ಗಡಿಭಾಗದ ಜನರಲ್ಲಿನ ಭಾಷಾ ಬಾಂಧವ್ಯ ಬೆಳೆಸುವ ‘ಹಲ್ಮಿಡಿ’ ಚಿತ್ರ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

Helmidi--01

ಕನ್ನಡ ಪ್ರಾಚೀನತೆಯನ್ನು ಗುರುತಿಸುವಲ್ಲಿ ಹಲ್ಮಿಡಿ ಶಾಸನಕ್ಕೆ ವಿಶೇಷವಾದ ಮಹತ್ವವಿದೆ. ಇಂತಹ ಹಲ್ಮಿಡಿ ಹೆಸರಿನ ಕನ್ನಡ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರ ಕನ್ನಡ ಭಾಷೆಯ ಪರಿಸ್ಥಿತಿಯ ಕುರಿತಂತೆ ಚಿಂತನೆ ನಡೆಸುವ ಕಥಾವಸ್ತು ಹೊಂದಿದೆ. ಟೆಕ್ನೋಮಾರ್ಕ್ ಸಂಸ್ಥೆಯಿಂದ ನಿರ್ಮಿಸಿರುವ ಈ ಚಿತ್ರದ ನಿರ್ಮಾಣ-ನಿರ್ದೇಶನವನ್ನು ಎನ್.ಶಿವಾನಂದಂ ಮಾಡಿದ್ದು, ಡಾ.ಎಂ.ಮೊಹಮ್ಮದ್ ಭಾಷಾ ಗೂಳ್ಯಮ್ ಚಿತ್ರದ ಕಥೆ ರಚಿಸಿ, ಸಂಭಾಷಣೆ ಬರೆದಿದ್ದಾರೆ. ಸಂಕಲನ-ಬಿ.ಶರವಣ, ಛಾಯಾಗ್ರಣ-ಪಿವಿಆರ್ ಸ್ವಾಮಿ, ಕಾರ್ಯಕಾರಿ ನಿರ್ಮಾಪಕ ಎನ್.ಲಕ್ಷ್ಮಿ ಅವರು ಕಾರ್ಯ ನಿರ್ವಹಿಸಿದ್ದಾರೆ.

ಚಾಮರಾಜನಗರದ ಬಳಿ ಗಡಿ ಪ್ರದೇಶವಾದ ತಮಿಳುನಾಡಿಗೆ ಸೇರಿರುವ ತಾಳವಾಡಿ ಮತ್ತು ಡಾ.ರಾಜ್‍ಕುಮಾರ್ ಹುಟ್ಟೂರಾದ ಗಾಜನೂರಿನ ಸುತ್ತಮುತ್ತ ಹಲ್ಮಿಡಿ ಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದೆ. ಗಡಿಭಾಗದ ಜನರಲ್ಲಿನ ಪರಸ್ಪರ ಭಾಷಾ ಬಾಂಧವ್ಯ ಹಾಗೂ ಭಾವನಾತ್ಮಕ ಬಾಂಧವ್ಯ ಬೆಸೆಯವ ನಿಟ್ಟಿನಲ್ಲಿ ತಯಾರಾದ ಈ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಟ ಹೆಚ್.ಜಿ.ದತ್ತಾತ್ರೇಯ, ನೀನಾಸಂ ಅಶ್ವಥ್, ಮುನಿ, ಪ್ರಿಯ ಕೆಸರೆ, ನಿರಂಜನ್‍ಕುಮಾರ್, ಪೃಥ್ವಿ, ರಾಧಾಶ್ರೀ ಮುಂತಾದವರು ಅಭಿನಯಿಸಿದ್ದಾರೆ.

ಗಡಿಪ್ರದೇಶದ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುತ್ತಿರುವ ತಾಳವಾಡ ಜನರ ಬದುಕು-ಬವಣೆ, ಕನ್ನಡ ಪ್ರೇಮ, ಸೌಹಾರ್ದತೆ ಇವುಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಕನ್ನಡದ ಹುಡುಗ-ತಮಿಳು ಹುಡುಗಿ ಶುದ್ಧ ಪ್ರೇಮದ ಕಥೆಯ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin