ಅನೈತಿಕ ಸಂಬಂಧದ ಶಂಕೆಯಿಂದ ಅಣ್ಣನನ್ನೇ ಕೊಂದ ತಮ್ಮ..!

ಈ ಸುದ್ದಿಯನ್ನು ಶೇರ್ ಮಾಡಿ

madure muerdereಮದ್ದೂರು, ನ.22-ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೆಸ್ತೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಬಿಎಂಟಿಸಿ ಬಸ್ ಚಾಲಕನಾಗಿದ್ದ ಶಶಿ (45) ಕೊಲೆಯಾದ ದುರ್ದೈವಿ.  ಮದ್ದೂರು ಅರಣ್ಯ ಇಲಾಖೆಯಲ್ಲಿ ಸಹಾಯಕ ಅರಣ್ಯಾಧಿಕಾರಿಯಾಗಿರುವ ರವಿ ಹಾಗೂ ಶಶಿ ಸಹೋದರರು.

ರವಿ ಪತ್ನಿ ಜೊತೆ ಶಶಿ ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಮನೆಯಲ್ಲಿ ಆಗಾಗ್ಗೆ ಇವರಿಬ್ಬರ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ. ನಿನ್ನೆ ರಾತ್ರಿ ರವಿ ಸಹೋದ್ಯೋಗಿಗಳು ಮದುವೆ ಆಮಂತ್ರಣ ಪತ್ರ ಕೊಡಲು ಮನೆಗೆ ಬಂದಿದ್ದಾಗ ಸ್ನೇಹಿತರೊಡನೆ ಸೇರಿ ರವಿ ಮದ್ಯಪಾನ ಮಾಡಿದ್ದಾನೆ. ರಾತ್ರಿ ಬೆಂಗಳೂರಿನಿಂದ ಕರ್ತವ್ಯ ಮುಗಿಸಿಕೊಂಡು ಶಶಿಕುಮಾರ್ ಮನೆಗೆ ಬಂದಾಗ ರವಿ ವರ್ತನೆಯಿಂದ ಕೋಪಗೊಂಡು ಜಗಳವಾಗಿದೆ.

ಜಗಳ ವಿಕೋಪಕ್ಕೆ ತಿರುಗಿದಾಗ ಸಹನೆ ಕಳೆದುಕೊಂಡ ರವಿ ಅಡುಗೆ ಮನೆಯಲ್ಲಿದ್ದ ಚಾಕು ತಂದು ಶಶಿಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಶಶಿಯನ್ನು ಸಹೋದರ ರವಿ ತನ್ನ ಮಾವನ ಸಹಾಯದಿಂದ ಮಂಡ್ಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದಿದ್ದಾನೆ.  ಇರಿತದಿಂದ ತೀವ್ರ ರಕ್ತ ಸ್ರಾವವಾಗಿ ಅಸ್ವಸ್ಥಗೊಂಡಿದ್ದ ಶಶಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಘಟನೆ ನಂತರ ರವಿ ಅಲ್ಲಿಂದ ಪರಾರಿಯಾಗಿದ್ದನು. ಇರಿತಕ್ಕೊಳಗಾಗಿದ್ದ ಶಶಿ ಸಾಯುವ ಮುನ್ನ ತನ್ನ ತಮ್ಮ ರವಿ ನನ್ನ ಮೇಲೆ ಹಲ್ಲೆ ಮಾಡಿದ್ದು ಎಂದು ಹೇಳಿಕೆ ನೀಡಿದ್ದಾನೆ.

ಸುದ್ದಿ ತಿಳಿದ ಪೊ ಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ರವಿನನ್ನು ಬಂಧಿಸಿದ್ದಾರೆ. ಕೆಸ್ತೂರು ಠಾಣೆ ಪಿಎಸ್‍ಐ ಸಂತೋಷ್ ಪ್ರಕರಣ ದಾಖಲಿಸಿಕೊಂಡಿದ್ದು, ಸಿಪಿಐ ಮಹೇಶ್ ತನಿಖೆ ಕೈಗೊಂಡಿದ್ದಾರೆ. ಡಿವೈಎಸ್ಪಿ ಶೈಲೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೆಸ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments