ತಾಯಿಯಾದ ಬಳಿಕ ಮಹಿಳೆಯರಲ್ಲಿ ಸೌಂದರ್ಯದ ಕಲ್ಪನೆ ಬದಲಾಗುತ್ತೆ ಏಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Women-baby

ಬೆಂಗಳೂರು, ನ.20-ತಾಯಿಯಾದ ಬಳಿಕ ಮಹಿಳೆಯರಲ್ಲಿ ಸೌಂದರ್ಯದ ಬಗ್ಗೆ ತಮ್ಮ ಚಿಂತನೆ ಬದಲಾಗುತ್ತದೆ ಎಂಬುದು ಸಮೀಕ್ಷೆಯೊಂದು ತಿಳಿಸಿದೆ. ತಾಯಂದಿರ ಆರೋಗ್ಯ ರಕ್ಷಣೆ ಹಾಗೂ ಅವರ ಸಮಸ್ಯೆ ಬಗ್ಗೆ ಗಮನ ಕೊಡುವ ದೇಶದ ಪ್ರಮುಖ ಸಂಸ್ಥೆ ಮಾಮ್ಸ್ ಪ್ರೆಸ್ಸೊ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಸಂಸ್ಥೆಯು ಇತ್ತೀಚೆಗೆ ವ್ಲೋಗ್ ಆನ್ ಬ್ಯೂಟಿ ಎಂಬ ವೇದಿಕೆ ಸ್ಥಾಪಿಸಿ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ 25ರಿಂದ 45 ವರ್ಷದೊಳಗಿನ ಮಹಿಳೆಯರು ಭಾಗವಹಿಸಿದ್ದರು. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಮೂರನೇ ಎರಡರಷ್ಟು ಮಹಿಳೆಯರು, ತಾಯಿಯಾದ ನಂತರ ಸೌಂದರ್ಯ ಪ್ರಜ್ಞೆ ಮತ್ತು ಆರೋಗ್ಯದ ಬಗೆಗಿನ ಆಲೋಚನೆಗಳು ಬದಲಾಗಿವೆ ಎಂದು ತಿಳಿಸಿದ್ದಾರೆ.ಆದರೆ ಭಾರತದ ಹಲವು ತಾಯಂದಿರು ಸೌಂದರ್ಯವರ್ಧಕ ವಸ್ತುಗಳ ಬಳಕೆಗೆ ಒತ್ತು ನೀಡುತ್ತಿದ್ದಾರೆ.

ಶೇ.50ರಷ್ಟು ಮಹಿಳೆಯರು ಸೌಂದರ್ಯ ಎಂದರೆ ಒಂದು ಮಗುವಿಗೆ ಜನ್ಮ ನೀಡುವುದು ಎಂದು ಭಾವಿಸಿದ್ದರೆ, ಶೇ.70ರಷ್ಟು ಮಹಿಳೆಯರು ನಿರ್ದಿಷ್ಟವಾದ ಸೌಂದರ್ಯ ಉತ್ಪನ್ನಗಳನ್ನು ಬಳಸುವುದೇ ಸೂಕ್ತ ಎಂದು ಹೇಳಿದ್ದಾರೆ. ಶೇ.80ರಷ್ಟು ಮಹಿಳೆಯರು ತಮ್ಮ ಸ್ಮಾರ್ಟ್‍ಪ್ರೋನ್‍ಗಳಲ್ಲಿ ತಮ್ಮ ಪ್ರೋಟೋಗಳನ್ನು ಮತ್ತಷ್ಟು ಸುಂದರವಾಗಿ ತೋರಿಸುವಂತಹ ಕಿರು ತಂತ್ರಾಂಶಗಳನ್ನು ಅಳವಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಈ ಸಮೀಕ್ಷೆ ಬಗ್ಗೆ ಮಾತನಾಡಿದ ಮಾಮ್ಸ್ ಪ್ರೆಸ್ಸೊ ಸಂಸ್ಥೆಯ ಪ್ರಧಾನ ಸಂಪಾದಕರಾದ ಪೆರುಲ್ ಬಹ್ರಿ, ಈ ಸಮೀಕ್ಷೆಯ ದತ್ತಾಂಶದ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಲಿದೆ. ಪ್ರತಿ ಮಹಿಳೆಯಲ್ಲೂ ಜಾಗೃತಿ ಮತ್ತು ಭದ್ರತಾ ಭಾವ ಮೂಡಿಸುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

Facebook Comments