ದೆಹಲಿಗೆ ನುಗ್ಗಿದ ಇಬ್ಬರು ಕುಖ್ಯಾತ ಉಗ್ರರು, ರೆಟ್ಅಲರ್ಟ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

High-Alert--01

ನವದೆಹಲಿ, ನ.21- ಪಂಜಾಬ್ ಗಡಿಯಿಂದ ಭಾರತದೊಳಗೆ ನುಸುಳಿರುವ ಇಬ್ಬರು ಕುಖ್ಯಾತ ಉಗ್ರರ ಭಾವಚಿತ್ರವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ದೆಹಲಿಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ವರಿಷ್ಠಾಧಿಕಾರಿಗಳು, ಪಂಜಾಬ್ ಪ್ರಾಂತ್ಯದಿಂದ ಇಬ್ಬರು ಉಗ್ರರು ನುಸುಳಿದ್ದಾರೆ. ಪ್ರಸ್ತುತ ರಾಷ್ಟ್ರ ರಾಜಧಾನಿಯನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದಾರೆ. ಈಗಾಗಲೇ ರಾಜಧಾನಿ ತಲುಪಿರುವ ಶಂಕೆ ಇದೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಅಂತೆಯೇ ಯಾರ ಬಗ್ಗೆಯಾದರೂ ಶಂಕೆ ವ್ಯಕ್ತವಾದರೆ ಪಹರ್ ಗಂಜ್ ಪೊಲೀಸ್ ಠಾಣೆಯ 011-23520787 ಮತ್ತು 011-2352474 ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.  ಇತ್ತೀಚೆಗಷ್ಟೆ ಪಂಜಾಬ್ ಪೊಲೀಸರು ದೆಹಲಿಯಿಂದ ಸುಮಾರು 360 ಕಿಮೀ ದೂರದಲ್ಲಿರುವ ಪಂಜಾಬ್ ಫಿರೋಜ್‍ಪುರ ಗಡಿ ಮೂಲಕ ಇಬ್ಬರು ಉಗ್ರರು ಭಾರತದೊಳಗೆ ನುಸುಳಿದ್ದಾರೆ ಎಂದು ಹೇಳಿದ್ದರು.

ನುಸುಳಿರುವ ಇಬ್ಬರೂ ಉಗ್ರರು ಕುಖ್ಯಾತ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಗೆ ಸೇರಿದ ಉಗ್ರರಾಗಿದ್ದು, ದೊಡ್ಡಮಟ್ಟದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಗುಪ್ತಚರ ವರದಿ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin