ಮಶ್ರುಮ್ (ಅಣಬೆ) ಟೇಸ್ಟ್ ಅಷ್ಟೇ ಅಲ್ಲ, ಆರೋಗ್ಯಕ್ಕೂ ಸೂಪರ್

ಈ ಸುದ್ದಿಯನ್ನು ಶೇರ್ ಮಾಡಿ

Anabe--01

ಅಣಬೆ (ಅಥವಾ ನಾಯಿಕೊಡೆ) ಸಾಮಾನ್ಯವಾಗಿ ನೆಲದ ಮೇಲುಗಡೆ ಮಣ್ಣಿನ ಮೇಲೆ ಅಥವಾ ಅದರ  ಮೂಲದ ಮೇಲೆ ಫಲಬಿಡುವ ದ ತಿರುಳಿನಿಂದ ಕೂಡಿದ, ಬೀಜಕಗಳನ್ನು ಹೊರುವ  ಕಾಯ. ಅಣಬೆ ಪದವನ್ನು ಬಹುತೇಕ ಹಲವುವೇಳೆ ಕಾಂಡ (ತೊಟ್ಟು), ಶಿರಹೊದಿಕೆ (ಪೈಲಿಯಸ್), ಮತ್ತು ಶಿರಹೊದಿಕೆಯ ಕೆಳಭಾಗದ ಮೇಲೆ ಕಿವಿರುಗಳನ್ನು (ಪಟಲ) ಹೊಂದಿರುವ ಶಿಲೀಂಧ್ರಗಳಿಗೆ (ಬಸಿಡೀಯೊಮೈಕೋಟಾ, ಅಗ್ಯಾರಿಕೊಮೈಸೀಟೀಸ್) ಅನ್ವಯಿಸಲಾಗುತ್ತದೆ. ಈ ಕಿವಿರುಗಳು ನೆಲ ಅಥವಾ ಅದರ ನಿವಾಸಿ ಮೇಲ್ಮೆ ಮೇಲೆ ಹರಡಲು ಶಿಲೀಂಧ್ರಕ್ಕೆ ಸಹಾಯ ಮಾಡುವ ಸೂಕ್ಷ್ಮ ಬೀಜಕಗಳನ್ನು ಉತ್ಪಾದಿಸುತ್ತವೆ. ಅಗ್ಯಾರಿಕೇಲಿಸ್ ವಿಭಾಗದಲ್ಲಿ ಬರುವ ಬೆಸಿಡಿಯೋ ಬೀಜಾಣು ವರ್ಗಕ್ಕೆ ಸೇರಿವೆ. ಇದರಲ್ಲಿ ಸುಮಾರು 125 ಜಾತಿಗಳೂ 4000 ಪ್ರಭೇಧಗಳೂ ಇದ್ದು ಎಲ್ಲೆಡೆಯೂ ಪಸರಿಸಿವೆ. ಇವು ಹೆಚ್ಚು ತೇವಾಂಶ ಮತ್ತು ಆದ್ರತೆಯಿರುವ ವಾತಾವರಣದಲ್ಲಿ ಹುಲುಸಾಗಿ ಬೆಳೆಯುತ್ತವೆ. ಅಣಬೆಗಳು ಸಸ್ಯಗಳಂತೆ ಸಾವಯವಯುತ ಮಣ್ಣು ಮತ್ತು ಸತ್ತೆಗಳ ಮೇಲೆ ಬೆಳೆಯುತ್ತವೆ. ಅವುಗಳಿಗೆ ಸಸ್ಯಗಳಂತೆ ಹರಿತ್ತಿರುವುದಿಲ್ಲ. ಅಣಬೆಗಳ ರಚನಾಂಗಗಳು ಬಹಳ ಸರಳವಾಗಿದ್ದು ಸಸ್ಯಗಳಿಗಿಂತ ಭಿನ್ನವಾಗಿರುತ್ತವೆ. ಅಣಬೆಯ ಬೀಜಾಣು ಬಹಳ ಚಿಕ್ಕದಾಗಿದ್ದು ಸೂಕ್ಷ್ಮದರ್ಶಕಗಳ ಸಹಾಯದಿಂದ ವೀಕ್ಷಿಸಬಹುದು.

#ಪೌಷ್ಟಿಕಾಂಶಗಳು
ತಾಜಾ ತರಕಾರಿಯಲ್ಲಿರುವ ಪೌಷ್ಟಿಕಾಂಶಗಳು ಅಣಬೆಯಲ್ಲಿ ಇವೆ.ಕೆಲವು ಜಾತಿಯ ಅಣಬೆಗಳಲ್ಲಿ ಫೋಲಿಕ್ ಆಮ ಹೆಚ್ಚಾಗಿರುವುದೆಂದು ತಿಳಿದುಬಂದಿದೆ. ಈ ಆಮ್ಲವನ್ನು ರಕ್ತ ಕ್ಷಯ ದಿಂದ ನರಳುವ ರೋಗಿಗಳಿಗೆ ಕೊಡುತ್ತಾರೆ. 100-200ಗ್ರಾಂ ಒಣಗಿದ ಅಣಬೆಗಳಲ್ಲಿ ಒಬ್ಬ ಆರೋಗ್ಯವಂತನಿಗೆ ಬೇಕಾಗುವಷ್ಟು ಪೌಷ್ಟಿಕಾಂಶವಿರುವುದೆಂದು (ಸುಮಾರು 72%-82%  ಸಾರಜನಕ ಪ್ರೋಟೀನ್ ರೂಪದಲ್ಲಿದೆ) ಪ್ರಯೋಗಗಳಿಂದ ತಿಳಿದು ಬಂದಿದೆ.

#ಅಣಬೆಗಳ ವಿಧಗಳು
ಅಣಬೆಗಳಲ್ಲಿ ಖಾದ್ಯ ಅಣಬೆಗಳು ಮತ್ತು ವಿಷ ಅಣಬೆಗಳು ಎಂಬ ಎರಡು ವಿಧಗಳಿವೆ. ವಿಷ ಅಣಬೆಗಳು ತಿನ್ನಲು ಯೋಗ್ಯವಿರುವುದಿಲ್ಲ. ಅನೇಕ ಜಾತಿಯ ವಿಷ ಅಣಬೆಗಳು ಜೀವಕ್ಕೆ ಮಾರಕವಾಗಿವೆ. ಆದರೆ, ಖಾದ್ಯ ಅಣಬೆಗಳು ಪುಷ್ಟಿಕರ ಆಹಾರಾಂಶವನ್ನು ಹೊಂದಿದ್ದು, ರುಚಿಕರ ಮತ್ತು ಆರೋಗ್ಯಕರ ಭೋಜನಕ್ಕೆ ಅಮೂಲ್ಯ ತರಕಾರಿಗಳಾಗಿವೆ. ಮಳೆಗಾಲದ ದಿನಗಳಲ್ಲಿ ಕಾಡುಮೇಡುಗಳು ಮತ್ತು ಹೊಲಗದ್ದೆಗಳ ಬದುಗಳಲ್ಲಿ ಬೆಳೆಯುವ ಖಾದ್ಯ ಅಣಬೆಗಳನ್ನು ಪತ್ತೆ ಹಚ್ಚಿ ತಂದು ತರಕಾರಿಗಳಂತೆ ಉಪಯೋಗಿಸುವುದನ್ನು ಈಗಲೂ ಸಹ ನಮ್ಮ ರೈತ ಮಹಿಳೆಯರಲ್ಲಿ ವಾಡಿಕೆಯಲ್ಲಿದೆ. ಪ್ರತಿವರ್ಷ ಅಣಬೆಗಳು ಮೂಡುತ್ತಿದ್ದ ಜಾಗಕ್ಕೆ ಹೋಗಿ ಅಣಬೆಗಳನ್ನು ಹುಡುಕುವುದು ಇಂದಿಗೂ ಸತ್ಯಸಂಗತಿಯಾಗಿದೆ.

ಸ್ವಾಭಾವಿಕವಾಗಿ ಅಣಬೆಗಳು ವಿವಿಧ ಬಣ್ಣ ಮತ್ತು ರಚನೆಗಳನ್ನು ಹೊಂದಿದ್ದು ಮಾನವನಲ್ಲಿ ಕುತೂಹಲ ಕೆರಳಿಸಿವೆ. ಅವುಗಳ ಈ ವಿಸ್ಮಯ ರೂಪವನ್ನು ಪ್ರಕೃತಿಯಲ್ಲಿ ನೋಡಲು ಬಹಳ ಸುಂದರ. ಆದರೆ, ಇಂತಹ ಅಣಬೆಗಳು ವಿಷಕಾರಕಗಳೆಂಬುದನ್ನು ಮರೆಯಬಾರದು. ಏಕೆಂದರೆ, ಬಹುತೇಕ ವರ್ಣರಂಜಿತ ಅಣಬೆಗಳು ವಿಷ ಅಣಬೆಗಳ ಗುಂಪಿಗೆ ಸೇರಿರುತ್ತವೆ. ಆದ್ದರಿಂದ, ಸ್ವಾಭಾವಿಕವಾಗಿ ಬೆಳೆಯುವ ಅಣಬೆಗಳನ್ನು, ಖಾದ್ಯ ಅಣಬೆಯೆಂದು ಖಚಿತವಾಗಿ ತಿಳಿಯದಿದ್ದಲ್ಲಿ ಉಪಯೋಗಿಸಬಾರದು. ಹಾಗೆಂದು ವರ್ಣ ರಂಜಿತ ಅಣಬೆಗಳೆಲ್ಲ ವಿಷ ಅಣಬೆಗಳೆಂದು ಹೇಳಲಾಗುವುದಿಲ್ಲ. ಏಕೆಂದರೆ ಕೆಲವು ಜಾತಿಯ ಬಣ್ಣದ ಅಣಬೆಗಳು ಸಹ ಖಾದ್ಯ ಅಣಬೆಗಳಾಗಿವೆ. ಉದಾಹರಣಗೆ ಬೋಲಿಟಸ್ ಮತ್ತು ಪ್ಲೋರೋಟಸ್ ಇಯಸ್ ಅಣಬೆಗಳು ಬಣ್ಣ ಹೊಂದಿದ್ದು ತಿನ್ನಲು ಯೋಗ್ಯವಾಗಿವೆ.3]

# ಉಪಯೋಗಗಳು
• ಸಿಲೋಸೈಬೆ  ಮೆಕ್ಸಿಕಾನ ಎಂಬ ಜಾತಿಯ ಅಣಬೆ ಮೆಕ್ಸಿಕನರಿಗೆ ಪ್ರಿಯವೆನಿಸಿದೆ. ಈ ಜಾತಿಯಲ್ಲಿ ಹಲ್ಲೊಸಿನೊಜೆನಿಕ್ ಎಂಬ ರಾಸಾಯನಿಕ ವಸ್ತುವಿದೆ. ಈ ವಸ್ತುವನ್ನು ಮನೋರೋಗ ಚಿಕಿತ್ಸೆಯಲ್ಲಿ ಬಳಸುತ್ತಾರೆ.
• ಅಮಾನಿಟ ಮಸ್ ಕೇರಿಯಾ ಎಂಬ ಅಣಬೆಗಯನ್ನೂ ಕೆಲವು ಔಷಧಗಳಿಗೆ ಬಳಸುತ್ತಾರೆ.
• ಅಣಬೆಗಳಿಂದ ಹಲವು ಜೀವಿರೋಧಕಗಳನ್ನು ತಯಾರಿಸುವರು.
• ಅಗ್ಯಾರಿಕಸ್ ಕಂಪೆಸ್ಟ್ರಿಸ್ ಎಂಬ ಅಣಬೆ ವಿಷಮಶೀತಜ್ವರ,ರಕ್ತದ ಒತ್ತಡ ಮುಂತಾದುವನ್ನು ಗುಣಪಡಿಸುವುದರಲ್ಲಿ ಯಶಸ್ವಿಯಾಗಿದೆ.
• ಅಗ್ಯಾರಿಕಸ್  ಇಗ್ನೇರಿಯಸ್, ಅಗ್ಯಾರಿಕಸ್ ಆಲ್ಬಸ್,ಅಗ್ಯಾರಿಕಸ್ ಅಸ್ಟ್ರಾಯಟಸ್,ಅಗ್ಯಾರಿಕಸ್ ಕಂಪೆಸ್ಟ್ರಿಸ್ ಮುಂತಾದುವನ್ನು ಹೋಮಿಯೋಪತಿ ಔಷಧ ಪದ್ಧತಿಯಲ್ಲಿ ಉಪಯೋಗಿಸುತ್ತಾರೆ.

Facebook Comments