ಸ್ವಿಸ್ ಬ್ಯಾಂಕ್‍ಗೆ 88,000 ಪೌಂಡ್ ಪಾವತಿಸುವಂತೆ ಮಲ್ಯಗೆ ಲಂಡನ್ ಕೋರ್ಟ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

mallyಲಂಡನ್, ನ.22 (ಪಿಟಿಐ)- ಸ್ವತ್ತಿಗೆ ಸಂಬಂಧಪಟ್ಟಂತೆ ಯುಬಿಎಸ್ ಸ್ವಿಸ್ ಬ್ಯಾಂಕ್‍ಗೆ 88,000 ಪೌಂಡ್‍ಗಳ ಮಧ್ಯಂತರ ಕಾನೂನು ವೆಚ್ಚ ಪಾವತಿಸುವಂತೆ ಲಂಡನ್ ಹೈಕೋರ್ಟ್ ಕಳಂಕಿತ ಉದ್ಯಮಿ ವಿಜಯ್ ಮಲ್ಯ ಅವರಿಗೆ ಆದೇಶ ನೀಡಿದೆ. ವಿವಿಧ ರಾಷ್ಟ್ರೀಯಕೃತ ಬ್ಯಾಂಕ್‍ಗಳಿಂದ ಬಹುಕೋಟಿ ರೂ.ಗಳ ಸಾಲ ಎತ್ತುವಳಿ ಮಾಡಿ ಉದ್ದೇಶಪೂರ್ವ ಸುಸ್ತಿದಾರನೆಂಬ ಕಳಂಕದೊಂದಿಗೆ ಇಂಗ್ಲೆಂಡ್‍ಗೆ ಪರಾರಿಯಾಗಿರುವ ಮಾಜಿ ಮದ್ಯದ ದೊರೆಗೆ ನ್ಯಾಯಾಲಯದ ಈ ಆದೇಶದಿಂದ ಮತ್ತೊಂದು ಹಿನ್ನಡೆಯಾಗಿದೆ.

ಲಂಡನ್‍ನಲ್ಲಿರುವ ಬೇಕರ್ ಸ್ಟ್ರೀಟ್ ಬಂಗಲೆಯನ್ನು ಮಲ್ಯ ಸ್ವಿಸ್ ಬ್ಯಾಂಕ್‍ನಿಂದ 20.4 ದಶಲಕ್ಷ ಪೌಂಡ್‍ಗಳಿಗೆ ಅಡಮಾನ ಪಡೆದಿದ್ದರು. ಆದರೆ ಅದಕ್ಕೆ ಸಂಬಂದಪಟ್ಟ ವೆಚ್ಚಗಳನ್ನು ಭರಿಸಲು ಸುಸ್ತಿದಾರರಾಗಿದ್ದರು. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳು ಕೋರ್ಟ್‍ನಲ್ಲಿ ದಾವೆ ಹೂಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಲಂಡನ್ ಹೈಕೋರ್ಟ್‍ನ ವಾಣಿಜ್ಯ ಮತ್ತು ಸ್ವತ್ತುಗಳ ವಿಭಾಗದ ಚೀಫ್ ಮ್ಯಾಸ್ಟರ್(ಮುಖ್ಯ ನ್ಯಾಯಾಧೀಶರು) ಮಾಥ್ಯೂ ಮಾರ್ಷ್, ಸ್ವಿಸ್ ಬ್ಯಾಂಕ್‍ಗೆ 88.000 ಪೌಂಡ್ ತಾತ್ಕಾಲಿಕ ಕಾನೂನು ವೆಚ್ಚ ಭರಿಸುವಂತೆ ಸೂಚಿಸಿದರು. ಮಲ್ಯ ಸುಸ್ತಿದಾರರಾಗಿರುವುದರಿಂದ ಈ ಬಂಗಲೆಯನ್ನು ತೆರವುಗೊಳಿಸಲು ಸೂಚನೆ ನೀಡುವಂತೆ ಸ್ವಿಸ್‍ಬ್ಯಾಂಕ್ ಕೋರ್ಟ್‍ಗೆ ಈ ಹಿಂದೆ ಮನವಿ ಮಾಡಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )