಡಿಮೆಯಗುವುದು  *ಆಯಾಸಮತ್ತುಸುಸ್ತು *ಗಾಯಗಳುಮಾಯದೆಇರುವುದು
*ಜನನಾಂಗಳಲ್ಲಿತುರಿಕೆಹಾಗೂಸೋಂಕು *ತೂಕಡಿಕೆಹಾಗೂಕಣ್ಣಿನತೊಂದರೆ   *ಕಾಲುಗಳಜಡತೆಮತ್ತುಪಾದಗಳಲ್ಲಿಉರಿತ  *ಆಗಾಗ ಸೋಂಕು ರೋಗಗಳು ಬರುವುದು.

#ರೋಗ ಪರೀಕ್ಷೆ:  ಹೈಪರ್ಗ್ಲೈಸೀಮಿಯ(ರಕ್ತದಲ್ಲಿಗ್ಲೂಕೋಸ್‌ನಅತಿಶಯತೆ) ರೋಗಿ ಆಹಾರ ಸೇವಿಸಿದ 12ಗಂಟೆಗಳ ನಂತರ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣದ ಪರೀಕ್ಷೆ ಮಾಡಲಾಗುವುದು. ಒಂದು ಡೆಸಿ ಲೀ.ಗೆ 120ಮಿ.ಗ್ರಾಂನಷ್ಟು ಪ್ಸಾಸ್ಮಾಗ್ಲೂಕೋಸ್ ಇದ್ದರೆ ಸಕ್ಕರೆ ಕಾಯಿಲೆ ಇದೆ ಎಂದು ತಿಳಿಯಬಹುದು.

#ಗ್ಲೂಕೋಸ್ಟಾಲರೆನ್ಸ್ ಪರೀಕ್ಷೆ:  ಈ ಪರೀಕ್ಷೆಯಿಂದ ದೇಹ ಎಷ್ಟು ಗ್ಲೂಕೋಸ್ ಅನ್ನು ಉಪಯೋಗಿಸಿಕೊಳ್ಳಬಹುದು ಎನ್ನುವುದು ತಿಳಿಯುತ್ತದೆ.

#ಮೂತ್ರಪರೀಕ್ಷೆ:  ಈ ಪರೀಕ್ಷೆಯಿಂದ ಮೂತ್ರದಲ್ಲಿ ಗ್ಲೂಕೋಸ್ ಅಂಶ ಹೆಚ್ಚಿದ್ದರೆ ತಿಳಿಯುತ್ತದೆ.

#ಮಧುಮೇಹಿಗಳು ತೆಗೆದುಕೊಳ್ಳಬೇಕಾದ  ಮುನ್ನೆಚ್ಚರಿಕೆಕ್ರಮಗಳು :
*ತೃಪ್ತಿಕರದೇಹತೂಕವನ್ನುಹೊಂದುವುದು.  *ರಕ್ತದಲ್ಲಿಗ್ಲೂಕೋಸ್ಪ್ರಮಾಣದನಿಯಂತ್ರಣೆ  *ಆಹಾರನಿರ್ವಹಣೆ  *ಮದ್ಯಪಾನವನ್ನುವರ್ಜಿಸುವುದು
*ಸ್ನಾಯುಗಳಬಲವರ್ಧನೆಗೆಕ್ರಮಬದ್ಧವ್ಯಾಯಾಮ  *ಉದ್ರೇಕಗೊಳ್ಳದಇರುವುದು.  *ಪಾದಗಳನ್ನುಗಾಯಗಳಿಂದರಕ್ಷಿಸುವುದು  *ಕ್ರಮಬದ್ಧಆರೋಗ್ಯತಪಾಸಣೆ,
*ರಕ್ತದಲ್ಲಿಗ್ಲೂಕೋಸ್ಪ್ರಮಾಣವನ್ನುನಿಯಂತ್ರಿಸುವುದು.  *ಧೂಮಪಾನವನ್ನು ನಿಲ್ಲಿಸುವುದು.

#ಆಹಾರ ನಿರ್ವಹಣೆ:ಸೂಕ್ತ ಆಹಾರ ಸೇವನೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸರಿಯಾದ ಮಟ್ಟಕ್ಕೆ ತಂದು ನಿಯಂತ್ರಣಕ್ಕೆ ಒಳಪಡಿಸುತ್ತದೆ. ಮಧುಮೇಹಿಯ ವಯಸ್ಸು, ತೂಕ, ಚಟುವಟಿಕೆ ಹಾಗೂ ಆರೋಗ್ಯಸ್ಥಿತಿಗೆ ಅನುಗುಣವಾಗಿ ಕ್ಯಾಲೊರಿಗಳ ಸೇವನೆಯನ್ನು ನಿಗದಿಪಡಿಸಬೇಕು. ಕ್ಯಾಲೊರಿಗಳು ಮಧುಮೇಹಿಯ ದಿನದ ಅವಶ್ಯಕತೆಗಿಂತ ಹೆಚ್ಚು ಇರದಂತೆ ನೋಡಿಕೊಳ್ಳಬೇಕು. ಇವರ ಆಹಾರದಲ್ಲಿ ರಕ್ತದ ಸಕ್ಕರೆಯ ಪ್ರಮಾಣವನ್ನು ಇಳಿಸಲು ಸಹಾಯ ಮಡುವಂತಹ ಆಹಾರ ವಸ್ತುಗಳಾದ ಮೆಂತ್ಯ, ಹಾಗಲಕಾಯಿ ಹಾಗೂ ನೇರಳೆ ಹಣ್ಣುಗಳನ್ನು ಸೇರಿಸುವುದು ಸೂಕ್ತ.

sakkare

Facebook Comments