ಕಲ್ಲಿದ್ದಲು ಹಗರಣ : ಮಾಜಿ ಕಾರ್ಯದರ್ಶಿ ಸೇರಿ 6 ಮಂದಿ ದೋಷಿಗಳು

ಈ ಸುದ್ದಿಯನ್ನು ಶೇರ್ ಮಾಡಿ

coolನವದೆಹಲಿ, ನ.30- ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮ-ಅವ್ಯವಹಾರಗಳ ಸಂಬಂಧ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತ ಮತ್ತು ಇತರ ಐವರನ್ನು ದೆಹಲಿಯ ನ್ಯಾಯಾಲಯವೊಂದು ತಪ್ಪಿತಸ್ಥರು ಎಂದು ಘೋಷಿಸಿದೆ. ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಶರ್ ಅವರು ಈ ಸಂಬಂಧ ತೀರ್ಪು ನೀಡಿ ಎಚ್.ಸಿ.ಗುಪ್ತ, ವಿಕಾಸ್ ಮೆಟಲ್ ಅಂಡ್ ಪವರ್ ಲಿಮಿಟೆಡ್, ಕಲ್ಲಿದ್ದಲು ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್.ಕೋಫ್ರಾ ಹಾಗೂ ಆಗಿನ ನಿರ್ದೇಶಕ ಕೆ.ಸಿ.ಸಮ್ರಿಯಾ ಅವರನ್ನು ದೋಷಿಗಳು ಎಂದು ಘೋಷಿಸಿದರು.
ಈ ಪ್ರಕರಣದ ಆಪಾದಿತರ ಶಿಕ್ಷೆ ಪ್ರಮಾಣ ಡಿ.3ರಂದು ಪ್ರಕಟವಾಗಲಿದ್ದು, ಗರಿಷ್ಠ ಏಳು ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ.

Facebook Comments