ಬೆಂಗಳೂರಲ್ಲಿ ನಡೆದ ದೀಪ್-ವೀರ್ ಅದ್ದೂರಿ ಆರತಕ್ಷತೆಯ ಕ್ಷಣಗಳು ಇಲ್ಲಿವೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Deepika--001

ಬೆಂಗಳೂರು, ನ.21- ಇಟಲಿಯ ನಯನ ಮನೋಹರ ಲೇಕ್‍ಕೋಮೋ ದ್ವೀಪದಲ್ಲಿ ನ.14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸೂಪರ್ ಸ್ಟಾರ್‍ಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್‍ಸಿಂಗ್ ಅವರ ಅದ್ಧೂರಿ ಆರತಕ್ಷತೆ ಸಮಾರಂಭ ಇಂದು ಉದ್ಯಾನನಗರಿಯ ಖಾಸಗಿ ಹೋಟೆಲ್‍ನಲ್ಲಿ ನೆರವೇರಿತು. ನಗರದ ಪ್ರತಿಷ್ಠಿತ ದಿ ಲೀಲಾ ಪ್ಯಾಲೆಸ್ ಪಂಚತಾರಾ ಹೋಟೆಲ್‍ನಲ್ಲಿ ದೀಪ್ವೀರ್ ವೆಡ್ಡಿಂಗ್ ರಿಸೆಪ್ಷನ್ ನಡೆದಿದೆ.

ಕನ್ನಡ, ತೆಲಗು, ತಮಿಳು ಮತ್ತು ಮಲೆಯಾಳಂ ಚಿತ್ರರಂಗದ ಖ್ಯಾತ ನಾಮರು, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಹಾಗೂ ರಾಜಕೀಯ ಮುಖಂಡರು ಈ ಅದ್ಧೂರಿ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡು ಸ್ಟಾರ್ ಕಪಲ್‍ಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದ ಪ್ರಯುಕ್ತ ಲೀಲಾ ಪ್ಯಾಲೆಸ್ ಸುತ್ತಮುತ್ತ ಭಾರೀ ಬಂದೋಬಸ್ತ್ ಮಾಡಲಾಗಿದೆ.

ನಿನ್ನೆಯೇ ದೀಪಿಕಾ ಮತ್ತು ರಣವೀರ್ ಬೆಂಗಳೂರಿಗೆ ಆಗಮಿಸಿದ್ದರು. ಆರತಕ್ಷತೆ ನಂತರ ನಾಳೆ ಬೆಳಗ್ಗೆ ಮುಂಬೈಗೆ ತೆರಳಲಿರುವ ತಾರಾ ದಂಪತಿ ವಾಣಿಜ್ಯ ನಗರಿ ಮುಂಬೈನಲ್ಲಿ ಸಂಜೆ ನಡೆಯಲಿರುವ ಮತ್ತೊಂದು ಭವ್ಯ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಾಲಿವುಡ್ , ಉತ್ತರ ಭಾರತ ಚಿತ್ರರಂಗದ ಗಣ್ಯರು, ಕೇಂದ್ರ ಸರ್ಕಾರದ ನಾಯಕರು ಈ ಸಮಾರಂಭದಲ್ಲಿ ಭಾಗವಹಿಸಿ ದೀಪ್ವೀರ್‍ಗೆ ಶುಭ ಕೋರಲಿದ್ದಾರೆ.

WhatsApp Image 2018-11-21 at 9.09.58 PM WhatsApp Image 2018-11-21 at 9.10.01 PM WhatsApp Image 2018-11-21 at 9.10.02 PM WhatsApp Image 2018-11-21 at 9.10.03 PM WhatsApp Image 2018-11-21 at 9.10.04 PM WhatsApp Image 2018-11-21 at 9.10.05 PM WhatsApp Image 2018-11-21 at 9.10.06 PM WhatsApp Image 2018-11-21 at 9.10.07 PM WhatsApp Image 2018-11-21 at 9.10.08 PM WhatsApp Image 2018-11-21 at 9.10.09 PM(1) WhatsApp Image 2018-11-21 at 9.10.09 PM

DsiDX2TVYAAz2tD DsieQH4XcAApjdn DsiICDsX4AAyuYk DsiJUTjWsAAJ3Oh DsiKj4BVAAAQ0s_ DsiKkAhU4AIMQRI DsiKpm1XcAAhx_I DsiKpm2WoAAlTfN DsiLaRbU0AAfVKk DsiNS_CWoAAyP41 DsiW2SEXoAI4j64 DsiW2SGWsAEGvGr DsiW3lvW0AIDsry

Facebook Comments

Sri Raghav

Admin