ಭಾರತದ ನಂ.1 ಶ್ರೀಮಂತ ಸೆಲೆಬ್ರೆಟಿ ಯಾರು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Celevbrati--01

ಮುಂಬೈ, ಡಿ.5- ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್‍ಖಾನ್ ಸತತ ಮೂರನೆ ಬಾರಿ ಭಾರತದ ಅತ್ಯಂತ ಶ್ರೀಮಂತ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೋಬ್ರ್ಸ್ ಪ್ರಕಟಿಸಿರುವ ಭಾರತದ ನೂರು ಶ್ರೀಮಂತ ಖ್ಯಾತನಾಮರ ಪಟ್ಟಿಯಲ್ಲಿ ಸಲ್ಲು ಮತ್ತೆ ಅಗ್ರಸ್ಥಾನದಲ್ಲಿದ್ದಾರೆ. 52 ವರ್ಷದ ಸಲ್ಮಾನ್ ಅ.1, 2017 ರಿಂದ ಸೆ.30, 2018ರ ಅವಧಿ ನಡುವೆ ಸಿನಿಮಾಗಳು, ಟಿವಿ ನಿರೂಪಣೆ ಮತ್ತು ಜಾಹೀರಾತು ಮೂಲಕ 253.25 ಕೋಟಿ ರೂ.ಗಳನ್ನು ಗಳಿಸಿದ್ದಾರೆ. ಇದು ಭಾರತದ ನಟರೊಬ್ಬರು ಗಳಿಸಿದ ಅತ್ಯಧಿಕ ವರಮಾನವಾಗಿದೆ.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 2ನೆ ಸ್ಥಾನ ಪಡೆದಿದ್ದಾರೆ. ಅವರ ಗಳಿಕೆ 228.09 ಕೋಟಿ ರೂ. ಆ್ಯಕ್ಷನ್‍ಸ್ಟಾರ್ ಅಕ್ಷಯ್‍ಕುಮಾರ್ 3ನೆ ಸ್ಥಾನದಲ್ಲಿದ್ದಾರೆ. ಇವರ ಗಳಿಕೆ 185 ಕೋಟಿ ರೂ. ಇದೇ ಅವಧಿಯಲ್ಲಿ ನೀಳಕಾಯದ ಬೆಡಗಿ ದೀಪಿಕಾ ಪಡುಕೋಣೆ 112.8 ಕೋಟಿ ರೂ. ವರಮಾನ ಗಳಿಕೆಯೊಂದಿಗೆ 4ನೆ ಸ್ಥಾನದಲ್ಲಿದ್ದಾರೆ.  ಖ್ಯಾತ ಕ್ರಿಕೆಟ್ ಪಟು ಮಹೇಂದ್ರಸಿಂಗ್ ಧೋನಿ 5ನೆ ಸ್ಥಾನದಲ್ಲಿದ್ದಾರೆ. ಇವರ ಗಳಿಕೆ 101.77 ಕೋಟಿ ರೂ.

# ಪಟ್ಟಿಯಲ್ಲಿರುವ ಇತರ ಖ್ಯಾತನಾಮರು:
ಅಮೀರ್ ಖಾನ್- 6ನೆ ಸ್ಥಾನ (97.5 ಕೋಟಿ ರೂ.)
ಅಮಿತಾಬ್ ಬಚ್ಚನ್- 7ನೆ ಸ್ಥಾನ (96.17 ಕೋಟಿ ರೂ.)
ರಣವೀರ್‍ಸಿಂಗ್- 8ನೆ ಸ್ಥಾನ (84.67 ಕೋಟಿ ರೂ.)
ಸಚಿನ್ ತೆಂಡೂಲ್ಕರ್- 9ನೆ ಸ್ಥಾನ (80 ಕೋಟಿ ರೂ.)
ಅಜಯ್ ದೇವಗನ್- 10ನೆ ಸ್ಥಾನ (74.6 ಕೋಟಿ ರೂ.)
ಬಾಲಿವುಡ್ ಕಿಂಗ್‍ಕಾನ್ ಶಾರುಕ್‍ಖಾನ್ 2ನೆ ಸ್ಥಾನದಿಂದ 13ನೆ ಸ್ಥಾನಕ್ಕೆ (56 ಕೋಟಿ) ಕುಸಿದಿದ್ದಾರೆ.
ದೇಸಿಗರ್ಲ್ ಪ್ರಿಯಾಂಕಾ ಚೋಪ್ರಾ ಕಳೆದ ವರ್ಷ 7ನೆ ಸ್ಥಾನದಲ್ಲಿದ್ದರು. ಆದರೆ, ಈ ಬಾರಿ ಕೇವಲ 18 ಕೋಟಿ ರೂ. ಗಳಿಕೆಯೊಂದಿಗೆ 49ನೆ ಸ್ಥಾನಕ್ಕೆ ಕುಸಿದಿದ್ದಾರೆ.

Facebook Comments

Sri Raghav

Admin