ಚಿಕ್ಕಮಗಳೂರಿನಲ್ಲಿ ಕಾಫಿ ಡೇ ಕಾರ್ ರೇಸ್

ಈ ಸುದ್ದಿಯನ್ನು ಶೇರ್ ಮಾಡಿ

carಚಿಕ್ಕಮಗಳೂರು, ಡಿ.2- ಕಾಫಿ ಕಣಿವೆಯಲ್ಲಿ ಶರವೇಗದಲ್ಲಿ ಸಾಗುವ ಕಾರುಗಳ ರೋಮಾಂಚನ ಸಾಹಸ ದೃಶ್ಯಗಳು ಎಲ್ಲರನ್ನು ಮೈನವಿರೇಳಿಸುವಂತೆ ಮಾಡಿತು. ಚಿಕ್ಕಮಗಳೂರಿನಲ್ಲಿ ಕಾಫಿಡೇ ಪ್ರಾಯೋಜಕತ್ವದಲ್ಲಿ ಇಂಡಿಯನ್ ನ್ಯಾಷನಲ್ ಕಾರ್ ರೇಸ್ ಅನ್ನು ವೀಕ್ಷಿಸಲು ರಾಜ್ಯದ ಹಲವು ಕಡೆಗಳಿಂದ ನೂರಾರು ಮಂದಿ ಆಗಮಿಸಿದ್ದರು.

ಕಾಫಿ ತೋಟದ ಕಿರಿದಾದ ರಸ್ತೆಯಲ್ಲಿ ಮೈ ಜುಮ್ಮೆನ್ನು ವಂತೆ ಅತಿ ವೇಗವಾಗಿ ಸಾಗುವ ಕಾರುಗಳು ಚಾಲಕನ ಚಾಕಚಕ್ಯತೆಯಿಂದ ತಿರುವು ಪಡೆಯುವಾಗ ಏಳುವ ಧೂಳು ಹಾಗೂ ಸಾಗುವ ಭಂಗಿ ಎಲ್ಲರನ್ನು ಚಕಿತಗೊಳಿಸುತ್ತಿತ್ತು.

ಈ ಸ್ಪರ್ಧೆಯಲ್ಲಿ ದೇಶ-ವಿದೇಶದ ಪ್ರತಿಷ್ಠಿತ ವಾಹನ ಕಂಪೆನಿಗಳು ಪಾಲ್ಗೊಳ್ಳುತ್ತಿದ್ದು , ಚಾಲಕರ ಸಾಹಸಮಯ ದೃಶ್ಯಗಳನ್ನು ಸ್ಥಳೀಯರು ಕೂಡ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿಯುವ ಮೂಲಕ ಕ್ರೀಡೆಗೆ ರೂಪು ತುಂಬುತ್ತಿದ್ದಾರೆ. ಕೊರೆಯುವ ಚಳಿಯಲ್ಲೂ ಕೂಡ ಉತ್ಸಾಹ ಮಾತ್ರ ಕುಗ್ಗಿರಲಿಲ್ಲ. ಎರಡನೆ ದಿನವಾದ ಇಂದು 40ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ನಗರದ ಕಾಫಿ ಡೇ ಬಳಿಯಿಂದ ಆರಂಭಗೊಂಡ ರೇಸ್ ಬೇಲೂರಿನ ಕಂಬಾರಗೋಡು, ಚಂದ್ರಾಪುರದ ಕಾಫಿ ಕಣಿವೆಗಳ ಮಧ್ಯೆ ವೇಗದ ಕಾರುಗಳು ಹೋಗುವ ದೃಶ್ಯಗಳನ್ನು ಅಲ್ಲಲ್ಲಿ ನಿಂತು ಯುವ ಜನರು ಕಣ್ತುಂಬಿಕೊಂಡರು.

Facebook Comments