ಕ್ಯಾಲಿಪೋರ್ನಿಯಾ ಕಾಡ್ಗಿಚ್ಚಿನಲ್ಲಿ ಗಾಯಗೊಂಡ ಪ್ರಾಣಿಗಳ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಅಮೆರಿಕದ ಕ್ಯಾಲಿಪೋರ್ನಿಯಾ ಪ್ರಾಂತ್ಯ, ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಕಾಡ್ಗಿಚ್ಚಿನಿಂದ ತತ್ತರಿಸಿದೆ. ಬೆಂಕಿಯ ಕೆನ್ನಾಲಿಗೆಯ ರೌದ್ರಾವತಾರಕ್ಕೆ ಸಾವು-ನೋವು, ಅಪಾರ ನಷ್ಟ ಸಂಭವಿದೆ. ಇದೇ ವೇಳೆ ಓಜೈ ಮತ್ತು ಮಾಲಿಬು ಪ್ರದೇಶಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಮತ್ತು ಗಾಯಗೊಂಡ ಜಾನುವಾರುಗಳು ಮತ್ತು ಸಾಕು ಪ್ರಾಣಿಗಳನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ.

ಕ್ಯಾಲಿಪೋರ್ನಿಯಾದ ಪ್ಯಾರಾಡೈಸ್ ನಗರವನ್ನು ಸುಟ್ಟು ಬೂದಿ ಮಾಡಿದ ಕಾಡ್ಗಿಚ್ಚು ಅತಿ ವೇಗದಲ್ಲಿ ಇತರ ಪ್ರದೇಶಗಳಿಗೂ ಹಬ್ಬುತ್ತಿದೆ. ಓಜೈ ಪಟ್ಟಣವನ್ನು ಕಾಡಿನ ಬೆಂಕಿ ಧಗಧಗಿಸುವುದಕ್ಕೆ ಮುನ್ನ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾದ ರಕ್ಷಣಾ ಕಾರ್ಯಕರ್ತರು ಅನೇಕ ಕುದುರೆಗಳು, ಕತ್ತೆಗಳು, ಹಂದಿಗಳು, ಮೊಲಗಳು ಹಾಗೂ ಇತರ ಜಾನುವಾರು ಮತ್ತು ಪ್ರಾಣಿಗಳನ್ನು ರಕ್ಷಿಸಿದರು. ಇವುಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ನೀಡಲಾಗಿದೆ.

ನವೆಂಬರ್ 8ರಂದು ಭುಗಿಲೆದ್ದ ಕ್ಯಾಂಪ್ ಫೈರ್ ಮತ್ತು ವೂಸ್ಲಿ ಫೈರ್ ಹೆಸರಿನ ಕಾಡ್ಗಿಚ್ಚುಗಳು ಈವರೆಗೆ 80ಕ್ಕೂ ಹೆಚ್ಚು ಜನರನ್ನು ಆಪೋಶನ ತೆಗೆದುಕೊಂಡಿದೆ. ನೂರಾರು ಜನರು ತೀವ್ರ ಗಾಯಗೊಂಡಿದ್ಧಾರೆ. ನಾಪತ್ತೆಯಾಗಿರುವ 1,200ಕ್ಕೂ ಹೆಚ್ಚು ಜನರಿಗಾಗಿ ಶೋಧ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

animals

ಅಪಾಯಕ್ಕೆ ಸಿಲುಕಿದ್ದ ಎರಡು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸ ಲಾಗಿದೆ. ಪ್ಯಾರಾಡೈಸ್ ನಗರದಲ್ಲಿ 27,000 ಜನರು ಕಾಡ್ಗಿಚ್ಚಿನಿಂದ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಪ್ಯಾರಾಡೈಸ್, ಓಜೈ ಮತ್ತು ಮಾಲಿಬು ನಗರಗಳಲ್ಲಿ 58,000 ಮನೆಗಳು ಭಸ್ಮವಾಗಿವೆ, ಕಾರುಗಳು ಮತ್ತು ಇತರ ವಾಹನಗಳು ಬೆಂಕಿಗಾಹುತಿಯಾಗಿವೆ. ಅರಣ್ಯ ಬೆಂಕಿಯಿಂದ ಲಕ್ಷಾಂತರ ಹೆಕ್ಟೇರ್ ಅರಣ್ಯ ಪ್ರದೇಶ ಹಾನಿಗೀಡಾಗಿದ್ದು, ಅನೇಕ ವನ್ಯ ಜೀವಿಗಳನ್ನೂ ಸಹ ಕಾಡ್ಗಿಚ್ಚಿನ ಕೆನ್ನಾಲಿಗೆ ಬಲಿ ಪಡೆದಿವೆ. ಅಪಾರ ವನಸಂಪತ್ತು ಭಸ್ಮವಾಗಿದೆ.

Facebook Comments