BREAKING : ಹಠಾತ್ ಬೆಳವಣಿಗೆಯಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆ

ಈ ಸುದ್ದಿಯನ್ನು ಶೇರ್ ಮಾಡಿ

Governer--01
ನವದೆಹಲಿ. ನ.21 : ಹಠಾತ್ ಬೆಳವಣಿಗೆಯಲ್ಲಿ ಕಣಿವೆ ರಾಜ್ಯ ಜಮ್ಮುಮತ್ತು ಕಾಶ್ಮೀರದಲ್ಲಿನ ವಿಧಾನಸಭೆಯನ್ನು ಅಲ್ಲಿನ ರಾಜ್ಯಪಾಲ ಸತ್ಯಪಾಲ್ ವಿಸರ್ಜನೆ ಮಾಡಿದ್ದಾರೆ. ಇದರೊಂದಿಗೆ ಹೊಸ ಸರ್ಕಾರ ರಚನೆ ಮಾಡಲು ತುದಿಗಾಲಲ್ಲಿ ನಿಂತಿದ್ದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ಜಮ್ಮು ಕಾಶ್ಮೀರ ಪೀಪಕ್ಸ್ ಕಾನ್ಫರೆನ್ಸ್ನ ಸಜದ್ ಲೋನ್ ಅವರಿಬ್ಬರ ಕನಸುಗಳೂ ಭಗ್ನಗೊಂಡಿದೆ.

ಮಾಜಿ ಸಿಎಂ ಮಹೆಬೂಬಾ ಮುಫ್ತಿ ಅವರು ಹೊಸ ಮೈತ್ರಿ ಕೂಟದೊಂದಿಗೆ ಸರ್ಕಾರ ರಚನೆ ಮಾಡುವುದಾಗಿ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿದ್ದರು. ತಮಗೆ ಎನ್ಸಿ, ಕಾಂಗ್ರೆಸ್ನ ಬೆಂಬಲ ಇರುವುದಾಗಿ ಅವರು ಮನವಿ ಪತ್ರ ಸಲ್ಲಿಸಿದ್ದರು. ಜಮ್ಮು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ನ ಮುಖ್ಯಸ್ಥ ಸಜದ್ ಲೋನ್ ಅವರು ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವ ಇರಾದೆಯಲ್ಲಿದ್ದರು. ಆದರೆ, ರಾಜ್ಯಪಾಲರು ಇಬ್ಬರ ಆಸೆಗೂ ತಣ್ಣೀರೆರಚಿದ್ದು, ವಿಧಾನಸಭೆ ವಿಸರ್ಜಿಸುವ ನಿರ್ಧಾರ ಕೈಗೊಂಡಿದ್ದಾರೆ.

ಸರ್ಕಾರ ರಚಿಸಲು ಮಾಜಿ ಮುಖ್ಯಮಂತ್ರಿ ಮುಪ್ತೀ ಮೊಹಮ್ಮದ್ ಸೈಯ್ಯದ್ ರಾತ್ರಿ ರಾಜ್ಯಪಾಲ ಸತ್ಯಪಾಲ್ ಅವರನ್ನು ಭೇಟಿ ಮಾಡಿ ಹಕ್ಕು ಮಂಡಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಬದ್ಧ ವೈರಿಗಳೇ ಎಂದು ಬಿಂಬಿತವಾಗಿದ್ದ ಕಾಂಗ್ರೆಸ್‌ ಮತ್ತು ಪಿಡಿಪಿ ಮತ್ತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಮುಂದಾಗಿದ್ದವು.  ಈ ಮೈತ್ರಿಗೆ ನ್ಯಾಷನಲ್‌ ಕಾನ್ಫರೆನ್ಸ್ ಕೂಡ ಬೆಂಬಲ ವ್ಯಕ್ತಪಡಿಸಿತ್ತು. ಅದರಂತೆ ಬುಧವಾರ ಸರ್ಕಾರ ರಚನೆ ಮಾಡುವ ಸಂಬಂಧ ರಾಜ್ಯಪಾಲರಿಗೆ ಪಿಡಿಪಿ ಪತ್ರ ಬರೆದಿತ್ತು. 87 ಶಾಸಕ ಬಲವನ್ನು ಹೊಂದಿರುವ ವಿಧಾನಸಭೆಯಲ್ಲಿ ಪಿಡಿಪಿ 29 ಶಾಸಕರ ಬಲವನ್ನು ಹೊಂದಿದ್ದವು.

ಕಾಂಗ್ರೆಸ್ ಮತ್ತು ರಾಷ್ಟ್ರೀಯ ಸಮ್ಮೇಳನವು ಪಿಡಿಪಿಯೊಂದಿಗೆ ಸರ್ಕಾರವನ್ನು ರೂಪಿಸಲು ಒಪ್ಪಿಕೊಂಡಿದ್ದು, ಎನ್ಸಿಪಿ 15 ಶಾಸಕರು ಮತ್ತು ಕಾಂಗ್ರೆಸ್ 12 ಶಾಸಕರನ್ನು ಹೊಂದಿದೆ. ಈ ಮೂಲಕ 56 ಶಾಸಕರ ಬೆಂಬಲವನ್ನು ಹೊಂದಿದ್ದೇವೆ. ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಡಬೇಕು ಅಂತಾ ರಾಜ್ಯಪಾಲರಿಗೆ ಪಿಡಿಪಿ ಪತ್ರ ಬರೆದಿತ್ತು. ಕಾಶ್ಮೀರದಲ್ಲಿ ಅಧಿಕಾರದಲ್ಲಿದ್ದ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಜೂನ್ 16ರಂದು ಪತನಗೊಂಡಿತ್ತು. ಬಿಜೆಪಿ ತನ್ನ ಬೆಂಬಲವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಸರ್ಕಾರ ಪತನಗೊಂಡಿತ್ತು.

ಇದಕ್ಕಿಂತ ಕೆಲ ನಿಮಿಷಗಳ ಮೊದಲು ಪಿಡಿಪಿಯ ಮೆಹಬೂಬಾ ಮುಫ್ತಿ ಮತ್ತು ಸಜಾದ್ ಲೋನ್ ಸರಕಾರ ರಚಿಸುವುದಾಗಿ ಟ್ವೀಟ್ ಮಾಡಿದ್ದರು. “ರಾಜಭವನಕ್ಕೆ ಈ ಪತ್ರವನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದೇನೆ. ಫ್ಯಾಕ್ಸ್ ಇನ್ನೂ ಸ್ವೀಕರಿಸಿಲ್ಲ” ಎಂದು ಮೆಹಬೂಬಾ ಮುಫ್ತಿ ಪತ್ರವೊಂದನ್ನು ಟ್ವೀಟ್ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದ 56 ಶಾಸಕರ ಬೆಂಬಲ ತನಗಿದೆ. ಇದರಲ್ಲಿ ನ್ಯಾಶನಲ್ ಕಾನ್ಫರೆನ್ಸ್ ನ 15 ಶಾಸಕರು ಮತ್ತು ಕಾಂಗ್ರೆಸ್ ನ 12 ಶಾಸಕರಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

ಈ ಬಗ್ಗೆ ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ “ಮೆಹಬೂಬಾ ಮುಫ್ತಿ ಸರಕಾರ ರಚನೆಯ ಹೇಳಿಕೆ ನೀಡಿದ ನಿಮಿಷಗಳಲ್ಲೇ ವಿಧಾನಸಭೆ ವಿಸರ್ಜನೆಯ ಆದೇಶ ಹೊರಬಿದ್ದಿರುವುದು ಕಾಕತಾಳೀಯವಲ್ಲ” ಎಂದಿದ್ದಾರೆ.  ಮಾಜಿ ಹಣಕಾಸು ಸಚಿವರಾಗಿದ್ದ ಅಲ್ತಾಫ್ ಬುಖಾರಿ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲು ಮೂರೂ ಪಕ್ಷಗಳ ಸಹಮತ ದೊರಕಿತ್ತು.

Jammu--01

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಮೂರು ಪಕ್ಷಗಳು ಒಗ್ಗಟ್ಟಾಗಿ ಸರ್ಕಾರ ರಚಿಸಲು ಮುಂದಾಗಿರುವುದು ಸತ್ಯ. ಸದ್ಯದಲ್ಲೇ ರಾಜ್ಯದ ಜನರಿಗೆ ಶುಭಸುದ್ದಿ ನೀಡಲಿದ್ದೇವೆ ಎಂದಿದ್ದರು. ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಪಕ್ಷದಲ್ಲಿ 26 ಶಾಸಕರಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ನಲ್ಲಿ 15 ಶಾಸಕರು ಮತ್ತು ಕಾಂಗ್ರೆಸ್ನಲ್ಲಿ 12 ಶಾಸಕರಿದ್ದಾರೆ. ಸರ್ಕಾರ ರಚಿಸಲು ಬೇಕಾದ 44 ಶಾಸಕರ ಬೆಂಬಲ ಇರುವುದರಿಂದ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಲು ಬೇರಾವ ಅಡೆತಡೆಯೂ ಎದುರಾಗುವುದಿಲ್ಲ ಎಂದು ಅಂದಾಜಿಸಲಾಗಿತ್ತು.

ಈ ಮಹಾಮೈತ್ರಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಯಾವುದೂ ಇನ್ನೂ ಖಚಿತವಾಗಿಲ್ಲ. ನಿರ್ಧಾರ ಅಂತಿಮಗೊಂಡ ನಂತರ ಸರ್ಕಾರ ರಚನೆಯ ಬಗ್ಗೆ ಘೋಷಿಸಲಾಗುವುದು ಎಂದಿದ್ದರು. ಸದ್ಯಕ್ಕೆ ರಾಜ್ಯಪಾಲರ ಆಡಳಿತದಲ್ಲಿರುವ ಜಮ್ಮು ಕಾಶ್ಮೀರದಲ್ಲಿ ಡಿಸೆಂಬರ್ 19ರೊಳಗೆ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಇದೆ. ಈ ಮೊದಲು ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಮುಖ್ಯಮಂತ್ರಿಯಾಗಿದ್ದರು. ಆದರೆ, ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಜೂನ್ 16ರಂದು ಬಿಜೆಪಿ ಹಿಂಪಡೆದಿದ್ದರಿಂದ ಸರ್ಕಾರ ಪತನಗೊಂಡಿತ್ತು. ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಅವರನ್ನು ಬಿಟ್ಟು ಮತ್ತೋರ್ವ ನಾಯಕ ಅಲ್ತಾಫ್ ಬುಖಾರಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುತ್ತಿರುವುದರಿಂದ ಪಿಡಿಪಿಯಲ್ಲೂ ಭಿನ್ನಾಭಿಪ್ರಾಯ ಉಂಟಾಗಿತ್ತು.

Facebook Comments

Sri Raghav

Admin