ಹುಕ್ಕಾ ಬಾರ್ ಮೇಲೆ ದಾಳಿ, ಇಬ್ಬರ ಬಂಧನ, 40,000 ಮೌಲ್ಯದ ವಸ್ತುಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

HUkka--01

ಬೆಂಗಳೂರು, ನ.19- ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್‍ಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಇಬ್ಬರನ್ನು ಬಂಧಿಸಿ, 40000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರತ್‍ಪೇಟೆ, ತಿಗಳರ ಪೇಟೆಯ ಮುನಿಸ್ವಾಮಪ್ಪ ಲೇನ್ ನಿವಾಸಿ ರಾಘವೇಂದ್ರ (42) ಹಾಗೂ ಆರ್‍ಎಂವಿ 2ನೆ ಹಂತ ಎಂಎಲ್‍ಎ ಲೇಟ್‍ನ 2ನೆ ಕ್ರಾಸ್ 1ನೇ ಮೈನ್ ನಿವಾಸಿ ಇರ್ಫಾನ್ ನಾಗ್ಮೂರ್ (28) ಬಂಧಿತ ಆರೋಪಿಗಳು.

ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬನಶಂಕರಿ ಒಂದನೇ ಹಂತ ಹೊಸಕೆರೆಹಳ್ಳಿ ಲೇಔಟ್ ಔಟರ್ ರಿಂಗ್ ರಸ್ತೆಯಲ್ಲಿ ಹೈಡ್‍ಔಟ್ ಎಂಬ ಕೆಫೆಯಲ್ಲಿ ಕಾನೂನುಬಾಹಿರವಾಗಿ ಹುಕ್ಕಾ ಲಾಂಜ್‍ಗಳನ್ನು ತೆರೆದು ಹುಕ್ಕಾ ಸೇದಲು ನೀಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೆಫೆಗೆ ದಾಳಿ ನಡೆಸಿ ಹುಕ್ಕಾ ಬಾರ್ ನಡೆಸುತ್ತಿದ್ದ ರಾಘವೇಂದ್ರನನ್ನು ಬಂಧಿಸಿದ್ದಾರೆ.  ಈತ ಗಿರಾಕಿಗಳಿಗೆ ಹುಕ್ಕಾ ಸೇದಲು ನೀಡಿದ್ದ ಹಾಗೂ ನೀಡು ಸಜ್ಜಾಗಿಸಿಕೊಂಡಿದ್ದ ಹುಕ್ಕಾಗೆ ಬಳಕೆ ಮಾಡುವ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮತ್ತೊಂದು ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇರ್ಫಾನ್ ಎಂಬಾತನನ್ನು ಬಂಧಿಸಿ 40000 ರೂ.ಮೌಲ್ಯದ ಹುಕ್ಕಾಗೆ ಬಳಕೆ ಮಾಡುವ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಈತನ ವಿರುದ್ಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ.

Facebook Comments