ಶಬರಿಮಲೆ ರಕ್ಷಣೆಗಾಗಿ ಅಯೋಧ್ಯೆ ರೀತಿ ಹೋರಾಟ ಮಾಡುವುದಾಗಿ ವಿಹೆಚ್‍ಪಿ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Sabarimala
ನವದೆಹಲಿ, ನ.21- ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲ ರಕ್ಷಣೆ ಮಾಡಲು ಅಯೋಧ್ಯೆ ರೀತಿಯಲ್ಲಿಯೇ ಪ್ರತಿಭಟನೆ ನಡೆಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ (ವಿಹೆಚ್‍ಪಿ) ಘೋಷಿಸಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಲು ನಿರ್ಧರಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ತೀವ್ರವಾಗಿ ಕಿರಿಕಾರಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಅದಿಲ್ ಷಾ ಹಾಗೂ ಔರಂಗಜೇಬ್‍ರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಹೆಚ್‍ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಟೀಕಿಸಿದ್ದಾರೆ.

ಹಿಂದೂಗಳ ನಂಬಿಕೆ ಹಾಗೂ ಸಂಪ್ರದಾಯಗಳಿಗೆ ಧಕ್ಕೆಯುಂಟು ಮಾಡಲಾಗುತ್ತಿದೆ. ಅಲ್ಲಿನ ಮುಖ್ಯಮಂತ್ರಿಗಳು ಕೇರಳವನ್ನು ಕಾಶ್ಮೀರದಂತೆ ಹಿಂದೂ ಮುಕ್ತ ರಾಜ್ಯವಾಗಿಸಲು ಹೊರಟಿದ್ದಾರೆ. ಶಬರಿಮಲೆ ವಿಚಾರದಲ್ಲಿ ಅವರ ವರ್ತನೆ ಹಾಗೆಯೇ ಇದೆ.

ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಲು ಮುಂದಾಗುವ ಮೂಲಕ ಹಿಂದೂಗಳಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ಮಹಿಳೆಯರ ಹಕ್ಕು ರಕ್ಷಣೆ ಮಾಡುವ ಹೆಸರಿನಲ್ಲಿ ಮಹಿಳೆಯರನ್ನು ತೀವ್ರವಾಗಿ ನಿಂದಿಸುತ್ತಿದ್ದಾರೆಂದು ತಿಳಿಸಿದ್ದಾರೆ.

Facebook Comments

Sri Raghav

Admin