ಆಸ್ಟ್ರೇಲಿಯಾ ವಿರುದ್ಧ 1,000 ರನ್ ಸಿಡಿಸಲು ಕೊಹ್ಲಿ ಕಾತರ

ಈ ಸುದ್ದಿಯನ್ನು ಶೇರ್ ಮಾಡಿ

Virat Kohliಸಿಡ್ನಿ, ಡಿ.4- ಕ್ರಿಕೆಟ್ ಲೋಕದಲ್ಲಿ ದಾಖಲೆಯ ಮೇಲೆ ದಾಖಲೆ ನಿರ್ಮಿಸುತ್ತಿರುವ ನಂಬರ್ 1 ಆಟಗಾರ, ಟೀಂ ಇಂಡಿಯಾದ ನಾಯಕ ಮತ್ತೊಂದು ದಾಖಲೆಯನ್ನು ಸಾಧಿಸುವತ್ತ ಚಿತ್ತ ಹರಿಸಿದ್ದಾರೆ. ಡಿಸೆಂಬರ್ 6 ರಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲಲ್ಲಿ ವಿರಾಟ್ 8 ರನ್‍ಗಳನ್ನು ಗಳಿಸಿದರೆ ಆಸ್ಟ್ರೇಲಿಯಾದ ವಿರುದ್ಧ 1000 ರನ್‍ಗಳನ್ನು ಬಾರಿಸಿದ ದಾಖಲೆಯನ್ನು ಸೃಷ್ಟಿಸಲಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ 8 ಟೆಸ್ಟ್ ಪಂದ್ಯಗಳಿಂದ 992 ರನ್‍ಗಳನ್ನು ಗಳಿಸಿದ್ದು ಅದರಲ್ಲಿ ಐದು ಶತಕಗಳು, ಎರಡು ಅರ್ಧಶತಗಳು ಸೇರಿದ್ದು 169 ಸರ್ವಶ್ರೇಷ್ಠ ರನ್ ಆಗಿದೆ.

ಸಚಿನ್, ದ್ರಾವಿಡ್ ದಾಖಲೆ ಪುಡಿಗಟ್ಟುವರೇ ವಿರಾಟ್..?
ಆಸ್ಟ್ರೇಲಿಯಾ ವಿರುದ್ಧ ಈಗಾಗಲೇ ಕ್ರಿಕೆಟ್‍ನ ದಿಗ್ಗಜರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (1809 ರನ್) ಗಳಿಸಿ ಆ ತಂಡದ ವಿರುದ್ಧ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರನಾಗಿ ಗುರುತಿಸಿಕೊಂಡಿದ್ದರೆ, ಟೆಸ್ಟ್ ಸ್ಪೆಷಾಲಿಸ್ಟ್‍ಗಳಾದ ವಿವಿಎಸ್ ಲಕ್ಷ್ಮಣ್ (1236 ರನ್) ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ (1143 ರನ್) ನಂತರ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾದ ವಿರುದ್ಧ ಭಾರತ ತಂಡವು ಆಡಿಲೇಡ್, ಪರ್ತ್, ಮೆಲ್ಬೋರ್ನ್ ಹಾಗೂ ಸಿಡ್ನಿಗಳಲ್ಲಿ 4 ಟೆಸ್ಟ್ ಪಂದ್ಯಗಳನ್ನಾಡಿದ್ದು ವಿರಾಟ್ ಕೊಹ್ಲಿ ಭಾರತದ ಪರ ಆಸ್ಟ್ರೇಲಿಯಾ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದು ರೂಪುಗೊಳ್ಳುವವರೇ ಎಂಬುದನ್ನು ಕಾದು ನೋಡಬೇಕಾಗಿದೆ.

Facebook Comments