ಮನೆಯಲ್ಲಿ ಫ್ರಿಡ್ಜ್ ಇದೆಯಾ…? ಹಾಗಾದರೆ ಈ ವಿಷಯಗಳ ಬಗ್ಗೆ ತಪ್ಪದೆ ತಿಳಿದುಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

refrigerator

ನಿಸರ್ಗದತ್ತ ಸಂಪನ್ಮೂಲಗಳ ಬಳಕೆ, ಸಂರಕ್ಷಣೆ ಹಾಗೂ ಉಳಿತಾಯಗಳಲ್ಲಿ ನಾವು ತೋರುವ ಜಾಣ್ಮೆಯನ್ನು ದೈನಂದಿನ ಬದುಕಿನಲ್ಲೂ ತೋರಬೇಕು. ಆಗ ಮಾತ್ರ ವಿದ್ಯುತ್, ನೀರು ಸೇರಿದಂತೆ ಯಾವುದೂ ಪೋಲಾಗುವುದಿಲ್ಲ . ಕೆಲವೊಮ್ಮೆ ನಾವು ದುಡ್ಡು ಕೊಟ್ಟು ತಂದ ವಸ್ತುಗಳು ಇನ್ನಷ್ಟು ವೆಚ್ಚಕ್ಕೆ ದಾರಿಯಾಗುತ್ತವೆ. ಹೀಗಾಗಿ ಮನೆಯ ಉಪಕರಣ, ಸಲಕರಣೆಗಳನ್ನು ಸರಳವಾಗಿ, ವಿವೇಚನೆ, ಜಾಣ್ಮೆಯಿಂದ ಉಪಯೋಗಿಸಿಕೊಳ್ಳುವ ಬಗ್ಗೆ ತಿಳಿದುಕೊಂಡಿರಬೇಕು.

#ರೆಫ್ರಿಜರೇಟರ್ನ ನಿರ್ವಹಣೆ , ವಿದ್ಯುತ್ ಉಳಿತಾಯ ಬಗ್ಗೆ ಒಂದಷ್ಟು ಟಿಪ್ಸ್ ಇಲ್ಲಿವೆ :
* ಅನಗತ್ಯವಾಗಿ ತೆರೆಯಬೇಡಿ :ರೆಫ್ರಿಜರೇಟರ್ನ ಬಾಗಿಲನ್ನು ಅನಗತ್ಯವಾಗಿ ತೆರೆಯುವುದರಿಂದ ಬೆಚ್ಚನೆ ಗಾಳಿ ಒಳಗೆ ಹೋಗುವುದು ಮಾತ್ರವಲ್ಲದೆ ಒಳಗಿರುವ ತೇವಾಂಶವನ್ನೂ ಹೆಚ್ಚಿಸುತ್ತದೆ. ಹೀಗಾಗಿ ಮಂಜು ಕರಗುತ್ತದೆ. ಪರಿಣಾಮವಾಗಿ ಹೆಚ್ಚಿನ ವಿದ್ಯುತ್ ಬಳಕೆಯಾಗಿ ವೆಚ್ಚ ಹೆಚ್ಚಾಗುತ್ತದೆ. ಇನ್ನೊಂದು ಅಪಾಯಕಾರಿ ಸಂಗತಿ ಏನೆಂದರೆ ಆಹಾರ ಕೆಡುವುದು ಮಾತ್ರವಲ್ಲದೆ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ.
* ಯೋಜನೆ ಮಾಡಿಕೊಳ್ಳಿ :ಸಾಧ್ಯವಾದಷ್ಟು ಮಟ್ಟಿಗೆ ಫ್ರಿಡ್ಜ್ ಬಾಗಿಲು ತೆರೆಯದಿರಲು ಪ್ರಯತ್ನಿಸಿ. ಫ್ರಿಡ್ಜ್ ಬಾಗಿಲು ತೆರೆಯುವ ಮುನ್ನ ಎಷ್ಟು ವಸ್ತುಗಳನ್ನು ಹೊರತೆಗೆಯಬೇಕಿದೆ ಮತ್ತು ಎಷ್ಟು ವಸ್ತುಗಳನ್ನು ಒಳಗಿಡಬೇಕಿದೆ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಬಳಿಕ ಬಾಗಿಲು ತೆರೆಯಿರಿ.
* ಪೋಲು ಮಾಡಬೇಡಿ :ಫ್ರಿಡ್ಜ್ನೊಳಗೆ ಉಷ್ಣತೆ ಸಾಮಾನ್ಯ +4ರಿಂದ +5ರವರೆಗೆ ಸೆಟ್ ಮಾಡಿಡಿ. ಫ್ರೀಜರ್ -15ರಿಂದ-18 ಡಿಗ್ರಿ ಇರಬೇಕು. ಇದು ಹೆಚ್ಚಿನ ಕಾರ್ಯಕ್ಷಮತೆ ಜತೆಗೆ ಆಹಾರವನ್ನು ಕೆಡದಂತೆ ಸಂರಕ್ಷಿಸಲು ಬೇಕಾಗುವ ಪ್ರಮಾಣ. ಆದರೆ ಉಷ್ಣತೆಯನ್ನು ಮತ್ತೂ ಕಡಿಮೆಗೊಳಿಸಬೇಡಿ. ಒಂದು ಡಿಗ್ರಿ ವ್ಯತ್ಯಾಸವಾದರೂ ಸರಾಸರಿ ಶೇ. 6ರಿಂದ 8ರಷ್ಟು ಶಕ್ತಿ ಪೋಲಾಗುತ್ತದೆ.
* ಒಂದೇ ಫ್ರಿಡ್ಜ್ ಬಳಸಿ :ಎರಡು ಸಣ್ಣ ಫ್ರಿಡ್ಜ್ಗಳನ್ನು ಇಡುವ ಬದಲಾಗಿ ಒಂದು ದೊಡ್ಡ ಫ್ರಿಡ್ಜ್ ಬಳಕೆ ಉತ್ತಮ. ಎರಡು ಸಣ್ಣ ಫ್ರಿಡ್ಜ್ ನ ಸಾಮರ್ಥ್ಯ ಹೊಂದಿರುವ ಒಂದೇ ಫ್ರಿಡ್ಜ್ ಬಳಸಿದಲ್ಲಿ ಶೇ.20ರಷ್ಟು ಶಕ್ತಿಯ ಉಳಿತಾಯವಾಗುತ್ತದೆ ಎಂಬುದು ಗಮನದಲ್ಲಿರಲಿ.
* ಹೊರಗೂ ಸ್ವಚ್ಛವಾಗಿಡಿ :ಫ್ರಿಡ್ಜ್ನ ಒಳಭಾಗವನ್ನು ಶುಚಿಗೊಳಿಸುವಂತೆ ಹೊರಮೈಯನ್ನೂ ಶುಚಿಗೊಳಿಸಿ. ಫ್ರಿಡ್ಜ್ ಇಟ್ಟಿರುವ ಜಾಗದಲ್ಲಿ ಚೆನ್ನಾಗಿ ಗಾಳಿಯಾಡುತ್ತಿರಲಿ. ಗೋಡೆಗಳಿಗೆ ಸ್ವಲ್ಪ ಅಂತರದಲ್ಲಿ ಅದನ್ನಿಡಬೇಕು. ವಾತಾಯನ ವ್ಯವಸ್ಥೆ ಅಸಮರ್ಪಕವಾಗಿದ್ದರೆ ಶೇ.10ರಷ್ಟು ಹೆಚ್ಚು ಶಕ್ತಿ ವ್ಯಯವಾಗುತ್ತದೆ.
* ಬಿಸಿ ವಸ್ತುಗಳನ್ನಿಡಬೇಡಿ :ಯಾವುದೇ ಕಾರಣಕ್ಕೂ ಒಳಗೆ ಬಿಸಿ ವಸ್ತುಗಳನ್ನಿಡಬೇಡಿ. ಇದರಿಂದ ಇತರ ವಸ್ತುಗಳು ಬಿಸಿಯಾಗುತ್ತವೆ ಮಾತ್ರವಲ್ಲ ಒಳಗಿನ ಉಷ್ಣತೆ ಹೆಚ್ಚಿ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತದೆ.
* ನಿಯಮಿತವಾಗಿ ಐಸ್ ತೆರವುಗೊಳಿಸಿ :ನಿಯಮಿತವಾಗಿ ಐಸ್ ತೆರವುಗೊಳಿಸುತ್ತಿರಿ. ನಿಮ್ಮ ರೆಫ್ರಿಜರೇಟರ್ ಮಂಜುಮುಕ್ತವಾಗಿರಲಿ. 5 ಎಂಎಂ ಮಂಜಿನಿಂದಾಗಿ ಶೇ.30 ಹೆಚ್ಚು ವಿದ್ಯುತ್ ಪೋಲಾಗುತ್ತದೆ. ಇದರಿಂದ ಫ್ರಿಡ್ಜ್ನ ಕಾರ್ಯಕ್ಷಮತೆ ಸಾಧಾರಣ ಮಟ್ಟ ತಲುಪಬಹುದು. ಈಗ ಸ್ವಯಂ ಐಸ್ ತೆರವು ಕ್ಷಮತೆಯುಳ್ಳ ಫ್ರಿಡ್ಜ್ಗಳಿರುವುದರಿಂದ ಅದಕ್ಕಾಗಿ ಸಮಯ ವ್ಯಯಿಸಬೇಕಿಲ್ಲ.
* ಗ್ಯಾಸ್ಕೆಟ್ ಬಗ್ಗೆ ಗಮನವಿರಲಿ :ಬಾಗಿಲು ಮತ್ತು ಫ್ರಿಡ್ಜನ್ನು ಜೋಡಿಸುವಂತಿರುವ ಮೃದು ಪ್ಲಾಸಿಕ್ (ಗ್ಯಾಸ್ಕೆಟ್)ನ್ನು ಗಮನಿಸುತ್ತಿರಬೇಕು. ಈ ಜೋಡಣೆ ಮಧ್ಯೆ ಕೆಲವೊಮ್ಮೆ ಗ್ಯಾಪ್ ಕಾಣಿಸಿಕೊಳ್ಳಬಹುದು. ಅಸಮರ್ಪಕ ಜೋಡಣೆಯಿರಬಹುದು. ಬಾಗಿಲಿಗೆದುರಾಗಿ ಗ್ಯಾಸ್ಕೆಟ್ ಭದ್ರವಾಗಿರಬೇಕು. ಇಲ್ಲದಿದ್ದರೆ ತಂಪು ಗಾಳಿ ಸೋರಿಕೆಯಾಗುತ್ತದೆ. ಬಾಗಿಲನ್ನು ಹಾಕಿ ಒಂದು ಸಲ ಎಳೆದು ನೋಡಿದಾಗ ಗ್ಯಾಸ್ಕೆಟ್ ಜೋಡಣೆ ಸಡಿಲವಾಗಿದ್ದರೆ ಗಮನಕ್ಕೆ ಬರುತ್ತದೆ. ಗ್ಯಾಸ್ಕೆಟ್ ಸಮರ್ಪಕವಾಗಿಲ್ಲ ಎಂಬುದು ಕಂಡು ಬಂದರೆ ಬದಲಾಯಿಸಿಕೊಳ್ಳಿ.

# ಫ್ರಿಡ್ಜ್ ಶುಚಿಯಾಗಿಡಲು ಕೆಲವು ಉಪಾಯಗಳು ಇಲ್ಲಿವೆ : 
#ಶುಚಿಗೊಳಿಸುವಿಕೆ :ವಾರಕ್ಕೊಮ್ಮೆಯಾದರೂ ಫ್ರಿಡ್ಜ್ ನಲ್ಲಿರುವ ತರಕಾರಿ, ಹಣ್ಣು ಹಾಗೂ ಇತರ ಸಾಮಾನುಗಳನ್ನು ಹೊರಗೆ ಹಾಕಿ ಶುದ್ಧ ಬಟ್ಟೆ ಬಳಸಿ ಶುಚಿಗೊಳಿಸಿ.  ಫ್ರಿಡ್ಜ್ ನಲ್ಲಿ ತೆಗೆಯಬಹುದಾದ ಟ್ರೇಗಳನ್ನು ಹೊರಗೆ ತೆಗೆದಿಟ್ಟು ಸ್ವಲ್ಪ ಹೊತ್ತು ನೀರಿನಲ್ಲಿ ಮುಳುಗಿಸಿ ಶುಚಿಗೊಳಿಸಿ.
* ಆಹಾರವನ್ನು ಇಡುವ ಕ್ರಮ :ಫ್ರಿಡ್ಜ್  ಎಂದರೆ ತಂಗಳ ಪೆಟ್ಟಿಗೆ ಎಂದು ಕೆಲವರು ಅಣಕವಾಡುವದೇನೋ ಸರಿ. ಹಾಗಂತ ಇಲ್ಲಿ ಬೇಕಾಬಿಟ್ಟಿ ಆಹಾರವನ್ನು ಇಟ್ಟುಕೊಳ್ಳಬೇಡಿ. ಕ್ರಮವಾಗಿ, ಒಪ್ಪವಾಗಿ ಜೋಡಿಸಿಡಿ.
* ಬಾಟಲಿಗಳ ನಿರ್ವಹಣೆ :ಬಾಟಲಿಗಳು, ಗಾಜಿನ ಲೋಟಗಳನ್ನು ಫ್ರಿಡ್ಜ್ ನಲ್ಲಿಟ್ಟಿದ್ದರೆ, ಅವುಗಳನ್ನು ನಿಯಮಿತವಾಗಿ ಹೊರಗಿಟ್ಟು ಶುಚಿಯಾದ ಬಟ್ಟೆಯಿಂದ ಒರೆಸಿ ತೇವಾಂಶ ತೆಗೆಯಿರಿ.
* ಫ್ರಿಡ್ಜ್ ಸುಗಂಧ :ಫ್ರಿಡ್ಜ್ ನಲ್ಲಿ ಸುಗಂದ ಬಿರುವ ಅಡೋರ್ ಇರಿಸಿಕೊಳ್ಳಿ. ಅದಕ್ಕೆ ಬೇರೇನೂ ಮಾಡಬೇಕಾಗಿಲ್ಲ. ಪರಿಮಳಯುಕ್ತ ಲವಂಗ, ನಿಂಬೆ ಹಣ್ಣನ್ನು ಇಟ್ಟುಕೊಂಡರೂ ಸಾಕು. ಫ್ರಿಡ್ಜ್ ಘಮ ಘಮಿಸುತ್ತಿರುವುದು.

Fridge

# ಯಾವ ವಸ್ತುವನ್ನು ಫ್ರಿಡ್ಜ್ನ ಫ್ರೀಜರ್ನಲ್ಲಿ ಎಷ್ಟು ದಿನ ಇಡಬಹುದು? 
* ಕಡ್ಲೆಬೀಜ ಗೋಡಂಬಿ ಬಾದಾಮಿ, ಪಿಸ್ತಾ ಇತ್ಯಾದಿಯಲ್ಲಿನ ಎಣ್ಣೆಯ ಅಂಶವು ಫ್ರಿಡ್ಜ್ ಹೊರಗಿಟ್ಟರೆ ಒಣಗಿಹೋಗುವ ಸಾಧ್ಯತೆ ಇರುವುದರಿಂದ ಇವನ್ನೆಲ್ಲ ಫ್ರೀಜರ್ನಲ್ಲಿ ಶೇಖರಿಸಿಡುವುದೇ ಸರಿಯಾದ ಉಪಾಯ.
* ಯಾವುದೇ ಹಿಟ್ಟು ಇದ್ದರೂ ಅದನ್ನು ಗಾಳಿಯಾಡದ ಡಬ್ಬಗಳಲ್ಲಿ ತುಂಬಿಸಿ ಫ್ರಿಡ್ಜ್ ನಲ್ಲಿಡುವುದರಿಂದ ಹುಳ ಹಿಡಿಯುವುದಿಲ್ಲ, ಅನ್ಯ ವಾಸನೆಯೂ ಸೇರ್ಪಡೆಯಾಗುವುದಿಲ್ಲ.
* ಕತ್ತರಿಸಿದ ತರಕಾರಿಗಳು, ನಿಂಬೆ ಹೋಳುಗಳನ್ನು ಒಂದು ಡಬ್ಬಿ ಅಥವಾ ಗಟ್ಟಿ ಪದರವುಳ್ಳ ಪ್ಲಾಸ್ಟಿಕ್ ಬ್ಯಾಗ್ನಲ್ಲಿಟ್ಟು ನಂತರ ಫ್ರಿಡ್ಜ್ ನಲ್ಲಿರಿಸಿರಿ. ತೆಳು ಪ್ಲಾಸ್ಟಿಕ್ ಯಾವುದೇ ಕಾರಣಕ್ಕೂ ಫ್ರಿಡ್ಜ್ನಲ್ಲಿಡುವುದು ಅಪಾಯ
* ಕೆಚಪ್ ಇಟ್ಟರೆ ಸೇಫ್, ಹಣ್ಣು ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಬಾರದು. ಟೊಮೋಟೊ ಇಟ್ಟರೆ ಅದರ ರಚನೆ ಮತ್ತು ಸ್ವಾದ ಬದಲಾಗುತ್ತದೆ, ಕಲ್ಲಂಗಡಿ ಇಟ್ಟರೆ ಅದರಲ್ಲಿನ ಆ್ಯಂಟಿ ಆಕ್ಸಿಡೆಂಟ್ಸ್ ಇಲ್ಲವಾಗುತ್ತದೆ,  ಆಲೂಗಡ್ಡೆಯ ರುಚಿ ಬದಲಾಗುತ್ತದೆ,  ಈರುಳ್ಳಿಯನ್ನು ತೆರೆದಿಡುವಂತಿಲ್ಲ, ಡಬ್ಬಿಯಲ್ಲಿ ಮುಚ್ಚಿಟ್ಟರೂ ತೀರಾ ಮೆತ್ತಗಾಗಿ ಒಳಪದರಗಳು ಕೊಳೆತುಹೋಗುತ್ತವೆ,  ಕಾಫಿ ಡಿಕಾಕ್ಷನ್ ಇಟ್ಟರೆ ತನ್ನ ಸಾಚಾ ವಾಸನೆ ಕಳೆದುಕೊಂಡು ಅನ್ಯ ವಾಸನೆ ಎಳೆದುಕೊಳ್ಳುತ್ತದೆ , ಬೆಳ್ಳುಳ್ಳಿ ಫ್ರಿಜ್ಡ್ ನಲ್ಲಿ ಶೇಖರಿಸಿದರೆ ಮೊಳಕೆಯೊಡೆದು ಕೊಳೆಯುತ್ತದೆ ,  ಹಾರ್ಡ್ ಡ್ರಿಂಕ್ಸ್ ಕೋಣೆಯ ತಾಪಾಮಾನದಲ್ಲಿಯೇ ಶೇಖರಿಸುವುದು ಒಳ್ಳೆಯದು, ಜೇನು ಶೇಖರಿಸಿದರೆ ಹರಳುಗಟ್ಟುವುದು ಹಾಗೂ ಮಂದತ್ವಪಡೆಯುವುದು,  ಬ್ರೆಡ್ ಫ್ರಿಡ್ಜ್ ನಲ್ಲಿ ಇನ್ನಷ್ಟು ಒಣಗಿ ಒರಟಾಗುತ್ತದೆ,  ಅಣಬೆಯನ್ನು ಪೇಪರ್ನಲ್ಲಿ ಸುತ್ತಿಡುವುದಕ್ಕಿಂತ ಮೊದಲು ಜಿಪ್ ಇರುವ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಇರಿಸುವುದು ಒಳ್ಳೆಯದು,  ಮೊಟ್ಟೆಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ನಂತರ ಫ್ರಿಡ್ಜ್ ನಲ್ಲಿರಿಸಬೇಕು,  ಹಾಲನ್ನು ವಾರಕ್ಕಿಂತ ಹೆಚ್ಚುಕಾಲ ಡೀಪ್ ಫ್ರೀಜರ್ ನಲ್ಲಿ ಶೇಖರಿಸಬಾರದು, ಇದರಿಂದ ಕಮಟು ತಪ್ಪಿಸಬಹುದು,  ಉಪ್ಪು ಇರುವ ಅಥವಾ ಇಲ್ಲದಿರುವ ಯಾವುದೇ ಬೆಣ್ಣೆಯಾದರೂ ಫ್ರೀಜರ್ನ ಡೋರ್ ನಲ್ಲಿ ಶೇಖರಿಸದೇ ಫ್ರೀಜರ್ ಒಳಗೆ ಸಮಾನ ತಾಪಾಮಾನದಲ್ಲಿ ಇರಿಸಿದಾಗ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

– ಎಸ್ ಕೆ ಎಸ್

 

 

Facebook Comments