2020ರೊಳಗೆ ಎಲ್ಲರಿಗೂ ಸೂರು : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

c t raviಚಿಕ್ಕಮಗಳೂರು, ಡಿ.1- ಬಡವರಿಗೆ ಅನೇಕ ಯೋಜನೆಗಳನ್ನು ರೂಪಿಸಿರುವ ಕೇಂದ್ರ ಸರ್ಕಾರ ಹೌಸಿಂಗ್ ಫಾರ್ ಆಲ್ ಯೋಜನೆಯಡಿ 2020 ರ ಒಳಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲಾ ಬಡವರಿಗೆ ಮನೆ ಒದಗಿಸಲಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು. ಲಕ್ಯಾ ಹೋಬಳಿ ಮಟ್ಟದ ಜನ ಸಂಪರ್ಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಜನರ ಅಹವಾಲು ಸ್ವೀಕರಿಸಿ ನಿಗದಿತ ಸಮಯದಲ್ಲಿ ಸ್ಪಂದಿಸುವ ಉದ್ದೇಶದಿಂದ ಸರ್ಕಾರ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸುತ್ತಿದೆ ಇದರ ಪ್ರಯೋಜನವನ್ನು ಎಲ್ಲಾ ಗ್ರಾಮಸ್ಥರು ಪಡೆಯುವಂತೆ ತಿಳಿಸಿದರು.

ಫಸಲ್ ಭೀಮಾ ಯೋಜನೆಯಡಿ ತೋಟಗಾರಿಕೆ ವತಿಯಿಂದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ 2016-17ನೇ ಸಾಲಿನಲ್ಲಿ ರೈತರು 24,193 ಜನ ರೈತರು ನೋಂದಾವಣಿ ಮಾಡಿಸಿಕೊಂಡು ವಿಮಾ ಮೊತ್ತ 6.19 ಕೋಟಿ ಕಟ್ಟಿದ್ದರೂ ರೈತರಿಗೆ ಬೆಳೆ ವಿಮೆ ಪರಿಹಾರವಾಗಿ ಬಂದಿರುವುದು 49.25 ಕೋಟಿ , ರೈತರಿಗೆ ಜಮಾ ಆಗಿರುವುದು 48.60 ಕೋಟಿ ರೂ. ಜಮಾ ಆಗಿದೆ ಕೇವಲ 65 ಲಕ್ಷ ರೂ. ಮಾತ್ರ ಬಾಕಿ ಇದೆ ಎಂದರು.ಕೃಷಿ ಇಲಾಖೆ ವತಿಯಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ 373 ಜನ ರೈತರು ನೋಂದಾವಣಿ ಮಾಡಿಸಿಕೊಂಡು 1.75 ಲಕ್ಷ ರೂ. ವಿಮಾ ಕಂತು ಪಾವತಿಸಿದ್ದು , 281 ಜನ ರೈತರಿಗೆ ಫಸಲ್ ಭೀಮಾ ಯೋಜನೆಯಡಿ ಮಂಜೂರಾಗಿ ತಾಲ್ಲೂಕಿಗೆ 27.66 ಲಕ್ಷ ರೂ. ಬಂದಿದೆ ಎಂದರು. ಸಮಸ್ಯೆಗಳನ್ನು ಬಗೆ ಹರಿಸಲಾಗದೆ ಬೆನ್ನು ತೋರಿಸಿ ಓಡಿ ಹೋಗುವ ಶಾಸಕ ನಾನಲ್ಲ ಸೋಮಾರಿ ಶಾಸಕನು ಅಲ್ಲ, ಅಧಿಕಾರಿಗಳ ಹಂತದಲ್ಲಿ ಆಗುವ ಕೆಲಸಗಳನ್ನು ತಕ್ಷಣವೇ ಜನ ಸಾಮಾನ್ಯರಿಗೆ ಮಾಡಿಕೊಡಬೇಕು ತುಂಬಾ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತರಬೇಕು ಎಂದರು.

ಈ ಭಾಗಕ್ಕೆ ಶಾಶ್ವತ ನೀರು ಕೊಡಲು ಹಲವು ಮುಖಗಳಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಯಗಚಿ ಡ್ಯಾಮ್‍ನಿಂದ ಕುಡಿಯುವ ನೀರು ನೀಡಲು ಡಿಪಿಆರ್ ತಯಾರು ಮಾಡಿ ಪ್ರಸ್ತಾವನೆ ಕೊಡಿಸಲಾಗಿದೆ. ಎತ್ತಿನ ಹೊಳೆ ಯೋಜನೆಯಡಿ 1.2 ಟಿಎಂಸಿ ನೀರನ್ನು ಕುಡಿಯಲು ಉಳಿಸಿದ್ದಾರೆ ಎಂದರು. ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆಗಳನ್ನು ತುಂಬಿಸಲು ಅಯ್ಯನಕೆರೆ, ಮದಗೆರೆ ಕೆರೆಗಳನ್ನು ಒಳಗೊಂಡಂತೆ ತರಿಕೆರೆ, ಕಡೂರು, ಚಿಕ್ಕಮಗಳೂರಿನ ಬಯಲು ಸೀಮೆಯ ಕೆರೆಗಳನ್ನು ತುಂಬಲು ಡಿಪಿಆರ್ ಮಾಡಿ 900 ಕೋಟಿ ಅಂದಾಜು ಪಟ್ನಿ ನೀಡಲಾಗಿದೆ. ಇದರ ಮಂಜುರಾತಿಗೆ ಆಡಳಿತ ಪಕ್ಷದವರು ಶ್ರಮವಹಿಸಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದ್ದೇವೆ ಎಂದರು. ಜಿಪಂ ಕಾರ್ಯ ನಿರ್ವಾಹಣಾಧಿಕಾರಿ ಸತ್ಯಭಾಮ ಮಾತನಾಡಿ, ಜನ ಸಂಪರ್ಕ ಸಭೆಯಲ್ಲಿ ಬಂದ ಮನವಿಗಳನ್ನು ಕಾನೂನಿನ ಚೌಕಟ್ಟಿನ ಅಡಿ ನಿಗದಿತ ಕಾಲ ಮಿತಿಯೊಂದಿಗೆ ಬಗೆ ಹರಿಸಲಾಗುವುದು. ಗ್ರಾಮೀಣ ಜನರು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಜಿಪಂ ಅಧ್ಯಕ್ಷೆ ಸುಜಾತಕೃಷ್ಣಪ್ಪ, ಜಿಪಂ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಸದಸ್ಯರಾದ ಬೆಳವಾಡಿ ರವೀಂದ್ರ, ಬೀಕನಹಳ್ಳಿ ಸೋಮಶೇಖರ್, ತಾಪಂ ಅಧ್ಯಕ್ಷ ಜಯ್ಯಣ್ಣ, ಉಪಾಧ್ಯಕ್ಷ ರಮೇಶ್, ಸದಸ್ಯರಾ ಭವ್ಯ ನಟೇಶ್, ಮಲ್ಲೇಗೌಡ, ಈಶ್ವರಹಳ್ಳಿ ಮಹೇಶ್, ಮಲ್ಲಿಕಾರ್ಜುನ್, ಶುಭಸತ್ಯಮೂರ್ತಿ, ಗ್ರಾಪಂ ಅಧ್ಯಕ್ಷ ಕೆ.ಎಂ.ಕಾಂತರಾಜೆ ಅರಸ್, ಉಪಾಧ್ಯಕ್ಷರಾದ ಚಂದ್ರಕಲಾ ಯೋಗೀಶ್, ತಹಶಿಲ್ದಾರ್ ನಂದಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಹೆಚ್.ಡಿ.ರೇವಣ್ಣ, ಪಿಡಿಓ ಮಂಜೇಗೌಡ ಉಪಸ್ಥಿತರಿದ್ದರು.

Facebook Comments