ಸಾಲಬಾದೆಯಿಂದ ಕೆರೆಗೆ ಹಾರಿ ತಂದೆ ಆತ್ಮಹತ್ಯೆ, ರಕ್ಷಿಸಲು ಹೋದ ಮಗನೂ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

formea susideಚಿಕ್ಕಮಗಳೂರು, ನ.22- ಸಾಲದಿಂದ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದ ತಂದೆಯನ್ನು ರಕ್ಷಿಸಲು ಹೋದ ಮಗನೂ ಸಹ ಜಲಸಮಾಧಿಯಾಗಿರುವ ಹೃದಯ ವಿದ್ರಾವಕ ಘಟನೆ ಎನ್‍ಆರ್ ಪುರ ತಾಲೂಕಿನ ಹಂಗುವಾನಿ ಗ್ರಾಮದಲ್ಲಿ ನಡೆದಿದೆ. ತಿಮ್ಮಣ್ಣ (55), ಅಭಿಷೇಕ್ (27) ಮೃತಪಟ್ಟ ತಂದೆ-ಮಗ.

ತಿಮ್ಮಣ್ಣ ಬ್ಯಾಂಕ್‍ನಲ್ಲಿ 3 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಸಾಲ ತೀರಿಸಲಾಗದೆ ಮಾನಸಿಕವಾಗಿ ನೊಂದಿದ್ದು, ಜೀವನವೇ ಬೇಡವೆಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಹಂಗುವಾನಿ ಗ್ರಾಮದ ಕೆರೆಗೆ ಹಾರಿದ್ದಾರೆ. ಇದನ್ನು ಗಮನಿಸಿದ ಮಗ ಅಭಿಷೇಕ್ ತಂದೆಯನ್ನು ರಕ್ಷಿಸಲು ತಾನೂ ಕೂಡ ಕೆರೆಗೆ ಜಿಗಿದಿದ್ದು, ಪ್ರಯತ್ನಗಳೆಲ್ಲ ವಿಫಲವಾಗಿ ಕೊನೆಗೆ ಅಭಿಷೇಕ್ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ತಂದೆ-ಮಗನ ಸಾವಿನ ಸುದ್ದಿ ಕುಟುಂಬ ಸದಸ್ಯರಿಗೆ ಆಘಾತ ತಂದಿದ್ದು, ಇಡೀ ಗ್ರಾಮವೇ ದುಃಖದಲ್ಲಿ ಮುಳುಗಿದೆ.  ಈ ಸಂಬಂಧ ಎನ್‍ಆರ್ ಪುರ ಠಾಣೆ ಪೊ ಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಹೊರತೆಗೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments