ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲು

ಈ ಸುದ್ದಿಯನ್ನು ಶೇರ್ ಮಾಡಿ

Match--01

ಬ್ರಿಸ್ಬೇನ್‌.ನ.21 : ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಪ್ರೇಲಿಯಾ 4 ರನ್ ಗಳ ಅಂತರದಿಂದ ರೋಚಕ ಜಯ ಗಳಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಂಟಿಂಗ್ ಮಾಡಿದ ಆಸ್ಟ್ರೇಲಿಯಾ 16.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 153ರ ನ್ ಗಳಿಸಿದ್ದಾಗ ಮಳೆ ಪಂದ್ಯಕ್ಕೆ ಅಡ್ಡಿಯಾಯಿತು. ಮಳೆಯಿಂದಾಗಿ ಪಂದ್ಯವನ್ನು 17 ಓವರ್‌ಗೆ ಸೀಮಿತಗೊಳಿಸಲಾಯಿತು. ಮಳೆ ನಿಂತ ಬಳಿಕ ಇನ್ನೊಂದು ಓವರ್ ಆಡಿದ ಆಸ್ಟ್ರೇಲಿಯ 17 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ನಂತರ ಡ್ಕವರ್ಟ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 174 ರನ್ ಗುರಿ ನೀಡಲಾಗಿತ್ತು.

174 ರನ್ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾಗೆ ಶಿಖರ್ ಧವನ್ ಆಸರೆಯಾದರು. ಆದರೆ ರೋಹಿತ್ ಶರ್ಮಾ,ಕೆಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಶಿಖರ್ ಧವನ್ ಟಿ20 ಕ್ರಿಕೆಟ್‌ನಲ್ಲಿ 9ನೇ ಅರ್ಧ ಶತಕ ಸಿಡಿಸಿದರು. ಆದರೆ ಧವನ್‌ಗೆ ಟೀಂ ಇಂಡಿಯಾದ ಇತರ ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಧವನ್ 76 ರನ್ ಸಿಡಿಸಿ ಔಟಾದರು.

ನಂತರ ಕೊನೆಯ ಓವರ್ ನಲ್ಲಿ 13 ರನ್ ಗಳು ಬೇಕಾಗಿತ್ತು, ಸ್ಟಾನಿಸ್ ಅವರ ಚಮತ್ಕಾರಿ ಬೌಲಿಂಗ್ ನಲ್ಲಿ ದಿನೇಶ್ ಕಾರ್ತಿಕ್ ಮತ್ತು ಕುನಾಲ್ ಪಾಂಡ್ಯ ಔಟಾದರು. ಆಗ ಭಾರತದ ಜಯದ ಆಸೆ ಕಮರಿತು. ಅಂತಿಮವಾಗಿ ನಿಗದಿತ 17 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳನ್ನೂ ಮಾತ್ರ ಕಲೆಹಾಕಲು ಸಾಧ್ಯವಾಯಿತು. ಈ ಮೂಲಕ 3 ಟಿ-20 ಸರಣಿಯಲ್ಲಿ 1-0 ಅಂತರದಿಂದ ಆಸ್ಟ್ರೇಲಿಯಾ ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ಪರ ಆಲ್‌ರೌಂಡರ್ ಮ್ಯಾಕ್ಸ್‌ವೆಲ್(46,24 ಎಸೆತ, 4 ಸಿಕ್ಸರ್) ಹಾಗೂ ಸ್ಟೋನಿಸ್(33,19 ಎಸೆತ, 3 ಬೌಂಡರಿ, 1 ಸಿಕ್ಸರ್)ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಗಳಿಸಿದರು. ನಾಯಕ ಫಿಂಚ್(27) ಹಾಗೂ ಲಿನ್(37) 2ನೇ ವಿಕೆಟ್‌ಗೆ 40 ರನ್ ಜೊತೆಯಾಟ ಆಡಿದರು.

# ಸಂಕ್ಷಿಪ್ತ ಸ್ಕೋರ್ :
ಆಸ್ಟ್ರೇಲಿಯಾ : 158/4
ಭಾರತ : 169/7 (17 ov, target 174)

Facebook Comments