ಭಾರತ-ಅಮೆರಿಕ ನಡುವೆ ರಕ್ಷಣಾ ಸಹಕಾರ ಬಲವರ್ಧನೆಗೆ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Nirmala Sitharaman IN USವಾಷಿಂಗ್ಟನ್, ಡಿ.4- ರಕ್ಷಣಾ ಕ್ಷೇತ್ರದಲ್ಲಿ ಅಮೆರಿವು ಭಾರತದ ಪ್ರಮುಖ ಪಾಲುದಾರಿಕೆ ರಾಷ್ಟ್ರ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂದಿನಿಂದ ಅಮೆರಿಕದಲ್ಲಿ ಐದು ದಿನಗಳ ಪ್ರವಾಸ ಆರಂಭಿಸಿರುವ ಅವರು, ರಕ್ಷಣಾ ಇಲಾಖೆ ಪೆಂಟಗನ್‍ನಲ್ಲಿ ಅಮೆರಿಕದ ತಮ್ಮ ಸಹವರ್ತಿ ಜೇಮ್ಸ್ ಮ್ಯಾಟಿಸ್ ಅವರಗೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಉಭಯ ದೇಶಗಳ ನಡುವೆ ರಕ್ಷಣಾ ಸಹಭಾಗಿತ್ವ ಮತ್ತು ಪಾಲುದಾರಿಕೆಯಲ್ಲಿ ಪರಸ್ಪರ ನಂಬಿಕೆ ಮತ್ತು ವಿಶ್ವಾಸ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ನಿರ್ಮಲಾ ತಿಳಿಸಿದರು.

ಅಮೆರಿಕದ ಹೊಸ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದಲ್ಲಿ ಎರಡೂ ದೇಶಗಳ ರಕ್ಷಣಾ ಬಾಂಧವ್ಯ ಬಹು ಪ್ರಾಮುಖ್ಯತೆ ಪಡೆದುಕೊಂಡಿದೆ. ಅನೇಕ ವರ್ಷಗಳಿಂದಲೂ ಭಾರತ ಮತ್ತು ಅಮೆರಿಕ ರಕ್ಷಣಾ ಕ್ಷೇತ್ರದ ಸಂಬಂಧಕ್ಕೆ ಭದ್ರ ಬುನಾದಿ ಹಾಕಲಾಗಿದೆ. ಈ ಕ್ಷೇತ್ರದಲ್ಲಿ ಅಮೆರಿಕ ಭಾರತದ ಪ್ರಮುಖ ಸಹಭಾಗಿತ್ವ ದೇಶವಾಗಿದೆ ಎಂದು ಅವರು ಹೇಳಿದರು.

ಸೇನಾ ಸಹಕಾರ, ರಕ್ಷಣಾ ಸಮಾಲೋಚನೆ, ವೈಜ್ಞಾನಿಕ ಸಹಭಾಗಿತ್ವ ಮತ್ತು ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ದಿ ಹಾಗೂ ಉದ್ಯಮ ಪಾಲುದಾರಿಕೆಗೆ ಎರಡೂ ದೇಶಗಳ ನಡುವೆ ಉತ್ತಮ ಸೇನಾ ಸಹಕಾರವಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು.

ನಿರ್ಮಲಾ-ಮ್ಯಾಟೀಸ್ ಭೇಟಿ:
ನಂತರ ಅಮೆರಿಕ ರಕ್ಷಣಾ ಸಚಿವ ಜೇಮ್ಸ್ ಮ್ಯಾಟೀಸ್ ಅವರನ್ನು ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ರಕ್ಷಣಾ ವಿಷಯಕ್ಕೆ ಸಂಬಂಧಪಟ್ಟಂತೆ ಮಹತ್ವದ ಚರ್ಚೆ ನಡೆಸಿದರು. ಉಭಯ ದೇಶಗಳ ನಡುವೆ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಬಿಗಿಗೊಳಿಸಲು ಉಭಯ ನಾಯಕರು ನಿರ್ಧರಿಸಿದರು.

Facebook Comments