ಪ್ರೇಮಿಗಳ ಮರ್ಯಾದ ಹತ್ಯೆ : ಯುವತಿಯ ತಂದೆ ಸೇರಿ 6 ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Honor-Killing

ಮಳವಳ್ಳಿ,ನ.21- ತಾಲ್ಲೂಕಿನ ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿವನಸಮುದ್ರ(ಬ್ಲಫ್) ಎಸ್.ಬಿ.ಆರ್ ಕೆರೆಯಲ್ಲಿ ಜೋಡಿ ಶವ ಪತ್ತೆ ಹಿನ್ನಲೆಯಲ್ಲಿ ಬೆಳಕವಾಡಿ ಪೊಲೀಸರು ತನಿಖೆ ನಡೆಸಿ ಇದು ಮರ್ಯಾದ ಹತ್ಯೆ ಎಂಬುದು ಸಾಬೀತಾದ ಕಾರಣ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೂಸೂರು ತಾಲ್ಲೂಕಿನ ಚೂಡಗೌಂಡನಹಳ್ಳಿ ಗ್ರಾಮದವರಾದ ನಂದೀಶ್ ಹಾಗೂ ಸ್ವಾತಿ ಎಂಬ ಪ್ರೇಮಿಗಳ ಶವ ಶಿವನಸಮುದ್ರದ ಎಸ್‍ಬಿಆರ್ ಕೆರೆಯಲ್ಲಿ ಪತ್ತೆಯಾಗಿದ್ದವು.ಪ್ರಕರಣವನ್ನು ಬೆಳಕವಾಡಿ ಪೊಲೀಸರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡು ಮೃತ ಸ್ವಾತಿಯ ತಂದೆ ಶ್ರೀನಿವಾಸ್, ದೊಡ್ಡಪ್ಪಂದಿರಾದ ವೆಂಕಟೇಶ್, ಅಶ್ವಥ್, ಚಿಕ್ಕಪ್ಪ ವೆಂಕರಾಮು, ಸಂಬಂಧಿ ಕೃಷ್ಣಸ್ವಾಮಿ, ಸ್ನೇಹಿತ ಲಕ್ಷಣ್ ಎಂಬುವರನ್ನು ಬಂಧಿಸಿದ್ದಾರೆ.

ಮತ್ತೊಬ್ಬ ಆರೋಪಿ ಸ್ವಾಮಿನಾಥನ್ ತಲೆ ಮರೆಸಿಕೊಂಡಿದ್ದು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ,ಶಿವಪ್ರಕಾಶ್ ದೇವರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಸ್ವಾತಿ ತಿಗಳ ಸಮುದಾಯಕ್ಕೆ ಸೇರಿದ್ದು ಅದೇ ಗ್ರಾಮದಪರಿಶಿಷ್ಟ ಜÁತಿಯ ಯುವಕ ನಂದೀಶನನ್ನು ಕಳೆದ ಒಂದುವರ್ಷದಿಂದ ಪ್ರೀತಿಸುತ್ತಿದ್ದು ಪೋಷಕರ ವಿರೋಧದ ನಡುವೆಯೂ ಮದುವೆಯಾಗಿ ಹೊಸೂರಿನಲ್ಲಿ ವಾಸವಾಗಿದ್ದರು.

ಹೊಸೂರಿನಲ್ಲಿ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ತೆರಳಿದ್ದ ಸಂಧರ್ಭದಲ್ಲಿ ಗ್ರಾಮದವರು ನೋಡಿದ್ದು ಸ್ವಾತಿಯ ತಂದೆಗೆ ವಿರ್ಷವನ್ನು ತಿಳಿಸಿದ್ದಾರೆ ಅವರಿಬ್ಬರನ್ನು ಪತ್ತೆ ಹಚ್ಚಿದ ಸ್ವಾತಿಯ ತಂದೆ ಹಾಗೂ ಸಂಬಂಧಿಕರು ಇವರಿಬ್ಬರನ್ನು ಹೊಸೂರಿನಿಂದ ಕನಕಪುರ ಮಾರ್ಗವಾಗಿ ಟಾಟಾ ಸಮೋದಲ್ಲಿ ಶಿವನಸಮುದ್ರ ಬಳಿ ಕರತಂದು ಹಲ್ಲೆ ಮಾಡಿ ಕೈಕಾಲು ಕಟ್ಟಿ ಜೀವಂತವಾಗಿ ನೀರಿಗೆ ಎಸೆದು ಹತ್ಯೆ ಮಾಡಿದ್ದರು ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.

Facebook Comments

Sri Raghav

Admin