ಮಾಜಿ ಪ್ರಧಾನಿ ಕೊಲೆಗೆ ಸ್ಕೆಚ್ ಹಾಕಿದ್ದ ಕ್ರಿಕೆಟಿಗ ಉಸ್ಮಾನ್ ಸಹೋದರ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Usman--1

ಸಿಡ್ನಿ, ಡಿ.4- ಆಸ್ಟ್ರೇಲಿಯಾದ ನ್ಯೂ ಸೌತ್‍ವೇಲ್ಸ್‍ನ ಮಾಜಿ ಪ್ರಧಾನಿ ಮಾಲ್‍ಕೋಮ್ ಟರ್ನ್‍ಬುಲ್‍ರ ಹತ್ಯೆಯ ಸಂಚಿನ ಪ್ರಕರಣದಲ್ಲಿ ಆಸೀಸ್ ಕ್ರಿಕೆಟ್ ತಂಡದ ಆಟಗಾರ ಉಸ್ಮಾನ್ ಕ್ವಾಜಾರ ಸಹೋದರ ಆರ್ಸಾಕನ್ ಕ್ವಾಜಾ ರನ್ನು ಸಿಡ್ನಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಆಗಸ್ಟ್‍ನಲ್ಲಿ ಅರ್ಸಾಕನ್ ಕ್ವಾಜಾ, ವಿಶ್ವವಿದ್ಯಾಲಯದಲ್ಲಿ ತನ್ನ ಸಹಪಾಠಿಯಾಗಿದ್ದ ಮೊಹಮ್ಮದ್ ಕಮೀರ್ ನಿಜಾಮುದ್ದೀನ್‍ನೊಂದಿಗೆ ಸೇರಿ ಮಾಲ್‍ಕೋಮ್‍ರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಗುಮಾನಿಯ ಮೇಲೆ ಆತನನ್ನು ಬಂಧಿಸಲಾಗಿದೆ.

ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವ ನಜಾಮುದ್ದೀನ್‍ರನ್ನು ಈ ಪ್ರಕರಣದಲ್ಲಿ ಈಗಾಗಲೇ ಬಂಧಿಸಿದ್ದು, ಪೊಲೀಸರಿಗೆ ಸಿಕ್ಕಿರುವ ಟೆರರಿಸ್ಟ್‍ಗಳ ಪುಸ್ತಕದಲ್ಲಿರುವ ಕೆಲವು ಅಕ್ಷರಗಳು ಅರ್ಸಾಕನ್‍ರ ಬರವಣಿಗೆಗೆ ಹೋಲುವುದರಿಂದ ಆತನನ್ನು ಬಂಧಿಸಲಾಗಿದೆ ಎಂದು ನ್ಯೂ ಸೌತ್ ವೇಲ್ಸ್‍ನ ಸಹಾಯಕ ಕಮೀಷನರ್ ಮೈಕ್ ವಿಲ್ಲಿಂಗ್ ತಿಳಿಸಿದ್ದಾರೆ. ಇದೇ ವೇಳೆ ಅರ್ಸಾಕನ್‍ರವರು ಪ್ರಕರಣವೊಂದರಲ್ಲಿ ನಕಲಿ ದಾಖಲೆಯನ್ನು ನೀಡಿದ್ದು ಕೂಡ ಬೆಳಕಿಗೆ ಬಂದಿದೆ.

Facebook Comments