ಯೋಗ ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

yoga modiಬ್ಯುನಸ್ ಏರಿಸ್, ನ.30-ಯೋಗ ವಿಶ್ವದ ಆರೋಗ್ಯ ಮತ್ತು ಶಾಂತಿಗಾಗಿ ಭಾರತ ನೀಡಿದ ಅಮೂಲ್ಯ ಕೊಡುಗೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.  ಜಿ-20 ಶೃಂಗಸಭೆಗಾಗಿ ಅರ್ಜೆಂಟೈನಾ ಪ್ರವಾಸದಲ್ಲಿರುವ ಮೋದಿ ರಾಜಧಾನಿ ಬ್ಯುಸನ್ ಏರಿಸ್‍ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಗ ಪಟುಗಳನ್ನು ಉದ್ದೇಶಿಸಿ ಮಾತನಾಡಿದರು. ಪರಿಪೂರ್ಣ ಸೌಖ್ಯತೆಗಾಗಿ ಭಾರತದ ಪ್ರಾಚೀನ ಯೋಗವನ್ನು ಅನುಸರಿಸುವುದರಿಂದ ಲಭಿಸುವ ಪ್ರಯೋಜನಗಳ ಬಗ್ಗೆ ಅವರು ಸಭೆಗೆ ವಿವರಿಸಿದರು.  ಪ್ರತಿಯೊಬ್ಬರೂ ಆರೋಗ್ಯ, ಸೌಖ್ಯತೆ ಮತ್ತು ಸಂತೋಷದಿಂದ ಇರಲು ಯೋಗ ಸಹಕಾರಿ ಮತ್ತು ರಹದಾರಿ ಎಂಬು ಮೋದಿ ವ್ಯಾಖ್ಯಾನಿಸಿದರು.

Facebook Comments