ದೋವಲ್-ವಾಂಗ್ ನಡುವೆ ಇಂಡೋ-ಚೀನಾ ಗಡಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Doval--01

ಬೀಜಿಂಗ್, ನ.24-ಚೀನಾ ಪ್ರವಾಸದಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸಿಚುವಾನ್ ಪ್ರಾಂತ್ಯದಲ್ಲಿ ಚೀನಿ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ 21ನೇ ಸುತ್ತಿನ ಗಡಿ ಬಿಕ್ಕಟ್ಟು ಇತ್ಯರ್ಥ ವಿಷಯಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.

ನಯನಮನೋಹರ ಡುಜಿಯಾನ್‍ಗ್ಯಾನ್ ನಗರದಲ್ಲಿ ದೋವಲ್ ಮತ್ತು ವಾಂಗ್ ಗಡಿ ವಿವಾದವಲ್ಲದೆ, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯಗಳ ಕುರಿತು ಚರ್ಚಿಸಿದರು ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.  ಏಪ್ರಿಲ್‍ನಲ್ಲಿ ನಡೆದ ವುಹಾನ್ ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನಡುವೆ ಏರ್ಪಟ್ಟ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿ ಕುರಿತು ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು.

ಭಾರತ ಮತ್ತು ಚೀನಾ ನಡುವೆ ಗಡಿ ವಿಷಯ ಮಾತುಕತೆಗಾಗಿ ದೋವಲ್ ಮತ್ತು ವಾಂಗ್ ಅವರನ್ನು ವಿಶೇಷ ಪ್ರತಿನಿಧಿಗಳಾಗಿ ನಿಯೋಜಿಸಲಾಗಿದೆ. ಇಂದು ಸಂಜೆ ಈ ಮಾತುಕತೆ ಸಮಾರೋಪಗೊಳ್ಳುವ ನಿರೀಕ್ಷೆ ಇದೆ.

Facebook Comments

Sri Raghav

Admin