ಫಿಟ್ನೆಸ್ ಬಯಸುವ ಪುರುಷರಿಗೆ ಇಲ್ಲಿವೆ ಸೂಪರ್ ಟಿಪ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Fitness-01

ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿಯಿದೆ. ಆರೋಗ್ಯವಿದ್ದರೆ ಆಗ ಎಲ್ಲವೂ ಇದ್ದಂತೆ. ಈ ಕಾರಣದಿಂದಾಗಿ ಹೆಚ್ಚಿನ ದೇಶಗಳು ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತವೆ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದು. ಆಧುನಿಕ ಯುಗದಲ್ಲಿ ಹೆಚ್ಚಾಗಿ ಪುರುಷರು ತಮ್ಮ ಗುರಿ ಸಾಧಿಸಲು ಮತ್ತು ಕರ್ತವ್ಯ ನಿರ್ವಹಣೆ ಮಾಡಲು ತುಂಬಾ ಕಷ್ಟಪಡುತ್ತಿರುತ್ತಾರೆ.

ಮನೆಯ ಪ್ರಮುಖ ಆಧಾರ ಸ್ಥಂಭವಾಗಿ ನಿಲ್ಲುವವರು ಪುರುಷರು. ಮನೆ ಮಂದಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುವವರು ಪುರುಷರು. ಹಾಗಾಗಿ ಪುರುಷರ ಆರೋಗ್ಯ ಹೆಚ್ಚು ಸುರಕ್ಷಿತವಾಗಿರಬೇಕಾಗುತ್ತದೆ. ಕಲುಷಿತ ಆಹಾರ ಹಾಗೂ ಸೂಕ್ತ ವ್ಯಾಯಾಮಗಳಿಲ್ಲದೆ ಇರುವುದು ಇಂದು ಅನೇಕ ಪುರುಷರ ಆರೋಗ್ಯ ಹದಗೆಡುವುದಕ್ಕೆ ಕಾರಣವಾಗಿವೆ. ಪ್ರತಿಯೊಬ್ಬ ಪುರುಷರು ನಿರ್ದಿಷ್ಟವಾದ ಆಹಾರ ಕ್ರಮ, ಸೂಕ್ತ ಕೆಲಸದಲ್ಲಿ ತೊಡಗಿಕೊಳ್ಳುವುದು ಹಾಗೂ ಇನ್ನಿತರ ಮುನ್ನೆಚ್ಚರಿಕೆ ವಿಧಾನದಲ್ಲಿ ತೊಡಗಿಕೊಳ್ಳಬೇಕಾಗಿದೆ.

ಕೆಲವು ಸಮೀಕ್ಷೆಗಳ ಪ್ರಕಾರ ಇಂದು ಗಂಡಸರು ಸಾಮಾನ್ಯವಾಗಿ ಕ್ಯಾನ್ಸರ್, ಹೃದಯದ ತೊಂದರೆ, ಮಾನಸಿಕ ಒತ್ತಡ ಹಾಗೂ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಇಂದು ಅನೇಕ ಪುರುಷರು ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ಕೆಲವು ಸುಲಭ ಉಪಾಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮಗೂ ನಿಮ್ಮ ಸಮಸ್ಯೆಯಿಂದ ಹೊರ ಬರಬೇಕೆಂಬ ಮನಸ್ಸಿದ್ದರೆ ಈ ಕೆಳಗಿನ ನಿಯಮವನ್ನು ಅನುಸರಿಸಿ….

# ಪುರುಷರ ಫಿಟ್ನೆಸ್ ಆರೋಗ್ಯಕ್ಕೆ ಕೆಲ ಸಲಹೆ-

#ನಿರಂತರ ವ್ಯಾಯಾಮ
ವ್ಯಾಯಾಮವು ಅಧಿಕ ರಕ್ತದೊತ್ತಡ, ಮಧುಮೇಹ, ಸಂಧಿವಾತ ಮತ್ತು ಬೊಜ್ಜಿಗೆ ತುಂಬಾ ಒಳ್ಳೆಯದು. ನಿಯಮಿತವಾಗಿ ವ್ಯಾಯಾಮ ಮಾಡಿದರೆ ಆಗ ದೇಹದ ತೂಕ ನಿಯಂತ್ರಣ ಮಾಡಬಹುದು. ಇದರೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು. ವ್ಯಾಯಾಮದಿಂದ ದೇಹದ ಸ್ನಾಯುಗಳು ಆರಾಮವಾಗುವುದು ಮತ್ತು ಸುಖ ನಿದ್ರೆಗೆ ನೆರವಾಗುವುದು. ಲಘು ವ್ಯಾಯಾಮದಿಂದ ಚಯಾಪಚಯ ಕ್ರಿಯೆಯು ಉತ್ತಮವಾಗುವುದು. ಇದರಿಮದ ಜೀರ್ಣಕ್ರಿಯೆ ಮತ್ತು ದೇಹದ ವ್ಯವಸ್ಥೆಯು ಸುಧಾರಣೆಯಾಗುವುದು. ವ್ಯಾಯಾಮದಿಂದ ದೇಹದಲ್ಲಿರುವಂತಹ ಕೆಲವೊಂದು ವಿಷಕಾರಿ ಅಂಶಗಳು ಬೆವರಿನ ಮೂಲಕ ಹೊರಬರುವುದು.

#ಸಿಗರೇಟ್ ಸೇವನೆ ಬಿಟ್ಟು ಬಿಡಿ
ಸಿಗರೇಟ್ ಅಥವಾ ಸಿಗಾರ್ ಸೇವನೆ ಮಾಡುವುದು ಪುರುಷರಿಗೆ ಸಾಮಾನ್ಯವಾದ ಅಭ್ಯಸವಾಗಿದೆ. ಆದರೆ ಇದು ತುಂಬಾ ಗಂಭೀರ ಸಮಸ್ಯೆಗಳಾಗಿರುವ ಕ್ಯಾನ್ಸರ್, ಹೃದಯಾಘಾತ ಮತ್ತು ಕ್ಷಯರೋಗ ಉಂಟು ಮಾಡಬಹುದು. ಧೂಮಪಾನ ತ್ಯಜಿಸಿ ಮತ್ತು ಇಂತಹ ಮಾರಕ ಕಾಯಿಲೆಗಳಿಂದ ದೂರವಾಗಿ. ಧೂಮಪಾನವು ನಿಮ್ಮ ಆರೋಗ್ಯಕ್ಕೆ ಮಾತ್ರ ಹಾನಿಕಾರವಲ್ಲದೆ, ಇದು ನಿಮ್ಮ ಬಜೆಟ್ ಮೇಲೂ ಪರಿಣಾಮ ಬೀರುವುದು. ಕೆಟ್ಟ ಪರಿಣಾಮದಿಂದಾಗಿ ಧೂಮಪಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ. ಧೂಮಪಾನವು ಕೇವಲ ಧೂಮಪಾನಿಗೆ ಮಾತ್ರವಲ್ಲದೆ ಆತನ ಸುತ್ತಲಿನ ವ್ಯಕ್ತಿಗಳಿಗೂ ಇದರಿಂದ ಹಾನಿಯಾಗುವುದು.

# ಅತಿಯಾದ ತೂಕ ಅಥವಾ ಬೊಜ್ಜು
ಪುರುಷರು ತುಂಬಾ ವ್ಯಸ್ತರಾಗಿರುವ ಕಾರಣದಿಂದಾಗಿ ತಾವು ಸೇವಿಸುವ ಆಹಾರದ ಕಡೆಗೆ ಹೆಚ್ಚಿನ ಗಮನಹರಿಸದೆ ಇರುವುದರಿಂದ ಅವರಲ್ಲಿ ಅತೀ ಬೇಗನೆ ಬೊಜ್ಜು ಕಾಣಿಸಿಕೊಳ್ಳುವುದು. ಬೊಜ್ಜು ದೇಹದ ಸಮಸ್ಯೆ ನಿವಾರಣೆ ಮಾಡಲು ಪುರುಷರು ಯಾವುದಾದರೂ ಆಟಗಳಲ್ಲಿ ಅಥವಾ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಪುರುಷರು ಸ್ವಲ್ಪ ಸಮಯವನ್ನು ದೇಹಕ್ಕೆ ಆರಾಮ ನೀಡಲು ವ್ಯಯಿಸಿದರೆ ಅದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದು ಶಕ್ತಿಯನ್ನು ಉತ್ಪಾದಿಸುವುದು ಮತ್ತು ದೇಹ ಹಾಗೂ ಮನಸ್ಸಿಗೆ ಶಮನ ನೀಡುವುದು. ಮದುವೆಗೆ ಮೊದಲು ಬೊಜ್ಜು ದೇಹವು ಒಳ್ಳೆಯದಲ್ಲ. ಹುಡುಗಿಯರು ಯಾವಾಗಲೂ ಮದುವೆಯಾಗಲು ಬೊಜ್ಜು ದೇಹದವರನ್ನು ಇಷ್ಟಪಡಲ್ಲ.

#ಆಹಾರ ಸೇವನೆ ಕ್ರಮಬದ್ಧವಾಗಿರಲಿ
ಆರೋಗ್ಯಕಾರಿ ಚರ್ಮ ಹಾಗೂ ಫಿಟ್ನೆಸ್ ಗಾಗಿ ನೀವು ಎಲ್ಲಾ ರೀತಿಯ ಆಹಾರಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದನ್ನು ಮದುವೆಯ ಬಳಿಕ ಕೂಡ ಪಾಲಿಸಿಕೊಂಡು ಹೋಗಿ. ಪ್ರಮುಖ ಆಹಾರ ವಿಭಾಗಗಳೆಂದರೆ ಕಾರ್ಬ್ರೋಹೈಡ್ರೇಟ್ಸ್, ಕೊಬ್ಬು, ಪ್ರೋಟೀನ್, ವಿಟಮಿನ್ ಗಳು, ಖನಿಜಾಂಶಗಳು ಮತ್ತು ನೀರು. ನಮ್ಮ ದೇಹವನ್ನು ತೇವಾಂಶದಿಂದ ಇಡಲು ನೀರು ಅತೀ ಮುಖ್ಯವಾಗಿದೆ ಮತ್ತು ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುವುದು. ತಾಜಾ ಹಣ್ಣುಗಳು ಮತ್ತು ಜ್ಯೂಸ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಸಿಟ್ರಸ್ ಹಣ್ಣುಗಳಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ಇದು ಆರೋಗ್ಯಕಾರಿ ಚರ್ಮಕ್ಕೆ ಒಳ್ಳೆಯದು.

#ವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ
ನೀವು ವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾಕೆಂದರೆ ಇದನ್ನು ನೀವು ಕಡೆಗಣಿಸಿದರೆ ಆಗ ದೊಡ್ಡ ಮಟ್ಟದ ಹಾನಿಯಾಗುವುದು. ನಿಯಮಿತವಾಗಿ ಕೊಲೆಸ್ಟ್ರಾಲ್ ಮಟ್ಟ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ನಿವಾರಣೆ ಮಾಡಬಹುದು. ನಿಯಮಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತಲಿದ್ದರೆ ಆಗ ಕೆಲವೊಂದು ಗಂಭೀರ ಸಮಸ್ಯೆಗಳೂ ಬರುವುದನ್ನು ಆರಂಭದಲ್ಲೇ ತಡೆಯಬಹುದು ಮತ್ತು ಇದರಿಂದ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು.

Facebook Comments