ಜಾಹಿರಾತು ಆಕರ್ಷಿಸುವ ಸುದ್ದಿಗಳಿಗೆ ಮಹತ್ವ ಹೆಚ್ಚಾಗಿರುವುದು ಅಪಾಯಕಾರಿ

ಈ ಸುದ್ದಿಯನ್ನು ಶೇರ್ ಮಾಡಿ

ct raviಚಿಕ್ಕಮಗಳೂರು, ಡಿ.5- ಸಂಸ್ಕoತಿಯೇ ಮಾಧ್ಯಮವಾಗಬೇಕು ಎಂಬುದು ಸಮಾಜದ ಬಯಕೆ. ಮಾಧ್ಯಮದಲ್ಲಿ ಸಂಸ್ಕoತಿ ಇದೆಯೋ, ಸಂಸ್ಕoತಿಯಲ್ಲಿ ಮಾಧ್ಯಮವಿದೆಯೋ ಎಂಬುದು ಜಿಜ್ಞಾಸೆಯ  ವಿಚಾರವಾಗಿದೆ ಎಂದು ಶಾಸಕ ಸಿ.ಟಿ.ರವಿ ನುಡಿದರು.   ಮಾಧ್ಯಮ ಸಂಸ್ಕoತಿ ಪ್ರತಿಷ್ಠಾನ ದಶಮಾನೋತ್ಸವ ಸಂಭ್ರಮ ವರ್ಷಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಅವರು ವಾರ್ಷಿಕ ಮಾತನಾಡಿದರು. ಜನತಂತ್ರದಲ್ಲಿ 4ನೆ ಸ್ಥಾನ ಪಡೆದ ಮಾಧ್ಯಮ ಪ್ರಭಾವಿ. ಸೇವೆಯಾಗಿದ್ದ ಮಾಧ್ಯಮ ಇಂದು ಉದ್ಯಮವಾಗಿದೆ. ಪರಿಣಾಮ ಮಾಧ್ಯಮ ಸ್ವಭಾವ ರೂಪಾಂತರಗೊಂಡಿದೆ. ಉದ್ಯಮ ಆದಾಗ ಅಲ್ಲಿ ಟಿಆರ್‍ಪಿಗೆ ಬೆಲೆಹೆಚ್ಚು. ಜಾಹಿರಾತು ಆಕರ್ಷಿಸುವ ಸುದ್ದಿಗಳಿಗೆ ಮಹತ್ವ ಹೆಚ್ಚಾಗಿರುವುದು ಅಪಾಯಕಾರಿ. ಸಾಮಥ್ರ್ಯವಿಲ್ಲದ ಕೆಲವು ಜನ ಬ್ಲಾಕ್‍ಮೇಲ್‍ಗೂ ಇಳಿದಿರುವುದು ಕಾಣುತ್ತಿದ್ದೇವೆ. ಕೆಲ ಸಂದರ್ಭಗಳಲ್ಲಿ ಆಧಾರವಿಲ್ಲದ ಸುದ್ದಿ ಇಡೀ ದಿನವನ್ನು ಆಕ್ರಮಿಸಿಕೊಂಡಿರುವುದೂ ಇದೆ. ಕಣ್ಣಿಗೆ ಕಂಡಿದ್ದೆಲ್ಲ ಸತ್ಯ ಅಲ್ಲ. ಟಿವಿ, ಪತ್ರಿಕೆಯಲ್ಲಿ ಬಂದಿದ್ದೆಲ್ಲ ನಿಜವಲ್ಲ ಎಂಬ ಭಾವನೆಯಿಂದ ಸಾರ್ವಜನಿಕರು ಪರಾಮರ್ಶಿಸುವ ಸಂದರ್ಭ ನಿರ್ಮಾಣವಾಗಿದೆ. ಜಿಲ್ಲೆ ಸೇರಿದಂತೆ ನಾಡಿನಲ್ಲಿ ಅತ್ಯುತ್ತಮ ಮಲ್ಯಾಧಾರಿತ ಪತ್ರಕರ್ತರ ಪಡೆಯೂ ಇದೆ ಎಂದರು.

ದಶಮಾನೋತ್ಸವ ವರ್ಷಾಚರಣೆ ಉದ್ಘಾಟಿಸಿದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮಾಧ್ಯಮ ವ್ಯವಸ್ಥೆಯನ್ನು ಸರಿದಾರಿಗೆ ಕರೆದೊಯ್ಯಬೇಕು. ತಾವೂ ಸೇರಿದಂತೆ ಎಲ್ಲರನ್ನೂ ತಿದ್ದಬೇಕು. ತಪ್ಪು ಎತ್ತಿ ಹಿಡಿದಾಗ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಹೇಳುವ ರೀತಿ ಬಳಸುವ ಭಾಷೆ, ಶಬ್ದ ಮುಖ್ಯವಾಗುತ್ತದೆ ಎಂದರು. ಮಾಧ್ಯಮಗಳು ಎತ್ತ ಸಾಗುತ್ತಿವೆ ಎಂಬ ಬಗ್ಗೆ ಆತ್ಮಾವಲೋಕನೆ ಆಗಬೇಕು. ಟಿವಿಯಲ್ಲಂತೂ ಸ್ಪರ್ಧಾತ್ಮಕತೆ ವಿಪರೀತವಾಗಿ ಆತಂಕ ಮೂಡಿಸುತ್ತದೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದಾಗ ಒಂದು ರೀತಿಯ ಭಯ-ಗೌರವದ ಭಾವ ಹಿಂದೆ ಮೂಡುತ್ತಿತ್ತು. ಸಣ್ಣ ವಯಸ್ಸಿನ ನಿರೂಪಕರೂ ಇಂದು ಅವರ ಅಜ್ಜ-ಅಜ್ಜಿ ವಯಸ್ಸಿನ ಹಿರಿಯ ನಾಯಕರನ್ನು ಏಕವಚನದಲ್ಲಿ ಸಂಬೋಧಿಸುವ ಪರಿಪಾಠವನ್ನು ಕಾಣುತ್ತಿದ್ದೇವೆ ಎಂದು ವಿಷಾದಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿದರು. ಮಾಧ್ಯಮ ಸಂಸ್ಕoತಿ ಪ್ರತಿಷ್ಠಾನದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಮಾತನಾಡಿ, ಪತ್ರಿಕೆಗಳು ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನೂ ಬರೆಯುತ್ತವೆ. ಸದಭಿಪ್ರಾಯದಿಂದ ಅವುಗಳನ್ನು ಸ್ವೀಕರಿಸಬೇಕು. ಸಂಸ್ಕoತಿಗೆ ಪೂರಕವಾದ ಸುದ್ದಿಗಳು ಆದ್ಯತೆ ಪಡೆಯಬೇಕು ಎಂದರು. ನಗರಸಭಾ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್, ಚಿಕ್ಕಮಗಳೂರು ಗಾಲ್ಫ್‍ಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ, ಮಾಧ್ಯಮ ಸಂಸ್ಕoತಿ ಪ್ರತಿಷ್ಠಾನ ರೂವಾರಿ ಪ್ರಭುಲಿಂಗಶಾಸ್ತ್ರಿ ಮಾತನಾಡಿದರು.

ಸ.ಗಿರಿಜಾಶಂಕರ್ ಹಾಗೂ ಆಸ್ಟ್ರೇಲಿಯಾದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಕನ್ನಡತಿ ಎಂ.ಆರ್.ಸುರೇಖಾ ಅನಿಲ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ತಾ.ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಿ, ವಿದ್ವಾನ್ ಡಾ.ದಯಾನಂದಮೂರ್ತಿ ಶಾಸ್ತ್ರಿ, ಬಿ.ಪಿ.ಶಿವಮೂರ್ತಿ, ಪ್ರತಿಷ್ಠಾನದ ಕಾರ್ಯದರ್ಶಿ ಸುಮಿತ್ರಾಶಾಸ್ತ್ರಿ, ಸಂಚಾಲಕರಾದ ಲೋಕೇಶ್ವರಾಚಾರ್, ದೀಪಕ್‍ದೊಡ್ಡಯ್ಯ, ಉಜ್ವಲ್‍ಪಡುಬಿದ್ರಿ ಉಪಸ್ಥಿತರಿದ್ದರು.

Facebook Comments