‘ಲೋಕ’ಗೆಲ್ಲಲು ಬಿಜೆಪಿ ಭರ್ಜರಿ ತಯಾರಿ : ಎಲ್ಲಾ ಕ್ಷೇತ್ರಗಳಿಗೂ ಉಸ್ತುವಾರಿಗಳ ನೇಮಕ, ಇಲ್ಲಿದೆ ಲಿಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Karnataka-BJP--01

ಬೆಂಗಳೂರು. ನ.21 ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಬಿಜೆಪಿ ಈಗಿನಿಂದಲೇ ಎಲ್ಲಾ ಕ್ಷೇತ್ರಗಳಿಗೂ ಪ್ರಭಾರಿಗಳು ಹಾಗೂ ಉಸ್ತುವಾರಿಗಳನ್ನು ನೇಮಿಸಿದೆ. ಬುಧವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಪ್ರಭಾರಿಗಳು ಹಾಗೂ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ.

ಅಭ್ಯರ್ಥಿಗಳ ಆಯ್ಕೆ, ಹಾಲಿ ಸಂಸದರ ಪ್ರಗತಿ, ಅಭ್ಯರ್ಥಿಗಳ ಬದಲಾವಣೆ,ಕ್ಷೇತ್ರದಲ್ಲಿನ ಸ್ಥಿತಿ-ಗತಿ, ಟಿಕೆಟ್ ಅಕಾಂಕ್ಷಿಗಳು, ಅಭ್ಯರ್ಥಿಗೆ ಇರುವ ಜನ ಬೆಂಬಲ, ಕ್ಷೇತ್ರದಲ್ಲಿನ ಜನಾಭಿಪ್ರಾಯ,ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಪ್ರಭಾರಿಗಳನ್ನು ಆಯ್ಕೆ ಮಾಡಲಾಗಿದೆ. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರನ್ನು ಯಾವ ಕ್ಷೇತ್ರಕ್ಕೂ ಪ್ರಭಾರಿಗಳನ್ನಾಗಿ ನೇಮಕ ಮಾಡಿಲ್ಲ.

ಹೊಸದಾಗಿ ನೇಮಕಗೊಂಡಿರುವವರಲ್ಲಿ ಈ ಹಿಂದೆ ನಿಭಾಯಿಸಿದ್ದ ಕ್ಷೇತ್ರಗಳಿಂದ ಬದಲಾವಣೆ ಮಾಡಲಾಗಿದೆ.  ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ, ಹೀನಾಯ ಸೋಲು ಕಂಡಿದ್ದ ಪಕ್ಷದ ಉಪಾಧ್ಯಕ್ಷ ಹಾಗೂ ಶಾಸಕ ಶ್ರೀರಾಮುಲುಗೆ ಬಳ್ಳಾರಿಯಿಂದ ಕೊಕ್ ನೀಡಲಾಗಿದೆ.  ಅವರಿಗೆ ಪಕ್ಕದ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಪ್ರಭಾರಿಯನ್ನಾಗಿ ನೇಮಿಸಲಾಗಿದೆ. ಉಳಿದಂತೆ ಇಲ್ಲಿಯೂ ಎಲ್ಲಾ ಸಮೂದಾಯಕ್ಕೂ ಮಣೆ ಹಾಕಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ ಕೆ.ಎಸ್.‌ಈಶ್ವರಪ್ಪ ಅವರನ್ನು ನೇಮಿಸಲಾಗಿದೆ. 20+ ಕ್ಷೇತ್ರಗಳಲ್ಲಿ ಜಯಗಳಿಸುವ ಗುರಿಯನ್ನು ಪಕ್ಷ ಹೊಂದಿದೆ.

# ಯಾವ ಜಿಲ್ಲೆಗೆ ಯಾರು ಉಸ್ತುವಾರಿ :
* ಮೈಸೂರು-ಕೊಡಗು – ಕೆ.ಎಸ್.ಈಶ್ವರಪ್ಪ
* ಚಾಮರಾಜನಗರ – ಎಲ್.ನಾಗೇಂದ್ರ
* ಮಂಡ್ಯ – ಇ.ಅಶ್ವತ್ಥ ನಾರಾಯಣ್
* ಹಾಸನ – ಸಿ.ಟಿ.ರವಿ
* ದಕ್ಷಿಣ ಕನ್ನಡ – ಸುನೀಲ್ ಕುಮಾರ್
* ಉಡುಪಿ-ಚಿಕ್ಕಮಗಳೂರು – ಆರಗ ಜ್ಞಾನೇಂದ್ರ
* ಶಿವಮೊಗ್ಗ – ವಿಶ್ವೇಶ್ವರ ಹೆಗಡೆ ಕಾಗೇರಿ
* ಉತ್ತರ ಕನ್ನಡ -ಲಿಂಗರಾಜ ಪಾಟೀಲ್
* ಹಾವೇರಿ – ಬಸವರಾಜ ಬೊಮ್ಮಾಯಿ
* ಧಾರವಾಡ – ಗೋವಿಂದ ಕಾರಜೋಳ
* ಬೆಳಗಾವಿ – ಮಹಾಂತೇಶ ಕವಟಗಿಮಠ್
* ಚಿಕ್ಕೋಡಿ – ಸಂಜಯ್ ಪಾಟೀಲ್
* ಬಾಗಲಕೋಟೆ – ಸಿ.ಸಿ.ಪಾಟೀಲ್
* ವಿಜಯಪುರ – ಲಕ್ಷ್ಮಣ ಸವದಿ
* ಬೀದರ್ – ಅಮರನಾಥ ಪಾಟೀಲ್
* ಬಳ್ಳಾರಿ – ಜಗದೀಶ್ ಶೆಟ್ಟರ್
* ಕಲಬುರಗಿ – ಎನ್.ರವಿಕುಮಾರ್
* ರಾಯಚೂರು – ಹಾಲಪ್ಪ ಆಚಾರ್
* ಕೊಪ್ಪಳ – ಬಿ.ಶ್ರೀರಾಮುಲು
* ಬಳ್ಳಾರಿ -ಜಗದೀಶ್ ಶೆಟ್ಟರ್
* ದಾವಣಗೆರೆ – ಆಯನೂರು ಮಂಜುನಾಥ್
* ಚಿತ್ರದುರ್ಗ – ವೈ.ಎ.ನಾರಾಯಣಸ್ವಾಮಿ
* ತುಮಕೂರು – ಅರವಿಂದ ಲಿಂಬಾವಳಿ ಬೆಂಗಳೂರು, ಕೋಲಾರ ಉಸ್ತುವಾರಿ
* ವಿ.ಸೋಮಣ್ಣ – ಚಿಕ್ಕಬಳ್ಳಾಪುರಕ್ಕೆ
* ಬೆಂಗಳೂರು ಗ್ರಾಮಾಂತರ – ಅಶ್ವತ್ಥ ನಾರಾಯಣ್
* ಚಿಕ್ಕಬಳ್ಳಾಪುರ – ವಿ.ಸೋಮಣ್ಣ
* ಕೋಲಾರ – ಕಟ್ಟಾ ಸುಬ್ರಮಣ್ಯ ನಾಯ್ಡು
* ಬೆಂಗಳೂರು ದಕ್ಷಿಣ – ಸುಬ್ಬನರಸಿಂಹ
* ಬೆಂಗಳೂರು ಕೇಂದ್ರ – ಡಾ.ಅಶ್ವತ್ಥ ನಾರಾಯಣ್
* ಬೆಂಗಳೂರು ಉತ್ತರ – ಬಿ.ಎಚ್.ಕೃಷ್ಣಾ ರೆಡ್ಡಿ

Facebook Comments

Sri Raghav

Admin