ಅಂಗವಿಕಲರ ಸಂಸ್ಥೆ ಸಮರ್ಥನಂನಿಂದ ಬೆಂಗಳೂರು ವಾಕಥಾನ್

ಈ ಸುದ್ದಿಯನ್ನು ಶೇರ್ ಮಾಡಿ

ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಅಂಗವಿಕಲರ ಸಂಸ್ಥೆ ಸಮರ್ಥನಂ ನಿಂದ 14 ನೇ ಬೆಂಗಳೂರು ವಾಕಥಾನ್ ನ್ನು 8 ಡಿಸೆಂಬರ್ 2018 ರಂದು ಆಯೋಜಿಸಲಾಗಿದೆ. ಟಿ ಇ ಕನೆಕ್ಟಿವಿಟಿ ಸಂಸ್ಥೆಯ ಸಹಯೋಗದಲ್ಲಿ ವಾಕಥಾನ್ ಆಯೋಜಿಸಲಾಗಿದ್ದು ಡಿಜಿಟಲ್ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವುದು ವಾಕಥಾನ್ ಉದ್ದೇಶವಾಗಿದೆ.

ಬೆಂಗಳೂರಿನ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ನಡೆಯಲಿರುವ ಈ ವಾಕಥಾನ್ ನ ಈ ಬಾರಿಯ ಪರಿಕಲ್ಪನೆ ‘ವಾಕ್ ಫಾರ್ ಡಿಜಿಟಲ್ ಇನ್ಕ್ಲೂಶನ್’ ಆಗಿದೆ. ವಿಶೇಷ ಅವಶ್ಯಕತೆ ಇರುವ ಜನರಿಗೂ ಕೂಡಾ ಡಿಜಿಟಲ್ ಸಾಕ್ಷರತೆಯ ಅನಿವಾರ್ಯತೆ ಇದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ವಾಕಥಾನ್ ನ ಗುರಿಯಾಗಿದೆ.

ಈ ವಾಕಥಾನ್ ನಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ನೊಂದಣಿಗಾಗಿ 9206025578 ಗೆ ಮಿಸ್ ಕಾಲ್ ಕೊಡಬಹುದಾಗಿದೆ. ಅಲ್ಲದೆ, ಗೆ ಭೇಟಿ ನೀಡಬಹುದಾಗಿದೆ.
ವಾಕ್ ಏ ಥಾನ್ ವಿವರಗಳು :
ಟಿಇ ಕನೆಕ್ಟಿವಿಟಿ ಬೆಂಗಳೂರು ವಾಕ್ ಏ ಥಾನ್
ದಿನಾಂಕ: ಶನಿವಾರ 8 ನೇ ಡಿಸೆಂಬರ್ 2018
ಸಮಯ ಮಧ್ಯಾಹ್ನ 3 ಗಂಟೆ
ಹೆಚ್ಚಿನ ಮಾಹಿತಿಗಾಗಿ 9206025578

Facebook Comments

Sri Raghav

Admin