ಎಲ್ಲಾ ಮಾದರಿಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಗೌತಮ್‌ ಗಂಭೀರ್‌..!

ಈ ಸುದ್ದಿಯನ್ನು ಶೇರ್ ಮಾಡಿ

Gambhir--01

ನವದೆಹಲಿ. ಡಿ. 04 : ಭಾರತದ ಮಾಜಿ ಓಪನರ್‌ ಗೌತಮ್‌ ಗಂಭೀರ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದಲೂ ನಿವೃತ್ತಿ ಘೋಷಿಸಿದ್ದಾರೆ. ಇಂದು ದಿಢೀರ್ ನಿವೃತ್ತಿ ನಿರ್ಧಾರಕ್ಕೆ ಬಂದಿರುವ ಗೌತಮ್ ಸುದೀರ್ಘ ಪಯಣದ ಬಳಿಕ , “15 ವರ್ಷ ದೇಶಕ್ಕಾಗಿ ಕ್ರಿಕೆಟ್‌ ಆಡಿದ್ದೇನೆ. ಈ ಸುಂದರವಾದ ಆಟದಲ್ಲಿ ಆಡುವುದರಿಂದ ನಾನು ನಿವೃತ್ತಿ ಬಯಸುತ್ತಿದ್ದೇನೆ,” ಎಂದಿದ್ದಾರೆ.

ಗೌತಮ್ ಗಂಭೀರ್ ಅವರು ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ತಮ್ಮ ವಿದಾಯ ಭಾಷಣ ಮಾಡಿದ್ದಾರೆ. ತಮ್ಮ 15ವರ್ಷಗಳ ವೃತ್ತಿ ಬದುಕಿನಲ್ಲಿ ಜೊತೆಗಿದ್ದ ಆಟಗಾರರು, ಕುಟುಂಬಸ್ಥರು, ಅಭಿಮಾನಿಗಳು, ಕೋಚ್ ಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಫೇಸ್ ಬುಕ್ ನಲ್ಲಿ 11 ನಿಮಿಷದ ವಿಡಿಯೋ ಹಂಚಿಕೊಂಡಿರುವ ಗಂಭೀರ್ ಅವರು ತಮ್ಮ 15 ವರ್ಷಗಳ ವೃತ್ತಿ ಬದುಕಿನ ರಸ ನಿಮಿಷಗಳನ್ನು ನೆನದಿದ್ದಾರೆ. ಕಹಿ ಸಂದರ್ಭದಲ್ಲಿ ಜತೆಗಿದ್ದವರಿಗೆ ಧನ್ಯವಾದ ಹೇಳಿದ್ದಾರೆ. 37 ವರ್ಷ ವಯಸ್ಸಿನ ಗಂಭೀರ್ ಅವರು ಎರಡು ವಿಶ್ವಕಪ್ (ಐಸಿಸಿ ವಿಶ್ವಕಪ್ 2011 ಹಾಗೂ ವಿಶ್ವ ಟಿ20) ಗೆದ್ದಿದ್ದಲ್ಲದೆ, ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದನ್ನು ಅಭಿಮಾನಿಗಳು ಮರೆಯುವುದಿಲ್ಲ. ಐಪಿಎಲ್ ನಲ್ಲಿ ಎರಡು ಬಾರಿ ಕೋಲ್ಕತ್ತಾ ನೈಟ್ ರೈಡರ್ಶ್ ಗೆ ಕಪ್ ಎತ್ತಲು ನೆರವಾಗಿದ್ದರು. ಈಗ ರಾಜಕೀಯ ಪ್ರವೇಶದ ಬಗ್ಗೆ ಮಾತುಕತೆ ಕೇಳಿ ಬರುತ್ತಿವೆ.

1999 ರಿಂದ 2000ರದವರೆಗೆ ಸುಮಾರು ಎರಡು ದಶಕಗಳ ಕಾಲ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದ ಗೌತಮ್‌, 2016ರಲ್ಲಿ ಕೊನೆ ಬಾರಿ ಇಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡಿದ್ದರು. ಇದುವರೆಗೂ 58 ಟೆಸ್ಟ್‌ ಪಂದ್ಯಗಳಲ್ಲಿ ಆಡಿರುವ ಅವರು ಒಂಬತ್ತು ಶತಕ ಮತ್ತು 22 ಅರ್ಧಶತಕಗಳನ್ನು ಗಳಿಸುವ ಮೂಲಕ ಒಟ್ಟಾರೆ 4,154 ರನ್‌ಗಳನ್ನು ಸಿಡಿಸಿದ್ದಾರೆ.

ಇದಲ್ಲದೆ 147 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 39.68 ರ ಸರಾಸರಿಯಲ್ಲಿ 5238 ರನ್‌ಗಳಿಸಿದ್ದಾರೆ. 37 ಟಿ20 ಪಂದ್ಯಗಳಲ್ಲೂ ಕೂಡ ಗೌತಮ್‌ ಆಡಿದ್ದಾರೆ. ಇನ್ನು ಕೊನೆಯದಾಗಿ ಡಿ. 6ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ರಣಜಿ ಪಂದ್ಯವಾಡಲಿರುವ ಅವರು, ಎಲ್ಲಿ ಕ್ರಿಕೆಟ್ ಜೀವನ ಆರಂಭಿಸಿದರೋ ಅಲ್ಲಿಯೇ ನಿವೃತ್ತಿ ಪಡೆಯುತ್ತಿರುವುದು ವಿಶೇಷ.

Facebook Comments

Sri Raghav

Admin